ಮಡಿಕೇರಿ ನ.22 NEWS DESK : ಮೂರ್ನಾಡು ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ 2023-2024ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ರಿಯಾಜ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಮುಂದಿನ ವರ್ಷದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಎನ್.ಕೆ.ಶಶಿಧರ್ ಪ್ರಾರ್ಥಿಸಿದರು. ನಿರ್ದೇಶಕರಾದ ರಶೀಕ ಉತ್ತಪ್ಪ ವಂದಿಸಿದರು. ಸಭೆಯಲ್ಲಿ 2024 -25ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಕೆ.ಎ.ಖಾದರ್ ಹಾಗೂ ಕಾರ್ಯದರ್ಶಿಯಾಗಿ ಎನ್. ಕೆ.ಶಶಿಧರ್ ಪುನರ್ ಆಯ್ಕೆಯಾದರು. ಉಳಿದ ಕಾರ್ಯಕಾರಿ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಆರ್.ವಿನೋದ್, ಗೌರವ ಅಧ್ಯಕ್ಷರಾಗಿ ಟಿ.ಎಸ್.ಭೀಮಯ್ಯ, ಸಹ ಕಾರ್ಯದರ್ಶಿಯಾಗಿ ರಾಜೇಶ್ ಪಾರೇಮಜಲು, ಖಜಾಂಚಿಯಾಗಿ ಇಲಿಯಾಸ್, ಉಳಿದ ನಿರ್ದೇಶಕರಾಗಿ ಪಿ.ಎ.ಅಬೂಬಕ್ಕರ್, ರಶೀಕ ಉತ್ತಪ್ಪ, ದೊಡ್ಡ ಸ್ವಾಮಿ, ಸಾದಿರ್, ಮುರುಗೇಶ್, ನಿಚ್ಚು, ಎಂ.ಎಂ.ಉಮೇಶ, ಸತೀಶ, ರಾಜು ಜೋಷ್ ಆಯ್ಕೆಯಾದರು.
ಲೇಖಕ: admin
ಮಡಿಕೇರಿ ನ.22 NEWS DESK : ನಾಪೋಕ್ಲು ನಿವಾಸಿ ಕಲಿಯಂಡ ಸಾಬು ಅಯ್ಯಣ್ಣ (80) ಇಂದು ನಿಧನರಾದರು. ನಾಪೋಕ್ಲುವಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿಯ ಸ್ಥಾಪಕ ಅಧ್ಯಕ್ಷ, ಹಾಕಿ ಎನ್‌ಐಎಸ್ ತರಬೇತಿದಾರ, ಬಿಇಎಂಎಲ್ ಆಟಗಾರ ಸಾಬು ಅಯ್ಯಣ್ಣ ಅವರ ಅಂತ್ಯಕ್ರಿಯೆ ಇಂದು (ನ.22) ಸಂಜೆ 5 ಗಂಟೆಗೆ ನಾಪೋಕ್ಲು ಸ್ವಗೃಹದಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಡಿಕೇರಿ ನ.22 NEWS DESK : ರಾಜ್ಯದಲ್ಲಿ ಗೊಂದಲ ಸೃಷ್ಟಿಸಿರುವ “ವಕ್ಫ್ ಕಾಯ್ದೆ” ಯನ್ನು ಹಿಂಪಡೆಯಬೇಕು ಮತ್ತು ವಿವಿಧ ಹಗರಣಗಳ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಜಂಟಿ ಸಮಿತಿಯನ್ನು ರಚಿಸಿದ್ದು, ಅದು ಸೂಚಿಸುವ ಬದಲಾವಣೆಗಳಿಗೆ ರಾಜ್ಯ ಒಪ್ಪಿಗೆಯನ್ನು ನೀಡಬೇಕು. ಮಡಿಕೇರಿಯ ರಾಜರ ಗದ್ದುಗೆ ಆಸ್ತಿಯ ಅತಿಕ್ರಮಣವನ್ನು ತೆರವುಗೊಳಿಸಬೇಕು. ಜಿಲ್ಲೆಯ ಸಿ ಮತ್ತು ಡಿ ಜಮೀನನ್ನು ಅರಣ್ಯವೆಂದು ಘೋಷಣೆ ಮಾಡುವ ಪ್ರಯತ್ನವನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಕಳೆದ ಚುನಾವಣೆಯ ಸಂದರ್ಭವೆ ಬಿಜೆಪಿ ಪಕ್ಷವು, ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಬೆಂಬಲಿಸಿದಲ್ಲಿ ಉಂಟಾಗುವ ಸಂಕಷ್ಟಗಳ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ನೀಡಿತ್ತು.…
ಮಡಿಕೇರಿ ನ.22 NEWS DESK : ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಮನವಿಗೆ ತಕ್ಷಣವೇ ಸ್ಪಂದಿಸಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಮಡಿಕೇರಿಯಿಂದ ದೇವಸ್ತೂರು ಕಾಲೂರು, ನಿಡವಟ್ಟು , ಬಾರಿ ಬೆಳ್ಳಚ್ಚು ಗ್ರಾಮಕ್ಕೆ ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿತ್ತು. ದೇವಸ್ತೂರಿನಿಂದ ಬಾರಿಬೆಳ್ಳಚ್ಚು ವರೆಗಿನ ಪ್ರದೇಶ ದುರ್ಗಮವಾಗಿದ್ದು, ವಿಪರೀತ ಮಳೆ ಹಾಗೂ ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಸಲುವಾಗಿ ಜೀಪ್ ಓಡಾಟ ಹೆಚ್ಚಾಗಿ ರಸ್ತೆ ಸಂಪೂರ್ಣ ಹದಗೆಟ್ಟು ಹದಗೆಟ್ಟಿದ್ದರಿಂದ ಕಳೆದ ಮೂರು ದಿನಗಳಿಂದ ಬಸ್ ಅರ್ಧ ದಾರಿಗೆ ಮಾತ್ರ ಸಂಚರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಸುಮಾರು ಎರಡು ಕಿ.ಮೀ.ದೂರದಿಂದ ನಡೆದುಕೊಂಡು ಬಂದು ಬಸ್ ಹತ್ತಬೇಕಾಯಿತು. ಆದ್ದರಿಂದ ವಿದ್ಯಾರ್ಥಿಗಳೆಲ್ಲಾ ಸೇರಿ ಕಾಂಗ್ರೆಸ್ ಪ್ರಮುಖ ತೆನ್ನಿರ ಮೈನಾ ಅವರ ಮೂಲಕ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಮನವಿಯನ್ನು ಸಲ್ಲಿಸಿ, ತಮ್ಮ ಅಳಲನ್ನು ತೋಡಿಕೊಂಡರು. ಮಕ್ಕಳ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು ಲೋಕೋಪಯೋಗಿ ಅಧಿಕಾರಿಗಳಿಗೆ ತಕ್ಷಣವೇ ರಸ್ತೆ…
ಮಡಿಕೇರಿ ನ.22 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎ.ಎಲ್.ಜಿ ಕ್ರೆಸೆಂಟ್ ಶಾಲೆ, ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್ ಹಾಗೂ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ನ.23 ರಂದು ಮಡಿಕೇರಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಮತ್ತು ಗೀತಗಾಯನ ಕಾರ್ಯಕ್ರಮ ನಡೆಯಲಿದೆ. ನಗರದ ಮಹದೇವಪೇಟೆಯ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಎಲ್ ಜಿ ಕ್ರೆಸೆಂಟ್ ಶಾಲೆಯ ಅಧ್ಯಕ್ಷ ನಿಜಾಮುದ್ದಿನ್ ಸಿದ್ದೀಖ್ , ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ, ಕೊಡಗು ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್, ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್…
ಮಡಿಕೇರಿ ನ.22 NEWS DESK : ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ತಾಯಿ ಗಂಗಮ್ಮ ನಿಧನಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಸಂತಾಪ ಸೂಚಿಸಿದರು. ಸ್ವಾಮೀಜಿಯವರಿಗೆ ಕರೆ ಮಾಡಿ ಸಂತಾಪ ಸೂಚಿಸಿದ ಶಾಸಕರು ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಭಗವಂತ ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.
ಮಡಿಕೇರಿ ನ.21 NEWS DESK : ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಡಿ.1 ರಿಂದ ಆರಂಭವಾಗಲಿದ್ದು, ಜಿಲ್ಲೆಯ ರೈತರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕೋರಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಆದೇಶದಂತೆ 2024-25 ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲಾಗುತ್ತಿದ್ದು, ಡಿ.1 ರಿಂದ ಆರಂಭವಾಗಲಿದ್ದು, ಈ ಅವಕಾಶವನ್ನು ರೇತರು ಬಳಸಿಕೊಳ್ಳುವಂತೆ ಮನವಿ ಮಾಡಿದರು. ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಯನ್ನು ಖರೀದಿ ಏಜೆನ್ಸಿ ಯನ್ನಾಗಿ ಸರಕಾರ ನೇಮಕ ಮಾಡಿದ್ದು ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯಲಿದೆ ಎಂದು ಅವರು ತಿಳಿಸಿದರು. ಕೇಂದ್ರ ಸರ್ಕಾರದ ಬೆಂಬಲ ಬೆಲೆಯಡಿ ಡಿಸೆಂಬರ್ 1 ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಿದ್ದು,…
ಬೆಂಗಳೂರು ನ.21 NEWS DESK : ಪಡಿತರ ಚೀಟಿ ಪರಿಷ್ಕರಣೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ, ‘ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ, ಬಿಪಿಎಲ್, ಎಪಿಎಲ್ ಕಾರ್ಡ್ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು 1,50,59,431 ಕಾರ್ಡ್ಗಳಿವೆ. ಮುಖ್ಯಮಂತ್ರಿಗಳು ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಎಲ್ಲಾ (ಬಿಪಿಎಲ್) ಕಾರ್ಡ್‌ಗಳನ್ನು ಮರುಸ್ಥಾಪಿಸಬೇಕು ಎಂದು ನಿರ್ಧಾರ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸದ್ಯ 1,02,509 ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಿದ್ದೇವೆ. ಉಳಿದ ಎಲ್ಲ ಬಿಪಿಎಲ್ , ಎಪಿಎಲ್ ಕಾರ್ಡ್‌ಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮಡಿಕೇರಿ ನ.21 NEWS DESK : ಗಾಯಾಳುವಿನ ಜೀವ ಸಂರಕ್ಷಣೆ ಮತ್ತು ರೋಗಿಗೆ ಅನಿವಾಯ೯ತೆಯಾದ ಸಂದಭ೯ದಲ್ಲಿ ನೀಡಲ್ಪಡುವ ರಕ್ತವನ್ನು ದಾನವಾಗಿ ನೀಡುವ ಮಹತ್ವದ ಸೇವೆ ಕೈಗೊಳ್ಳುವ ರಕ್ತದಾನಿಗಳೇ ನಿಜವಾದ ಸೂಪರ್ ಹೀರೋಗಳಾಗಿದ್ದಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್.ಟಿ. ಅಭಿಪ್ರಾಯಪಟ್ಟಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ 7ನೇ ವಾಷಿ೯ಕೋತ್ಸವ ಕಾಯ೯ಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿದ ಅನಿಲ್ ಹೆಚ್.ಟಿ, ಸಮಾಜಮುಖಿಯಾದ ಮಾನವನಿಗೆ ಎಲ್ಲಾ ರೀತಿಯಲ್ಲಿಯೂ ತೃಪ್ತಿ ನೀಡಬಲ್ಲ ಕಾಯ೯ವಾಗಿ ರಕ್ತದಾನದಂಥ ಸೇವೆ ಕಂಡುಬರುತ್ತದೆ, ರಕ್ತದಾನದ ಮೂಲಕ ದಾನಿಯು ಮತ್ತೊಂದು ಜೀವವನ್ನು ಸಂರಕ್ಷಿಸುತ್ತಾನೆ, ಈ ನಿಟ್ಟಿನಲ್ಲಿ ದೇವರು ಕೂಡ ಮೆಚ್ಚುವ ಕೆಲಸ ಮಾಡಿ, ರಕ್ತವನ್ನು ಸಕಾಲಿಕವಾಗಿ ಪಡೆದು ಜೀವ ಉಳಿಸಿಕೊಳ್ಳುವವನ ಪಾಲಿಗೂ ದಾನಿ ದೇವರಂತೆ ಕಾಣುತ್ತಾನೆ, ರಕ್ತದಾನಿಗಳೇ ಈ ಸಮಾಜದಲ್ಲಿ ನಿಜವಾದ ಸೂಪರ್ ಹೀರೋಗಳಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಜಗತ್ತು ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ಎಷ್ಟೇ ಮುಂದುವರೆದಿದ್ದರೂ ಇಂದಿಗೂ ಕೃತಕ ರೀತಿಯಲ್ಲಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ, ಹೀಗಾಗಿಯೇ ರಕ್ತಕ್ಕೆ…
ಮಡಿಕೇರಿ ನ.21 NEWS DESK : ಮಡಿಕೇರಿಯ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನ.24 ರಂದು ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಡಿಕೇರಿಯ ಚೇತನ ಚಿಲುಮೆ ಸಭಾಂಗಣದಲ್ಲಿ ಚುನಾವಣೆ ನಡೆಯಲಿದ್ದು, ಟ್ರಾವಲ್ ಜಾನ್ಸನ್ ಪಿಂಟೋ ಸೇರಿದಂತೆ ಹಲವರು ಕಣದಲ್ಲಿದ್ದಾರೆ. ಹಿಂದುಳಿದ ವರ್ಗ (ಪ್ರವರ್ಗ-ಬಿ) ಟ್ರಾವಲ್ ಜಾನ್ಸನ್ ಪಿಂಟೋ, ಮಹಿಳಾ ವರ್ಗ ನೀತಾ ಕೆ.ಜಿ(ಜೋಸ್ನಾ), ಪ್ಲವೀಯಾ ಪ್ರಮೀಳಾ ಡಿಸೋಜ, ಸಾಮಾನ್ಯ ವರ್ಗ ಮಡಿಕೇರಿಯ ಗಾಡ್ವಿನ್ ಪ್ರಮೋದ್ ಮಸ್ಕರನೇಸ್ (ಪಮ್ಮಿ), ವಿ.ಜೆ.ಟೋನಿ, ಪೌಲೋಸ್ ಕೆ.ಕೆ.(ಜಾನ್ಸನ್), ವಿರಾಜಪೇಟೆಯ ಮರ್ವಿನ್ ಲೋಬೋ, ಕುಶಾಲನಗರದ ಎ.ಜಿ.ಯೇಸುದಾಸ್, ಸೋಮವಾರಪೇಟೆ ವಿ.ಎ.ಲಾರೆನ್ಸ್, ಮಡಿಕೇರಿಯ ಸ್ಯಾಮ್ಯೂವೆಲ್ ಜೆ. ಇನ್ನೂ ಅನೇಕರು ಸ್ಪರ್ಧೆಯಲ್ಲಿದ್ದಾರೆ. ಇಲ್ಲಿ ಸೂಚಿಸಿರುವ ಅಭ್ಯರ್ಥಿಗಳಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡುವಂತೆ ಜಾನ್ಸನ್ ಪಿಂಟೋ ಮನವಿ ಮಾಡಿದ್ದಾರೆ.






