ಮಡಿಕೇರಿ ನ.5 NEWS DESK : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ ಪದವಿ ವಿದ್ಯಾರ್ಥಿ ಎಂ.ಎಂ.ಪ್ರತಾಪ್ ಭಾರತೀಯ ಸೇನೆಯ ಅಗ್ನಿವೀರ್ ಗೆ ಆಯ್ಕೆಯಾಗಿ,ತರಬೇತಿಗಾಗಿ ಹೈದರಾಬಾದ್ ನ ತರಬೇತಿ ಸಂಸ್ಥೆಗೆ ವರದಿ ಮಾಡಿಕೊಂಡಿದ್ದಾನೆ. ಪ್ರತಾಪ್ ವಿರಾಜಪೇಟೆಯ ಹಂಚಿಕಾಡು ನಿವಾಸಿ ಎಂ.ಕೆ.ಮುರುಳಿ ಮತ್ತು ಮಾದೇವಿ ದಂಪತಿಯ ಪುತ್ರ.
ಲೇಖಕ: admin
ವಿರಾಜಪೇಟೆ ನ.5 NEWS DESK : ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾಗಿ ಸಿದ್ದಾಪುರದ ವಿಜಯವಾಣಿ ವರದಿಗಾರ ಪಿ.ವಿ.ಅಂತೋಣಿ ಹಾಗೂ ಆಂದೋಲನ ವರದಿಗಾರ ಎಂ.ಎ.ಕೃಷ್ಣ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ನೂತನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಮಡಿಕೇರಿ ನ.5 NEWS DESK : ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಕೊಡಗು ಪತ್ರಿಕಾ ಭವನದ 23ನೇ ವಾರ್ಷಿಕೋತ್ಸವವು ನ.8 ರಂದು ನಡೆಯಲಿದೆ. ನಗರದ ಪತ್ರಿಕಾಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮೈಸೂರು ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಎಮ್.ಎಸ್.ಸ್ವಪ್ನಾ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಹಾಗೂ ಹಿರಿಯ ಪತ್ರಕರ್ತ ಎಂ.ಬಿ.ಸದಾಶಿವ, ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು ನ.5 NEWS DESK : ಕರ್ನಾಟಕ ಜಾನಪದ ಅಕಾಡೆಮಿಯಂದ ಕೊಡಮಾಡುವ 2023ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ ಹಾಗೂ ಐವರಿಗೆ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ :: ಬೆಂಗಳೂರು ಗ್ರಾಮಾಂತರದ ಓಬಮ್ಮ- ಸೋಬಾನೆ, ರಾಮನಗರ ಜಿಲ್ಲೆಯ ರಂಗಯ್ಯ -ಪಟ ಕುಣಿತ, ಕೋಲಾರದ ತೋಪಣ್ಣ ಮಂಚಂಡಹಳ್ಳಿ – ಕೀಲುಕುದುರೆ, ಚಿಕ್ಕಬಳ್ಳಾಪುರದ ದೊಡ್ಡಕೂರ್ಲಪ್ಪ – ತಮಟೆ ವಾದನ, ತುಮಕೂರಿ ಜಿಲ್ಲೆಯ ಕದರಮ್ಮ- ಜನಪದ ಹಾಡು, ದಾವಣಗೆರೆ ಜಿಲ್ಲೆಯ ಕಾಟಮ್ಮ- ಕಥನ ಕಾವ್ಯ, ಚಿತ್ರದುರ್ಗದ ಸಿರಿಯಮ್ಮ-ಮಹಾಕಾವ್ಯ, ಶಿವಮೊಗ್ಗ ಜಿಲ್ಲೆ ಟೀಕಪ್ಪ- ಡೊಳ್ಳು ಕುಣಿತ, ಕೊಡಗು ಜಿಲ್ಲೆಯ ದೇವಕಿ ಕೆ.ಸಿ- ಊರ್ಟಿಕೋಟ್, ಮಂಡ್ಯದ ಗುರುಬಸವಯ್ಯ- ತಂಬೂರಿಪದ, ಹಾಸನದ ವೀರಭದ್ರಯ್ಯ- ತತ್ವಪದ, ಚಿಕ್ಕಮಗಳೂರಿನ ನಾಗರಾಜಪ್ಪ ವೈ.ಪಿ- ಕರಡಿಗೆ ಕಾವ್ಯ, ಮೈಸೂರಿನ ಗುರುಸಿದ್ದಯ್ಯ -ತಂಬೂರಿಪದ, ಉಡುಪಿಯ ಅಪ್ಪಿ -ಜನಪದ ಸೂಲಗಿತ್ತಿ, ದಕ್ಷಿಣ ಕನ್ನಡದ ಲೀಲಾವತಿ-…
ಮಡಿಕೇರಿ ನ.5 NEWS DESK : ಕರ್ನಾಟಕ ಜಾನಪದ ಅಕಾಡೆಮಿಯಿಂದ ವರ್ಷಂಪ್ರತಿ ನೀಡಲಾಗುವ ಪ್ರಶಸ್ತಿಗೆ ಕೊಡಗಿನ ಜಾನಪದ ಕಲೆಯಾದ ಉರ್‌ಟಿಕೊಟ್ಟ್ ಕಲಾವಿದೆ ಕುಡಿಯರ ಸಿ.ದೇವಕಿ ಆಯ್ಕೆಯಾಗಿದ್ದಾರೆ. ಮೂಲತಃ ವಿರಾಜಪೇಟೆ ತಾಲೂಕಿನ ತೋರ ಸಮೀಪದ ಕೊರ್ತಿಕಾಡು ನಿವಾಸಿಯಾಗಿರುವ ದೇವಕಿಯವರು ಕಳೆದ 20 ವರ್ಷಗಳಿಂದ ಉರ್‌ಟಿಕೊಟ್ಟ್ ಜಾನಪದ ಪ್ರಾಕಾರವನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ರಾಜ್ಯದ ಹಲವೆಡೆ ಕಾರ್ಯಕ್ರಮ ನೀಡಿ ಜನಮೆಚ್ಚಿಗೆಗೂ ಪಾತ್ರರಾಗಿದ್ದಾರೆ. ಅಳಿವಿನಂಚಿನಲ್ಲಿರುವ ಈ ಕಲೆಯನ್ನು ದೇವಕಿಯವರು ಯುವಕ-ಯುವತಿಯರಿಗೆ ಕಲಿಸಿಕೊಡುವ ಮೂಲಕ ಕಲಾ ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಇವರಿಗೆ ಕೊಡವ ಸಾಹಿತ್ಯ ಅಕಾಡೆಮಿಯಿಂದಲೂ ಗೌರವ ಪ್ರಶಸ್ತಿ ಲಭಿಸಿತ್ತು. ಜಾನಪದ ಅಕಾಡೆಮಿ ಈ ಬಾರಿ 30 ಜಿಲ್ಲೆಯ 30 ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ ಸೇರಿದಂತೆ ಇಬ್ಬರು ಜಾನಪದ ತಜ್ಞರು, 5 ಮಂದಿಗೆ ಪುಸ್ತಕ ಬಹುಮಾನವನ್ನು ಘೋಷಿಸಿದೆ.
ಕುಶಾಲನಗರ ನ.5 NEWS DESK : ಕುಶಾಲನಗರ ಮುಳ್ಳುಸೋಗೆ ಶ್ರೀ ಕೋಣ ಮಾರಮ್ಮ ದೇವಾಲಯದ 22ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಶ್ರೀ ಕೋಣ ಮಾರಮ್ಮ ದೇವತಾ ಸೇವ ಟ್ರಸ್ಟ್ ಆಶಯದಲ್ಲಿ ಎರಡು ದಿನಗಳ ಕಾಲ ನಡೆಯುವ ಪೂಜಾ ಕೈಂಕರ್ಯದಲ್ಲಿ ಸಂಪ್ರದಾಯದಂತೆ ಕಾವೇರಿ ನದಿಯಿಂದ ಕಳಸದಲ್ಲಿ ಗಂಗಾಜಲ ತಂದು ಪ್ರತಿಷ್ಠಾಪನೆ ನಡೆಯಿತು. ದೇವಿ ಸನ್ನಿಧಿಯಲ್ಲಿ ಗಣಪತಿ ಹೋಮ, ತೀರ್ಥ ಪ್ರಸಾದ ವಿನಿಯೋಗ ನಂತರ ಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮರುದಿನ ಮಕರ ಲಗ್ನದಲ್ಲಿ ಮಹಾಪೂಜೆ, ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ನೆರವೇರಿತು. ಸಂಜೆ ಪಟಾಕಿ ಸಿಡಿಮದ್ದುಗಳೊಂದಿಗೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ದೇವಿಯ ವಿಗ್ರಹದ ಮೆರವಣಿಗೆ ನಡೆಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲದೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪೂಜೆ ಸಲ್ಲಿಸಿದರು. ದೇವತಾ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಚೆಲುವರಾಜು, ಉಪಾಧ್ಯಕ್ಷ ಎಂ.ಸಿ.ಮಂಜುನಾಥ, ಕಾರ್ಯದರ್ಶಿ ಬಿ.ಜೆ.ಸತೀಶ್ ಕುಮಾರ್, ಸಹ ಕಾರ್ಯದರ್ಶಿ ಎಂ.ಮಂಜುನಾಥ್, ಖಜಾಂಚಿ ಎಚ್.ಜೆ.ಲೋಕೇಶ್,…
ನಾಪೋಕ್ಲು ನ.5 NEWS DESK : ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಡೆದ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಹಾಗೂ ಹಗ್ಗಜಗ್ಗಾಟ ಅಂತಿಮ ಪಂದ್ಯದಲ್ಲಿ ಬಲ್ಲಮಾವಟಿ ತಂಡವು ಯವಕಪಾಡಿ ತಂಡದ ವಿರುದ್ಧ ಜಯಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 12 ವರ್ಷಗಳ ಬಳಿಕ ಆಯೋಜಿಸಲಾಗಿದ್ದ ಗ್ರಾಮೀಣ ಮಟ್ಟದ ಪಂದ್ಯಾವಳಿಯಲ್ಲಿ ಬಲ್ಲಮಾವಟಿ ತಂಡವು ಯವಕಪಾಡಿ ತಂಡದ ವಿರುದ್ಧ ಸ್ಪರ್ಧಿಸಿತು. ಅಂತಿಮ ಪಂದ್ಯದಲ್ಲಿ ಸಡನ್ ಡೆತ್ ನಲ್ಲಿ ಬಲ್ಲಮಾವಟಿ ತಂಡ ಪ್ರಶಸ್ತಿಗೆ ಮುತ್ತಿಕ್ಕಿದರೆ ಯವಕಪಾಡಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಹಾಕಿ ಪಂದ್ಯಾವಳಿಯ ವಿಜೇತ ತಂಡಕ್ಕೆ ಮಾಳೆಯಂಡ ಚೋಂದಮ್ಮ ಜ್ಞಾಪಕಾರ್ಥ ಅವರ ಮಕ್ಕಳಾದ ಭೀಮಯ್ಯ ಮತ್ತು ಪೊನ್ನಣ್ಣ ಪ್ರಯೋಜಿಸಿದ ಟ್ರೋಫಿ ಹಾಗೂ ರೂ.30,000 ನಗದು ಬಹುಮಾನವನ್ನು ವಿತರಿಸಲಾಯಿತು .ದ್ವಿತೀಯ ಸ್ಥಾನ ಗಳಿಸಿದ ಯವಕಪಾಡಿ ತಂಡಕ್ಕೆ ಮೂವೇರ ಚಂಗಪ್ಪ ದಂಪತಿ ಜ್ಞಾಪಕಾರ್ಥ ಮೂವೇರ ವಿಜು ಮಂದಣ್ಣ ಪ್ರಾಯೋಜಿಸಿದ ಟ್ರೋಫಿ ಹಾಗೂ 20000 ರೂ.ನಗದು ಬಹುಮಾನ ವಿತರಿಸಲಾಯಿತು. ಸೆಮಿ…
ಮಡಿಕೇರಿ ನ.5 NEWS DESK : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಡಿಸೆಂಬರ್, 03 ರಂದು ವಿಶ್ವ ವಿಕಲಚೇತನರ ದಿನಾಚರಣೆ ನಡೆಯಲಿದೆ. ಇದರ ಅಂಗವಾಗಿ ವಿಕಲಚೇತನರ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಸಂಸ್ಥೆಗಳಿಗೆ, ವಿಶೇಷ ಶಿಕ್ಷಕರಿಗೆ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ರಾಜ್ಯ ಮಟ್ಟದಲ್ಲಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2024 ನೇ ಸಾಲಿನಲ್ಲೂ ಸಹ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ನ. 11 ರೊಳಗೆ ದ್ವಿಪ್ರತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಮಡಿಕೇರಿ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ದೂ.ಸಂ. 08272-295829 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ತಿಳಿಸಿದ್ದಾರೆ.
ಸೋಮವಾರಪೇಟೆ ನ.5 NEWS DESK : ಕನ್ನಡ ರಾಜ್ಯೋತ್ಸವ ಅಂಗವಾಗಿ ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಂಗಳೂರಿನ ನಾಟ್ಯಕಲಾ ತಂಡ ಪ್ರಥಮ ಸ್ಥಾನ ಪಡೆಯಿತು. ಸೋಮವಾರಪೇಟೆಯ ಎಡಿಸಿ ತಂಡ ದ್ವಿತೀಯ, ಅರ್ಜುನ್ ತಂಡ ತೃತೀಯ ಸ್ಥಾನಗಳಿಸಿದೆ. ಸೂಪರ್ ಟ್ರೋಫಿಯನ್ನು ರವಿವರ್ಮ ತಂಡ ಪಡೆದುಕೊಂಡಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೋಮವಾರಪೇಟೆಯ ರವಿವರ್ಮ ತಂಡ ಪ್ರಥಮ, ಕ್ರಿಯೆಟಿವ್ ಅಕಾಡೆಮಿ ದ್ವಿತೀಯ, ಕೈಲಾಸ್ ಹಟ್ಟಿಹೊಳೆ ತೃತೀಯ, ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರಪೇಟೆಯ ಮಸಗೋಡು ಚನ್ನಮ್ಮ ಶಾಲೆಯ ನಂದಗೋಕುಲ ತಂಡ ಪ್ರಥಮ, ಆದಿಶಕ್ತಿ ತಂಡ ದ್ವಿತೀಯ, ಭುವನೇಶ್ವರಿ ತಂಡ ತೃತೀಯ ಸ್ಥಾನಗಳಿಸಿದೆ. ಕಾಲೇಜು ವಿಭಾಗದಲ್ಲಿ ಅರ್ಜುನ್ ತಂಡ ಪ್ರಥಮ ಸ್ಥಾನ ಪಡೆದಿದೆ. ಸಂಘದ ಸದಸ್ಯರಿಗೆ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಸತೀಶ್ ತಂಡ ಪ್ರಥಮ, ಚಾಣುಕ್ಯ ತಂಡ ದ್ವಿತೀಯ, ಕ್ರಿಕೆಟ್ ಪಂದ್ಯಾಟದಲ್ಲಿ ಕವನ್ ಪೂಜಾರಿ ತಂಡ ಪ್ರಥಮ, ಬಜೆಗುಂಡಿ ತಂಡ ದ್ವಿತೀಯ ಸ್ಥಾನ…
ಮಡಿಕೇರಿ ನ.5 NEWS DESK : ಆರ್ಮಿ ವೆಲ್‍ಪೇರ್ ಪ್ಲೇಸ್ಮೆಂಟ್ ಆರ್ಗನೈಸೇಷನ್(ಎಡಬ್ಲ್ಯುಪಿಒ), ನವದೆಹಲಿ, ಇವರು ಮಾವೆನ್ ಕೋಹರ್ಟ್ ಕೋಚಿಂಗ್ ಸೆಂಟರ್ ಇವರ ಸಹಯೋಗದೊಂದಿಗೆ ವಿಶೇಷವಾಗಿ ಮಾಜಿ ಸೈನಿಕರಿಗಾಗಿ (ಸೈನಾಧಿಕಾರಿಗಳನ್ನು ಹೊರತುಪಡಿಸಿ) ರಿಯಾಯಿತಿ ದರದಲ್ಲಿ ಬ್ಯಾಂಕಿಂಗ್ ಮತ್ತು ಎಸ್‍ಎಸ್‍ಸಿ ಪರೀಕ್ಷೆಗಳಿಗೆ ಆನ್‍ಲೈನ್ ತರಬೇತಿ ಕೋರ್ಸುಗಳನ್ನು ನ.6 ರಿಂದ ಪ್ರಾರಂಭಿಸಲಾಗುತ್ತಿದೆ. ಬ್ಯಾಂಕಿಂಗ್ ಪರೀಕ್ಷೆಗಳಿಗೆ ರೂ.3,658 ಆಗಿದ್ದು, 144 ಗಂಟೆಗಳ ತರಬೇತಿ ನೀಡಲಾಗುತ್ತದೆ, ಎಸ್‍ಎಸ್‍ಸಿ ಪರೀಕ್ಷೆಗಳಿಗೆ ರೂ.4602, 192 ಗಂಟೆಗಳ ತರಬೇತಿ, ಮತ್ತು ಬ್ಯಾಂಕಿಂಗ್ ಮತ್ತು ಎಸ್‍ಎಸ್‍ಸಿ ಎರಡು ಪರೀಕ್ಷೆಗಳಿಗೆ ರೂ.5,900 ಹಾಗೂ 230 ಗಂಟೆಗಳ ತರಬೇತಿ ನೀಡುತ್ತಿದ್ದು, ಮಾಜಿ ಸೈನಿಕರು (ಸೈನ್ಯಾಧಿಕಾರಿ ಹೊರತುಪಡಿಸಿ) ಬ್ಯಾಂಕಿಂಗ್ ಮತ್ತು ಎಸ್‍ಎಸ್‍ಸಿ ಪರೀಕ್ಷೆಗಳನ್ನು ಎದುರಿಸಲು ಇದರ ಸದುಪಯೋಗ ಪಡೆದುಕೊಳ್ಳಲು ಎಡಬ್ಲ್ಯುಪಿಒ ನಲ್ಲಿ ನೋಂದಾಯಿಸಬೇಕಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್.ಶೆಟ್ಟಿ ತಿಳಿಸಿದ್ದಾರೆ.






