ಕುಣಿಗಲ್ NEWS DESK ನ.13 : ಟಯರ್ ಸ್ಫೋಟಗೊಂಡು ಕಾರು ಪಲ್ಟಿಯಾದ ಪರಿಣಾಮ ಐಟಿ ಉದ್ಯೋಗಿ ಮೃತಪಟ್ಟಿರುವ ಘಟನೆ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆ ಹುಲಿಯೂರುದುರ್ಗ ಹೋಬಳಿ ಡಿ.ಹೊಸಹಳ್ಳಿ, ರಾಜೇಂದ್ರಪುರ ಗ್ರಾಮದಲ್ಲಿ ನಡೆದಿದೆ. ಮಂಡ್ಯ ನಿವಾಸಿ, ಐಟಿ ಉದ್ಯೋಗಿ ಆಕರ್ಶ್ (28) ಮೃತ ದುರ್ದೈವಿ. ಮೂವರು ಗಾಯಾಳುಗಳು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮಂಡ್ಯಕ್ಕೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಲೇಖಕ: admin
ಮಡಿಕೇರಿ NEWS DESK ನ.13 : ಎರಡು ದಿನಗಳ ಹಿಂದೆ ವಿರಾಜಪೇಟೆಯ ತೆಲುಗರ ಬೀದಿಯಲ್ಲಿ ಲಾರಿ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ. ಕೇರಳ ರಾಜ್ಯದ ಇರಿಟ್ಟಿ ಕುನ್ನೋತ್ ಕಕ್ಕೊಟುಪರಂಬಿಲ್ ಹೌಸ್ ನಿವಾಸಿ ಪ್ರವೀದ್ (45) ಮೃತಪಟ್ಟ ಲಾರಿಯ ಮಾಲೀಕ ಹಾಗೂ ಚಾಲಕ. ನ.11 ರಂದು ಸಂಜೆ ಭದ್ರಾವತಿಯಿಂದ ಕೇರಳ ರಾಜ್ಯಕ್ಕೆ ಭತ್ತ ಸಾಗಿಸುತ್ತಿದ್ದ ಸಂದರ್ಭ ವಿರಾಜಪೇಟೆಯ ತೆಲುಗರ ಬೀದಿಯ ಅಯ್ಯಪ್ಪ ಬೆಟ್ಟದ ಬಳಿ ನಿಯಂತ್ರಣ ತಪ್ಪಿ ಲಾರಿ ಉರುಳಿ ಬಿದ್ದಿತ್ತು. ಅಪಘಾತದಿಂದ ಚಾಲಕ ಪ್ರವೀದ್ ತಲೆ ಭಾಗಕ್ಕೆ ಮಾರಣಾಂತಿಕ ಗಾಯವಾಗಿತ್ತು. ಚಿಕಿತ್ಸೆಗಾಗಿ ಕೇರಳ ರಾಜ್ಯದ ಕಣ್ಣೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀದ್ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಡಿಕೇರಿ NEWS DESK ನ.13 : ರೈತರೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಆಲೂರು ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಹೊಸಗುತ್ತಿ ಗ್ರಾಮದಲ್ಲಿ ಘಟನೆ. ಮಜೀದ್(45) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ರೈತ. ಬುಧವಾರ ತಮ್ಮ ಮನೆಯಲ್ಲಿ ತಮ್ಮದೇ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸಾಲಬಾಧೆ ಎಂದು ಹೇಳಲಾಗುತ್ತಿದೆಯಾದರೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮಡಿಕೇರಿ ನ.13 NEWS DESK : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ತಾಲ್ಲೂಕು ಯುವ ಒಕ್ಕೂಟ, ಸೋಮವಾರಪೇಟೆ ಮತ್ತು ವಿರಾಜಪೇಟೆ, ಫೀಲ್ಡ್ ಮಾರ್ಷಲ್ ಕೆಂ.ಎಂ.ಕಾರ್ಯಪ್ಪ ಕಾಲೇಜು ಸಹಯೋಗದೊಂದಿಗೆ ಕೊಡಗು ‘ಜಿಲ್ಲಾ ಮಟ್ಟದ ಯುವಜನೋತ್ಸವ’ ಕಾರ್ಯಕ್ರಮವು ನ.30 ರಂದು ನಗರದ ಫೀಲ್ಡ್ ಮಾರ್ಷಲ್ ಕೆಂ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿದೆ. ವಿಷಯಾಧಾರಿತ ಸ್ಪರ್ಧೆ: ವಿಜ್ಞಾನ ಮೇಳ ಗುಂಪು ಸ್ಪರ್ಧೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಧುನಿಕತೆ ವಿಷಯದ ಬಗ್ಗೆ ಪ್ರದರ್ಶನವಿರಬೇಕು. ಇದರಲ್ಲಿ ನಾವಿನ್ಯತೆಗೆ ಪ್ರಾತಿನಿಧ್ಯ ನೀಡಲಾಗುವುದು ಸಕ್ರಿಯ ಮಾದರಿ ತಯಾರಿಕೆಯ ಪ್ರದರ್ಶನವಿರಬೇಕು. (ವಿಶೇಷ ಸೂಚನೆ: ನಿಷ್ಕ್ರಿಯ ಮಾದರಿ ತಯಾರಿಕೆಗೆ ಅವಕಾಶವಿಲ್ಲ ಉದಾಹರಣೆ: ಡ್ಯಾಂ, ಸೋಲಾರ್ ಮಾದರಿ ಸಿಸ್ಟಮ್) ಪ್ರಥಮ ರೂ. 7 ಸಾವಿರ, ದ್ವಿತೀಯ ರೂ. 5 ಸಾವಿರ, ತೃತೀಯ ರೂ.3 ಸಾವಿರ. ವೈಯಕ್ತಿಕ ಸ್ಪರ್ಧೆಗಳು ಬೇರೆ ಪ್ರತ್ಯೇಕವಾಗಿದೆ. ಪ್ರಥಮ ರೂ.3 ಸಾವಿರ, ದ್ವಿತೀಯ ರೂ.2 ಸಾವಿರ, ತೃತೀಯ ರೂ.1,500 ಆಗಿರುತ್ತದೆ. ಗುಂಪು ಸ್ಪರ್ಧೆ:…
ಮಡಿಕೇರಿ ನ.13 NEWS DESK : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ‘ಯುವ ಸಂಸತ್ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಭಾರತವು ವಿಶ್ವದಲ್ಲಿ ಬಲಿಷ್ಠ ಪ್ರಜಾಪ್ರಭುತ್ವ ಹೊಂದಿದ್ದು, ಕೇಂದ್ರದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ, ಹಾಗೆಯೇ ರಾಜ್ಯದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಒಳಗೊಂಡಿದ್ದು, ಪ್ರಜಾಪ್ರಭುತ್ವ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವಂತಾಗಬೇಕು ಎಂದರು. ‘ಜನ ಪ್ರತಿನಿಧಿಗಳು ಜನಸಾಮಾನ್ಯರ ಸೇವಕರಾಗಿದ್ದು, ತಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ಸದನದಲ್ಲಿ ಬೆಳಕು ಚೆಲ್ಲಿ ಪರಿಣಾಮಕಾರಿ ಕಾರ್ಯಕ್ರಮ ರೂಪಿಸುವುದು ಪ್ರಜಾಪ್ರಭುತ್ವದ ಮೈಲುಗಲ್ಲಾಗಿದೆ ಎಂದು ಹೇಳಿದರು.’ ಸುಗಮ ಹಾಗೂ ಸುಭದ್ರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ತೆಗೆದುಕೊಂಡು ಹೋಗುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ವೀಣಾ ಅಚ್ಚಯ್ಯ ಹೇಳಿದರು. ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜಿನ…
ಮಡಿಕೇರಿ ನ.13 NEWS DESK : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ‘ಯುವ ಸಂಸತ್ ಸ್ಪರ್ಧೆ ನಡೆಯಿತು. ಕಾವೇರಿ ನದಿ ನೀರು ಹಂಚಿಕೆ ಪರಿಹಾರ ಕಂಡುಕೊಳ್ಳುವುದು. ರಾಷ್ಟ್ರದ ಗಡಿ ಪ್ರದೇಶದಲ್ಲಿ ಹೆಚ್ಚಿನ ರಕ್ಷಣಾ ಕಾರ್ಯಕೈಗೊಂಡು ರಾಷ್ಟ್ರಕ್ಕೆ ನುಸುಳಿ ಬರುವವರನ್ನು ತಡೆಯುವುದು, ಅಂತರರಾಷ್ಟ್ರೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ವಿರೋಧ ಪಕ್ಷದಿಂದ ಪ್ರಶ್ನೆಗಳ ಸುರಿಮಳೆ ಕೇಳಿ ಬಂತು. ಇದಕ್ಕೆ ಆಡಳಿತ ಪಕ್ಷದಿಂದ ಸಮರ್ಪಕ ಉತ್ತರವೂ ದೊರೆಯಿತು. ಭಾರತ ‘ಅಲಿಪ್ತ ನೀತಿ’ ಹೊಂದಿದ್ದು, ಸದಾ ಶಾಂತಿಯನ್ನು ಬಯಸುತ್ತದೆ. ಆ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಂಬಂಧವನ್ನು ಬಲಪಡಿಸಲು ಸದಾ ಸನ್ನದ್ಧವಾಗಿದೆ ಎಂಬ ಉತ್ತರ ದೊರೆಯಿತು. ಇಸ್ರೇಲ್ ಮತ್ತು ಹಮಾಸ್, ರಷ್ಯಾ ಮತ್ತು ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಆ ರಾಷ್ಟ್ರದ ಮುಖ್ಯಸ್ಥರ ಜೊತೆ ಚರ್ಚಿಸಲಾಗಿದೆ. ಆ ನಿಟ್ಟಿನಲ್ಲಿ ಭಾರತ ಸದಾ ಶಾಂತಿಯನ್ನು ಬಯಸುತ್ತದೆ ಎಂದು ಆಡಳಿತ ಪಕ್ಷದಿಂದ ಉತ್ತರ ದೊರೆಯಿತು. ನೋಟು ಅಮಾನ್ಯಕರಣ ಮಾಡಿದರೂ ಕಪ್ಪುಹಣ ಸಂಗ್ರಹ ಕಡಿಮೆಯಾಗಿಲ್ಲ.…
ಮಡಿಕೇರಿ ನ.13 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ನ.15 ರಂದು ಕೊಡಗು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 9.30 ಗಂಟೆಗೆ ಕುಶಾಲನಗರದ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ನಂತರ 10.30ಕ್ಕೆ ಮಕ್ಕಂದೂರು ಗ್ರಾಮದಲ್ಲಿ ಮಡಿಕೇರಿ ಗ್ರಾಮಾಂತರ ಸಂಘಟನಾ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 11.30ಗಂಟೆಗೆ ಕೆ.ನಿಡುಗಣೆ, 12.30ಕ್ಕೆ ಗಾಳಿಬೀಡು, ಮಧ್ಯಾಹ್ನ 2.30 ಗಂಟೆಗೆ ಹಾಕತ್ತೂರು, ಮೇಕೇರಿ, ಸಂಜೆ 4 ಗಂಟೆಗೆ ಮರಗೋಡು, ಹೊಸ್ಕೇರಿ, 5ಕ್ಕೆ ಕಡಗದಾಳು, 6 ಗಂಟೆಗೆ ಮಡಿಕೇರಿ ನಗರಕ್ಕೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರರಾದ ಬಿ.ಕೆ.ಅರುಣ್ ಕುಮಾರ್ ಹಾಗೂ ತಳೂರು ಕಿಶೋರ್ ಕುಮಾರ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಡಿಕೇರಿ ನ.13 NEWS DESK : ಗೋಣಿಕೊಪ್ಪಲು ಕಾಫಿ ಮಂಡಳಿ ಹಾಗೂ ಸಕ್ಡೆನ್ ಕಾಫಿ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಸುಸ್ಥಿರ ಕಾಫಿ ಉತ್ಪಾದನೆಗಾಗಿ ಅತ್ಯುತ್ತಮ ಕೃಷಿ ಪದ್ಧತಿಗಳ ಕುರಿತು ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಾಗಾರವು ನಿಟ್ಟೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಉಪ ನಿರ್ದೇಶಕರಾದ ಡಾ. ಕೆ.ಶ್ರೀದೇವಿ ಕಾರ್ಯಾಗಾರವನ್ನು ಉದ್ಘಾಟಿಸಿ ಸುಸ್ಥಿರ ಕಾಫಿ ಉತ್ಪಾದನೆಗಾಗಿ ಅತ್ಯುತ್ತಮ ಕೃಷಿ ಪದ್ಧತಿಗಳನ್ನು ಬೆಳೆಗಾರರು ಅಳವಡಿಸಿಕೊಳ್ಳಲು ಪಾಲಿಸಬೇಕಾದ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ, ಅವುಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು. ಕಾಫಿ ಮಂಡಳಿಯ ವಿಜ್ಞಾನಿ ಡಾ.ಎಸ್.ಎ.ನದಾಫ್ ಮಾತನಾಡಿ, ಸಮಗ್ರ ಪೋಷಕಾಂಶ ನಿರ್ವಹಣೆ ಕಾಫಿ ಬೆಳೆಯಲ್ಲಿ ಅತಿ ಅವಶ್ಯಕ ಹಾಗೂ ಅದರ ಅವಶ್ಯಕತೆಯ ಬಗ್ಗೆ ವಿವರಿಸಿದರು. ರಸಗೊಬ್ಬರಗಳನ್ನು ಕಾಫಿ ಗಿಡಗಳಿಗೆ ಮಣ್ಣಿನ ಮತ್ತು ಎಲೆಗಳ ಮೇಲೆ ಸಿಂಪಡಣೆ ಮಾಡುವ ಮೂಲಕ ಪೋಷಕಾಂಶಗಳನ್ನೂ ಪೂರೈಸಬಹುದೆಂದು ತಿಳಿಸಿದರು. ಕಾಫಿಯಲ್ಲಿ ಸಸ್ಯಮೂಲ ಸಂವರ್ಧನೆ ಮತ್ತು ಕಾಫಿ ಕಸಿ ಮಾಡುವ ಬಗ್ಗೆ ಡಾ.ನಾಗರಾಜ ಗೋಕಾವಿ ಬೆಳೆಗಾರರಿಗೆ ಮಾಹಿತಿ ನೀಡಿದರು.…
ಮಡಿಕೇರಿ ನ.13 NEWS DESK : ಕುಂದಚೇರಿ (ಚೆಟ್ಟಿಮಾನಿ) ಗ್ರಾ.ಪಂ 2024-25ನೇ ಸಾಲಿನ ಗ್ರಾಮಸಭೆ ಚೆಟ್ಟಿಮಾನಿ ಸಮುದಾಯ ಭವನದಲ್ಲಿ ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 66/11 ಕೆವಿ ವಿದ್ಯುತ್ ಉಪಕೇಂದ್ರದ ಅಗತ್ಯತೆ ಮತ್ತು ಮೂಲಭೂತ ಸೌಲಭ್ಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪಂಚಾಯಿತಿ ಸದಸ್ಯ ಹ್ಯಾರೀಸ್ ಮಾತನಾಡಿ, ಪದಕಲ್ಲು ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಿಗೆ ಪಂಚಾಯ್ತಿ ಜಾಗ ಮಂಜೂರಾಗಿದೆ, ಸೋಲಾರ್ ಪ್ಲಾಂಟ್ ಗೆ ಜಾಗದ ಅವಶ್ಯಕತೆ ಇದೆ. ಆದರೆ ಪಂಚಾಯ್ತಿಗೆ ಸೇರಿದ ಜಾಗವನ್ನು ಇತ್ತೀಚೆಗೆ ಹೊರಗಿನ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ, ಶಾಸಕರು ಕೂಡ ಸೂಚನೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಗ್ರಾಮಸ್ಥ ದಬ್ಬಡ್ಕ ಶ್ರೀದರ್ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ ಜಾಗವನ್ನು ಈ ಭಾಗದ ಜನರಿಗೆ ಮತ್ತು ಇಲಾಖೆಗೆ ಮೀಸಲಿಡಬೇಕೆ ಹೊರತು ಹೊರಗಿನವರಿಗೆ ನೀಡಬಾರದು. ತಕ್ಷಣ ಸರ್ವೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಕಂದಾಯ…
ಸೋಮವಾರಪೇಟೆ ನ.13 NEWS DESK : ಅಕ್ಕನ ಬಳಗದ ನೂತನ ಅಧ್ಯಕ್ಷರಾಗಿ ಗೀತರಾಜು ಆಯ್ಕೆಯಾಗಿದ್ದಾರೆ. ಪಟ್ಟಣದ ಬೇಳೂರು ರಸ್ತೆಯಲ್ಲಿರುವ ಅಕ್ಕನ ಬಳಗದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸರಿತಾ ಮಲ್ಲಿಕಾರ್ಜುನ್, ಕಾರ್ಯದರ್ಶಿಯಾಗಿ ಮಾಯಾಗಿರೀಶ್, ಖಜಾಂಚಿಯಾಗಿ ಆಶಾ ಹೂವಯ್ಯ, ನಿರ್ದೇಶಕರುಗಳಾಗಿ -ಜಗದಾಂಬ ಗುರುಪ್ರಸಾದ್, ರಜಿನಿ ಯತೀಶ್, ಮಂಜುಳ ಬಸವರಾಜು, ದಿವ್ಯಾ ದಯಾಕರ್, ಅನುಪಮ ಶಿವರಾಜ, ಸವಿತಾ ನೀಲಕಂಠ ನಂದಿನಿ ಮಹಾಂತೇಶ್ ಆಯ್ಕೆಯಾಗಿದ್ದಾರೆ.






