ಮಡಿಕೇರಿ ಡಿ.9 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಕಾರದಲ್ಲಿ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ಚಾಲನೆ ದೊರೆಯಿತು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ 1-19 ವರ್ಷದೊಳಗಿನ ಮಕ್ಕಳಿಗೆ ಆಲ್‍ಬೆಂಡಜೋಲ್- 400 ಎಂಜಿ ಮಾತ್ರೆಯನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲಾ ಮಕ್ಕಳ ಆರೋಗ್ಯ ಕಾರ್ಯಕ್ರಮದಲ್ಲಿ ಸರ್ಕಾರವು ಜಂತುಹುಳು ನಿವಾರಣಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು. ಆರೋಗ್ಯ ಇಲಾಖೆ ವತಿಯಿಂದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ ಮಾತನಾಡಿ ಜಂತುಹುಳು ನಿವಾರಣಾ ಮಾತ್ರೆಯನ್ನು 19 ವರ್ಷದೊಳಗಿನ ಮಕ್ಕಳು ಪಡೆದುಕೊಳ್ಳಬೇಕು. ಇದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಜೊತೆಗೆ ಜೀರ್ಣಶಕ್ತಿ ಹೆಚ್ಚಿಸುತ್ತದೆ. ಹಾಗೆಯೇ ರಕ್ತಹೀನತೆ ತಡೆಯಬಹುದು…
ಲೇಖಕ: admin
ಮಡಿಕೇರಿ ಡಿ.9 NEWS DESK : ಹೆಬ್ಬಾಲೆ ಗ್ರಾ.ಪಂ ವ್ಯಾಪ್ತಿಯ ಮರೂರು, ಹುಲುಸೆ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಕೃಷಿ ಫಸಲು ನಷ್ಟವಾಗುತ್ತಿರುವ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ಗ್ರಾಮದ ಬೆಳೆಗಾರರಾದ ಕಪಿನಪ್ಪ, ರಾಜಶೇಖರ, ಶಿವಕುಮಾರ್, ಶಿವರುದ್ರಪ್ಪ, ಗಣೇಶ್, ಸೇರಿದಂತೆ 10ಕ್ಕೂ ಹೆಚ್ಚು ರೈತರ ಜಮೀನುಗಳಿಗೆ ನುಗ್ಗಿದ ಕಾಡಾನೆಗಳು ಭತ್ತ, ತೆಂಗು, ಸಹಿ ಗೆಣಸು ಹಾಗೂ ಬಾಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ತುಳಿದು ನಾಶಪಡಿಸಿವೆ. ಬಾಣಾವರ ಮೀಸಲು ಅರಣ್ಯ ಮತ್ತು ಜೇನುಕಲ್ಲು ಬೆಟ್ಟದ ಕಡೆಯಿಂದ ಕಾಡಾನೆಗಳು ಗದ್ದೆ, ತೋಟಗಳಿಗೆ ಇಡುತ್ತಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಬೇಕು. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಧಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಭರತ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರವನ್ನು ನೀಡುವ ಭರವಸೆ ನೀಡಿದ್ದಾರೆ.
ಮಡಿಕೇರಿ ಡಿ.9 NEWS DESK : ಕೊಡಗು ಜಿಲ್ಲೆಯಲ್ಲಿರುವ ನಿವೇಶನ ರಹಿತ ಪರಿಶಿಷ್ಟರಿಗೆ ನಿವೇಶನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ದಕ್ಷಿಣ ಕೊಡಗಿನ ಹೈಸೊಡ್ಲೂರುವಿನಿಂದ ಪೊನ್ನಂಪೇಟೆ ವರೆಗೆ ಭೂಮಿಗಾಗಿ ಕಾಲ್ನಡಿಗೆ ಜಾಥ ಹೋರಾಟವನ್ನು ನಡೆಸಿತು. ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ವರೆಗೆ ಸುಮಾರು 15 ಕಿ.ಮೀ ದೂರ ಕ್ರಮಿಸಿದ ಪ್ರತಿಭಟನಾಕಾರರು ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಸರಕಾರಿ ಜಮೀನನ್ನು ಒತ್ತುವರಿ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿರುವ ಶ್ರೀಮಂತರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ನೀಡಬಾರದು. ಮೇಲ್ವರ್ಗದ ಮಂದಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬಾರದು. ನಿವೇಶನವಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿರುವ ಪರಿಶಿಷ್ಟರಿಗೆ ಕೃಷಿಭೂಮಿ ಮತ್ತು ನಿವೇಶನ ನೀಡಬೇಕು. ಹಕ್ಕುಪತ್ರ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ದಲಿತರ ಮೇಲೆ ನಡೆಯುತಿರುವ ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಂಘಟನೆಯ ರಾಜ್ಯ ಸಂಚಾಲಕ ಡಿ.ಆರ್.ಪಾಂಡುರಂಗ ಸ್ವಾಮಿ, ರಾಜ್ಯ ಸಂಘಟನಾ ಸಂಚಾಲಕ…
ಮಡಿಕೇರಿ ಡಿ.9 NEWS DESK : ಮೂರ್ನಾಡು 33/11 ಕೆ.ವಿ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್.ಎಸ್ ಹೊದ್ದೂರು ಮತ್ತು ಎಫ್2 ನಾಪೋಕ್ಲು ಫೀಡರ್‍ನಲ್ಲಿ ಡಿಸೆಂಬರ್, 10 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಹೊದ್ದೂರು, ಕಬಡಗೇರಿ, ಕುಂಬಳದಾಳು, ಕಕ್ಕಬೆ, ಕೊಳಕೇರಿ, ಕುಂಜಿಲ, ಯುವಕಪಾಡಿ, ನಾಲಡಿ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೆರೂರು, ಕಿಯಲಕೇರಿ, ನಾಪೋಕ್ಲು ಟೌನ್, ಕೊಟ್ಟಮುಡಿ, ಪಾಲೂರು, ಬೇತು, ಚೆರಿಯಪರಂಬು, ಹಳೆತಾಲ್ಲೂಕು, ಚೋನೆಕೆರೆ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಮಡಿಕೇರಿ ಡಿ.9 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ “ಕೊಡವ ಕಥೆ ಜೊಪ್ಪೆ”ಯನ್ನು ಹೊರತರಲು ಸೂಕ್ತ ಕತೆಗಳನ್ನು ಆಹ್ವಾನಿಸಿದೆ. ಸುಮಾರು 25 ರಿಂದ 30ರಷ್ಟು ಕತೆಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಕತೆಗಳನ್ನು ಎ 4 ಅಳತೆಯ ಕಾಗದದಲ್ಲಿ ಸ್ಪುಟವಾಗಿ ಬರೆದಿದ್ದು 5-6 ಪುಠಗಳನ್ನು ಮೀರುವಂತಿಲ್ಲ. ಕಥಾವಸ್ತು ಕತೆಗಾರರ ಕಲ್ಪನೆಗೆ ಬಿಟ್ಟಿದ್ದು. ಕತೆಗಳು ಪ್ರತ್ಯಕ್ಷ-ಪರೋಕ್ಷವಾಗಿ ಯಾರದ್ದು ತೇಜೋವಧೆಯಾಗಲಿ, ಜಾತಿ-ಧರ್ಮಗಳ ಭಾವನೆಗಳಿಗೆ ಘಾಸಿ ಉಂಟು ಮಾಡುವುದಾಗಿರಕೂಡದು. ಅಂತಿದ್ದಲ್ಲಿ ಅದರ ಸಾಧಕ-ಭಾದಕಗಳಿಗೆ ಕತೆಗಾರರೇ ಭಾದ್ಯಸ್ಥರಾಗುವುದು. ಕತೆಗಳು ಸಾಧ್ಯವಾದಷ್ಟು ಕೊಡವ ಸಂಸ್ಕೃತಿ-ಪದ್ಧತಿ, ಮೂಲತನಕ್ಕೆ ಒತ್ತುಕೊಡುವಂತಿದ್ದು ಸಾರ್ವಕಾಲಿಕವಾಗಿರಲಿ. ಪ್ರಕಟಿತ ಕಥೆಗಳಿಗೆ ಅಕಾಡೆಮಿ ಗೊತ್ತು ಪಡಿಸಿರುವಂತೆ ಸಂಭಾವನೆ ನೀಡಲಾಗುವುದು. ಕಥೆಗಾರರು ತಮ್ಮ ಸ್ವಪರಿಚಯವನ್ನು 4-5 ವಾಕ್ಯಗಳಿಗೆ ವೀರದಂತೆ ಬರೆದು ಕೊಡುವುದು. ಪ್ರತಿಯೊಬ್ಬ ಕಥೆಗಾರರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಲಗತ್ತಿಸುವುದು. ಕತೆಗಳನ್ನು ಕಳುಹಿಸಿಕೊಡಲು ಅಂತಿಮ ದಿನಾಂಕ 05.01.2025. ಕಥೆಯನ್ನು ಪ್ರಕಟಿಸುವ ಅಂತಿಮ ತೀರ್ಮಾನ ಅಕಾಡೆಮಿಯದ್ದಾಗಿರುತ್ತದೆ. ಕೊಡವ ಕಥೆ ಜೊಪ್ಪೆಗೆ ನಿಮ್ಮ ಕಥೆಗಳನ್ನು…
ಮಡಿಕೇರಿ ಡಿ.9 NEWS DESK : ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಸಮೂಹದ ಅಭ್ಯುದಯದ ಕುರಿತು ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೇರಿದ ನಂತರ ಈಡೇರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಕೇವಲ ಮೌಖಿಕ ಹೇಳಿಕೆಗಳಿಗಷ್ಟೇ ಸರ್ಕಾರ ಸೀಮಿತವಾಗಿದೆ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ, ಈ ಸಂಬಂಧ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಡಿ.10 ರಂದು ಉಡುಪಿಯಿಂದ ‘ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ’ವನ್ನು ಆಯೋಜಿಸಲಾಗಿದೆ ಎಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳವಾರದಿಂದ ಆರಂಭಗೊಳ್ಳುವ ಜಾಥಾ ಆರು ದಿನಗಳ ಕಾಲ ಸಾಗಿ ಬೆಳಗಾವಿಯಲ್ಲಿ ಮುಕ್ತಾಯಗೊಳ್ಳಲಿದೆ. ಈ ಸಂದರ್ಭ ಸರ್ಕಾರದ ಮುಂದೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದರು. ಜಾಥಾವು ಉಡುಪಿಯಿಂದ ಆರಂಭಗೊಂಡು ದಕ್ಷಿಣ ಕನ್ನಡ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ, ಧಾರಾವಾಡ ಮಾರ್ಗವಾಗಿ ಬೆಳಗಾವಿಗೆ ತೆರಳಲಿದೆ ಎಂದು ಹೇಳಿದರು. ಕಳೆದ ವಿಧಾನಸಭಾ ಚುನಾವಣಾ ಹಂತದಲ್ಲಿ ಕಾಂಗ್ರೆಸ್ ಪಕ್ಷವು, ಈ ಹಿಂದಿನ ಬಿಜೆಪಿ ಸರ್ಕಾರ…
ಮಡಿಕೇರಿ ಡಿ.9 NEWS DESK : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಶಾಖೆಗೆ ಮಡಿಕೇರಿಯಲ್ಲಿ ಮಂಜೂರಾಗಿರುವ 40 ಸೆಂಟ್ಸ್ ಜಾಗದಲ್ಲಿ ಸುಮಾರು ರೂ.5ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ಸಂಘದ ನೂತನ ಜಿಲ್ಲಾಧ್ಯಕ್ಷ ಮುಕ್ಕಾಟಿರ ಸಿ.ಅರುಣ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ನೌಕರರ ಸಂಘಕ್ಕೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 40 ಸೆಂಟ್ಸ್ ಜಾಗವನ್ನು ಹಿಂದಿನ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಈ ಜಾಗದಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಮಾಡುವ ಉದ್ದೇಶವನ್ನು ನೂತನ ಆಡಳಿತ ಮಂಡಳಿ ಹೊಂದಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಹಂತದ ಎಲ್ಲಾ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಂದ ವಂತಿಗೆ ಮತ್ತು ಸಹಕಾರ ಪಡೆಯಲು ಹಾಗೂ ಸಾರ್ವಜನಿಕರ ಬೆಂಬಲ ಮತ್ತು ಆರ್ಥಿಕ ಸಹಾಯ ಪಡೆಯಲು ಉದ್ದೇಶಿಸಿರುವುದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಶಾಖೆಯ 2024-29ನೇ ಸಾಲಿನ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಅಧ್ಯಕ್ಷನಾಗಿ ನಾನು…
ಮಡಿಕೇರಿ ಡಿ.9 NEWS DESK : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪ್ರಪ್ರಥಮ ಬಾರಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಪತ್ರಕರ್ತರಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಟೀಂ ಚೀತಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೀಂ ಚೀತಾ ಮತ್ತು ಟೀಂ ಸ್ಮಾಷರ್ಸ್ ನಡುವಿನ ಜಿದ್ದಜಿದ್ದಿನ ಫೈನಲ್ ಪಂದ್ಯದಲ್ಲಿ ಟೀಂ ಚೀತಾ ತಂಡ ನೇರ ಸೆಟ್‍ಗಳಿಂದ ಟೀಂ ಸ್ಮಾಷರ್ಸ್ ತಂಡವನ್ನು ಮಣಿಸಿತು. ಪರಿಣಾಮ ಪೇಮ್‍ಕುಮಾರ್ ನಾಯಕ್ವದ ಟೀಂ ಚೀತಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಇಸ್ಮಾಯಿಲ್ ಕಂಡಕೆರೆ ನಾಯಕತ್ವದ ಟೀಂ ಸ್ಮಾಷರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಇದಕ್ಕೂ ಮೊದಲು 5 ತಂಡಗಳ ನಡುವೆ ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಟೀಂ ಜಂಪರ್ಸ್, ಟೀಂ ಪವರ್ ಪಂಚರ್ಸ್, ಟೀಂ ಹಂಟರ್ಸ್, ಟೀಂ ಚೀತಾ, ಟೀಂ ಸ್ಮಾಷರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದರು. ಟೇಬಲ್ ಟಾಪರ್ ಟೀಂ ಚೀತಾ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ…
ಮಡಿಕೇರಿ ಡಿ.9 NEWS DESK : ದಕ್ಷಿಣ ಕನ್ನಡದ ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಡಿಕೇರಿಯ ಡಾ.ನಮ್ರೀನ್ ಆಸಿಫ್ ವಿ.ಎ ಅವರು “ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಯ ಪ್ರಭಾವದ ಕುರಿತು ಅಧ್ಯಯನ” ಎಂಬ ವಿಷಯದಲ್ಲಿ ಪಿಎಚ್‍ಡಿ ಪೂರ್ಣಗೊಳಿಸಿದ್ದಾರೆ. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮ್ಮ ವಿಶ್ವವಿದ್ಯಾನಿಲಯದ ಡಾ.ಗಣೇಶ್ ಎಸ್.ಆರ್, ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಹಾಗೂ ಸಹ ಪ್ರಾಧ್ಯಾಪಕ ಡಾ.ಪ್ರವೀಣ್ ಹಾಗೂ ಸಂಶೋಧನಾ ಸಂಯೋಜಕರಾದ ಡಾ.ಶೈಲಶ್ರೀ ವಿ.ಟಿ ಅವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಯನ್ನು ಪೂರ್ಣಗೊಳಿಸಿದರು. ಡಾ.ನಮ್ರೀನ್ ಆಸಿಫ್ ಅವರು ಮಡಿಕೇರಿಯ ಕೊಹಿನೂರು ರಸ್ತೆ ನಿವಾಸಿ ವಿ.ಎಸ್.ಮೊಹಮ್ಮದ್ ಆಸಿಫ್ ಹಾಗೂ ವಿ.ಎಸ್.ನಸೀಮಾ ದಂಪತಿಯ ಪುತ್ರಿ.
ಮಡಿಕೇರಿ, ಡಿ.9 NEWS DESK : ವಿದ್ಯಾರ್ಥಿಗಳು ಶಿಸ್ತಿನೊಂದಿಗೆ ಮುನ್ನಡೆದರೆ ಸಾಧನೆ ಸಾಧ್ಯವಾಗುತ್ತದೆ ಎಂದು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಸಲಹೆ ನೀಡಿದರು. ಮಂಗಳೂರು ಮತ್ತು ಕೊಡಗು ವಿಶ್ವವಿದ್ಯಾಲಯ ಅಧೀನದ ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜಿನ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘವನ್ನು ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ, ಅವರು ಮಾತನಾಡಿದರು. ಭವ್ಯ ಇತಿಹಾಸವನ್ನು ಫೀ.ಮಾ. ಕಾರ್ಯಪ್ಪ ಕಾಲೇಜು ಹೊಂದಿದ್ದು, ವಿದ್ಯಾಸಂಸ್ಥೆಗೆ ಅಗೌರವ ತರುವ ಯಾವುದೇ ಕೆಲಸ ವಿದ್ಯಾರ್ಥಿಗಳು ಮಾಡಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ವಿದ್ಯಾರ್ಥಿ ಸಂಘದ ನಾಯಕರು ತಮ್ಮ ಜವಾಬ್ದಾರಿ ಅರಿತು ಮುನ್ನಡೆಯಬೇಕು. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಪಡೆಯ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು. ಸಂಘದ ಸಲಹೆಗಾರ ಬಿ.ಹೆಚ್.ತಳವಾರ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಪ್ರೊ.ತಿಪ್ಪೇಸ್ವಾಮಿ, ಮಹಿಳಾ ಕ್ಷೇಮಾಭಿವೃದ್ಧಿ ಘಟಕ ಸಂಚಾಲಕಿ ಡಾ.ನಯನ ಕಾಶ್ಯಪ್, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಂದನ್ ನಂದರುಬೆಟ್ಟು, ಪ್ರಮುಖರಾದ ಡಾ.ಮಹದೇವಯ್ಯ, ಡಾ.ಶೃಂಗಾರ್,…






