ಲೇಖಕ: Lakshmish S K

ಮಡಿಕೇರಿ ಮಾ 4-ನಗರದ ಹೊಸಬಡಾವಣೆಯಲ್ಲಿ ಇರುವ ಯುರೋಕಿಡ್ಸ್ ಮಡಿಕೇರಿ ಪಬ್ಲಿಕ್ ಶಾಲೆಯಲ್ಲಿ ‘ಟ್ಯಾಲೆಂಟ್ ಡಿಸ್ಪ್ಲೇ ಮತ್ತು ಗ್ರಾಜುಯೇಷನ್ ಡೇ’ ಜರುಗಿತು. ದೀಪವನ್ನು ಹಿಡಿದು ಯು.ಕೆ.ಜಿ ಮಕ್ಕಳು ತಮ್ಮ ‘ಗ್ರಾಜುಯೇಷನ್ ಡೇ’ ಯನ್ನು ಸಂಭ್ರಮಿಸಿದರು.  ಒಳ್ಳೆಯ ಪ್ರಜೆಯಾಗಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗುವನೆಂಬ ಪ್ರತಿಜ್ಞೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು. ಸಮಾರಂಭದ ಮುಖ್ಯ ಅತಿಥಿ ನಗರಸಭಾ ಸದಸ್ಯೆ ನೆರವಂಡ  ಅನಿತಾ ಪೂವಯ್ಯ ಮಾತನಾಡಿ,ವಿದ್ಯಾರ್ಥಿಗಳಿಗೆ ಭವಿಷ್ಯದ ಬಗೆ ಧನಾತ್ಮಕ ಚಿಂತನೆನ್ನು ಅಳವಡಿಸಿಕೊಳ್ಳಬೇಕೆಂದು ಹಿತವಚನ ನುಡಿದರು. .ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಂ ನಾಣಯ್ಯ, ಮಕ್ಕಳನ್ನು ಮೊಬೈಲ್ ಮಾಯಾಜಾಲದಿಂದ ದೂರವಿಡಬೇಕೆಂಬ ಬಗ್ಗೆ ಪೋಷಕರಿಗೆ ಸಲಹೆ ನೀಡಿದರು. ಶಾಲೆಯ ಪ್ರಾಂಶುಪಾಲೆ ರಶ್ಮಿದೀಪ ಎನ್. ಟಿ. ಟಿ  ಪ್ರತಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಿದರು.  ವಿದ್ಯಾರ್ಥಿಗಳಿಂದ ‘ಸಿದ್ಧಾರ್ಥನಿಂದ ಬುದ್ಧನೆಡೆಗೆ’ ಎಂಬ ಕಿರುನಾಟಕವನ್ನು ಪ್ರದರ್ಶಿತವಾಯಿತು.  ‘ಆಸೆಯೇ ದು:ಖಕ್ಕೆ ಮೂಲ’ ಎಂಬ ಗೌತಮಬುದ್ಧನ ತತ್ವವನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳು ಅಭಿನಯಿಸಿದರು. ಅಶ್ಲೀಲತೆಯ ಸೋಂಕಿಲ್ಲದ, ಭಾವಾಭಿನಯದ ಕನ್ನಡ ನುಡಿಯನ್ನು ಹಾಡಿ ಹೋಗಳುವ, ರೆಟ್ರೋ ಶೈಲಿಯ ಸೇರಿದಂತೆ  ಹಲವಾರು ವೈವಿಧ್ಯಮಯ ಸದಭಿರುಚಿಯ…

Read More

ಕುಟ್ಟ ಠಾಣಾ ವ್ಯಾಪ್ತಿಯ ಕೊಡಂಗೆ ಜೇನುಕುರುಬರ ಹಾಡಿಗೆ ಮಹಿಳಾ ಠಾಣೆಯ ಪಿಐ ಉಮೇಶ್ ಕುಮಾರ್ ಮತ್ತು ಕುಟ್ಟ ಠಾಣೆ ಪಿಎಸ್‌ಐ ತಮ್ಮಯ್ಯ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು ಭೇಟಿ ನೀಡಿ ಹಾಡಿಯ ವಾಸಿಗಳಿಗೆ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ, ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಅಲ್ಲದೆ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ, ವಿವಿಧ ಸಹಾಯವಾಣಿ ಸಂಖ್ಯೆಗಳಾದ 1098, 112, 1930 ಗಳ ಬಗ್ಗೆ ಮಾಹಿತಿ ನೀಡಿ ಹಾಡಿಯ ವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಡೆಸಲಾದ ಈ ಜಾಗೃತಿ ಕಾರ್ಯಕ್ರಮದಲ್ಲಿ ಸುಮಾರು 50 ರಿಂದ 60 ಜನ ಹಾಡಿಯ ನಿವಾಸಿಗಳು ಸೇರಿದ್ದರು.

Read More

ಕುಶಾಲನಗರ : ಬಾಹ್ಯ ದೇವಾಲಯಗಳನ್ನು ಧಿಕ್ಕರಿಸಿ ಅಂತರಂಗದ ಅರಿವಿಗೆ ಹೆಚ್ಚು ಒತ್ತು ನೀಡಿದ ಶರಣರು ವಚನಗಳ ಮೂಲಕ ಹಚ್ಚಿರುವ ಮಾನವತೆಯ ದೀಪ ಎಂದಿಗೂ ಆರದ ದೀಪ ಎಂದು ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಉಪನ್ಯಾಸಕ ಮೆ.ನಾ.ವೆಂಕಟನಾಯಕ್ ಬಣ್ಣಿಸಿದರು. ಕೊಡಗು ಜಿಲ್ಲಾ ವೀರಶೈವ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ತೊರೆನೂರು ವಿರಕ್ತ ಮಠದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಶ್ರೀಮಠದ ಮಹಾಂತ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಸಿಕ ಹುಣ್ಣಿಮೆಯ ಚಿಂತನಾಗೋಷ್ಠಿಯಲ್ಲಿ ವಚನಕಾರರ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಅರಿವೇ ನುಡಿ ಜ್ಯೋತಿರ್ಲಿಂಗ. ನಾವಾಡುವ ಮಾತುಗಳು ಮುತ್ತಿನ ಹಾರದಂತಿರಬೇಕು. ಇವನಾರವ ಎನ್ನದೇ ನಮ್ಮವ ಎಂದು ಅಪ್ಪುವ ಮೂಲಕ ವಿಶ್ವಮಾನವರಾಗಬೇಕು. ಇತರರಿಗೆ ಯಾವುದೇ ಕೆಡುಕು ಬಯಸದೆ ಸರ್ವ ಹಿತ ಬಯಸುವ ಶರಣರ ಚಿಂತನೆಗಳು ಸರ್ವಕಾಲಕ್ಕೂ ಮಾನವೀಯ ಬದುಕಿಗೆ ದಿವ್ಯ ಔಷಧಿ ಎಂದರು. ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಅಜಗಣ್ಣ, ಮುಕ್ತಾಯಕ್ಕಾ, ಆಯ್ದಕ್ಕಿ ಲಕ್ಕಮ್ಮ ಮೊದಲಾದ ಶರಣರ ಚಿಂತನೆಗಳನ್ನು ಎಲ್ಲರೂ ಅರಿಯುವ…

Read More

ಕೊಡಗು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ವತಿಯಿಂದ ವಲಸೆ ಕಾರ್ಮಿಕರ ಸಮಸ್ಯೆ ಸೇರಿದಂತೆ ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಲಾಯಿತು. ಕೊಡಗು ಜಿಲ್ಲಾ ಅಧ್ಯಕ್ಷರಾದ ಕಲಾ ಪ್ರಕಾಶ್, ವಿರಾಜಪೇಟೆ ತಾಲೂಕು ಅಧ್ಯಕ್ಷರು ಹಾಗೂ ಉಸ್ತುವಾರಿ ಬೆಲ್ಲು ಕಾರ್ಯಪ್ಪ, ಜಿಲ್ಲಾ ಉಸ್ತುವಾರಿ ತನು ಕಿಶೋರ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು DC ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಜಿಲ್ಲೆಗೆ ಹೊರರಾಜ್ಯಗಳಿಂದ ಆಗಮಿಸುತ್ತಿರುವ ವಲಸೆ ಕಾರ್ಮಿಕರ ಸಮಗ್ರ ನೋಂದಣಿ, ಅವರ ಗುರುತಿನ ಪರಿಶೀಲನೆ, ವಾಸ್ತವ್ಯದ ಮೇಲ್ವಿಚಾರಣೆ ಹಾಗೂ ಕಾನೂನುಬದ್ಧ ನಿಯಮಗಳ ಕಟ್ಟುನಿಟ್ಟಿನ ಅನುಸರಣೆ ಮಾಡುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಲಾಗಿದೆ. ಸಾರ್ವಜನಿಕರ ಭದ್ರತೆ ಮತ್ತು ಶಾಂತಿ ಕಾಪಾಡುವ ದೃಷ್ಟಿಯಿಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವುದು ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವಂತೆ ಕೂಡ ಮನವಿ ಪತ್ರದಲ್ಲಿ…

Read More

ಮಡಿಕೇರಿ, NEWS DESK ಮಾ.3 : ಜಿಲ್ಲೆಯ ಶಾಂತಿ ಸೌಹಾರ್ದತೆಗೆ ದಕ್ಕೆ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಪೋಕ್ಲುವಿನಲ್ಲಿ ಇತ್ತೀಚೆಗೆ ಗೌತಮ್ ಎಂಬ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇದು ಶಾಂತಿ ಕದಡುವ ಯತ್ನವಾಗಿದ್ದು, ಹಲ್ಲೆ ಮಾಡಿದವರನ್ನು ತಕ್ಷಣ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ನಾಪೋಕ್ಲು ಭಾಗದಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲ್ಲೆ ಪ್ರಕರಣಗಳು ಸಾಮಾನ್ಯವಾಗಿದೆ. ನಾಪೋಕ್ಲು ಪೊಲೀಸ್ ಠಾಣೆಯನ್ನು ಬಲಗೊಳಿಸಿ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಮತ್ತು ಗಾಂಜಾ ದಂಧೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೆಲವು ಪ್ರಕರಣಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ ಎಂದು ಮನು ಮುತ್ತಪ್ಪ ಆರೋಪಿಸಿದರು. ಗ್ರಾ.ಪಂ ಸದಸ್ಯ ಪ್ರದೀಪ್ ಮಾತನಾಡಿ, ಅಹಿತಕರ ಘಟನೆಗಳು ನಡೆದಾಗ ಅಥವಾ ಅನ್ಯಾಯ ಸಂಭವಿಸಿದಾಗ ಪಕ್ಷಾತೀತ ಮತ್ತು ಧರ್ಮಾತೀತವಾಗಿ ಖಂಡಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು…

Read More

ಮಡಿಕೇರಿ NEWS DESK ಮಾ.4 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಂತರಾಷ್ಟ್ರೀಯ ಮಹಿಳಾ ದಿನವಾದ ಮಾ.8 ರಂದು ಕೊಡವ ಮಹಿಳೆಯರಿಗೆ ಶೇ.33 ರಷ್ಟು ಆಂತರಿಕ ಮೀಸಲಾತಿ ನೀಡಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಈ ಬಾರಿ “IWD 2026 – Give To Gain” ಎಂಬ ಘೋಷವಾಕ್ಯದಡಿ “ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ನಡೆಯುತ್ತಿದೆ. ಇದೇ ಸಂದರ್ಭ ಸಿಎನ್‌ಸಿಯು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಆವರಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ರಾಷ್ಟçಪತಿ ಹಾಗೂ ಸರಕಾರಕ್ಕೆ ಸಲ್ಲಿಸಲಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಈ ವರ್ಷದ “”Give To Gain” ಎಂಬ ಘೋಷವಾಕ್ಯವು ಉದಾರತೆ, ಸಹಯೋಗ ಮತ್ತು ಹಂಚಿಕೆಯ ಪ್ರಗತಿಯಲ್ಲಿ ಬೇರೂರಿರುವ ಮನೋಭಾವಕ್ಕೆ ಕರೆ ನೀಡುತ್ತದೆ. ಇದು ಸಿಎನ್‌ಸಿ ಸಂಘಟನೆಯ ಉದ್ದೇಶಗಳೊಂದಿಗೆ ಸ್ಪಂದಿಸುತ್ತದೆ. ಸೂಕ್ಷ್ಮಾತಿ ಸೂಕ್ಷ್ಮ ಆದಿಮಸಂಜಾತ ಏಕ-ಜನಾಂಗೀಯ ಅನಿಮಿಸ್ಟಿಕ್ ಕೊಡವ ಸಮುದಾಯದ, ವಿಶೇಷವಾಗಿ ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ…

Read More

ಮೈಸೂರು, NEWS DESK ಮಾ. 4: ಕಿತ್ತಳೆ ನಾಡು ಕೊಡಗು ಜಿಲ್ಲೆಯ ನಾಗರಿಕರಿಗೆ ಸಂತಸದ ಸುದ್ದಿ. *ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌* ಪರಿಶ್ರಮದ ಫಲವಾಗಿ ಕೊಡಗಿನಲ್ಲಿ ಪಾಸ್‌ಪೋರ್ಟ್‌ ಆಯೋಜಿಸಲು ಬೆಂಗಳೂರು ವಿಭಾಗೀಯ ಪಾಸ್‌ಪೋರ್ಟ್‌ ಕಚೇರಿ ನಿರ್ಧರಿಸಿದೆ. ಏಪ್ರಿಲ್‌ 8ರಿಂದ ಮೂರು ದಿನಗಳ ಕಾಲ ಕೊಡಗ ಜಿಲ್ಲೆಯಲ್ಲಿ ಪಾಸ್‌ಪೋರ್ಟ್‌ ಮೇಳ ನಡೆಯಲಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದ ಯದುವೀರ್‌ ಒಡೆಯರ್‌ ಕೊಡಗು ಜಿಲ್ಲೆಯಲ್ಲಿ ಪಾಸ್‌ಪೋರ್ಟ್‌ ಮೇಳ ಆಯೋಜಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಬೆಂಗಳೂರು ರೀಜನಲ್‌ ಪಾಸ್‌ಪೋರ್ಟ್‌ ಅಧಿಕಾರಿಗಳು ಸಂಸದರಿಗೆ ಪತ್ರ ಬರೆದು, ಏಪ್ರಿಲ್‌ 8, 9, 10ರಂದು ಮೇಳ ಆಯೋಜಿಸಲಾಗುವುದು ಹಾಗೂ 8 ರಂದು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಆಗಮಿಸಬೇಕು ಎಂದು ಸಂಸದ ಯದುವೀರ್‌ ಒಡೆಯರ್‌ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಂಸದ ಯದುವೀರ್‌ ಒಡೆಯರ್‌, ಕೊಡಗು ಜಿಲ್ಲೆಯ ಹಲವಾರು ಮಂದಿ ಪಾಸ್‌ಪೋರ್ಟ್‌ ಬೇಕು…

Read More

ಮಡಿಕೇರಿ NEWS DESK  ಮಾ.4 : ಮಡಿಕೇರಿ ಹಿಂದೂ ಮಲಯಾಳಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್.ರಮೇಶ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ನಾಯರ್ ಇ.ಬಿ, ಖಜಾಂಚಿಯಾಗಿ ದಿನೇಶ್ ಎಂ.ಎಸ್, ಉಪಾಧ್ಯಕ್ಷರಾಗಿ ಪ್ರಮೋದ್ ಟಿ.ಆರ್, ಗೌರವಾಧ್ಯಕ್ಷರಾಗಿ ಧರ್ಮೇಂದ್ರ ಕೆ.ವಿ, ಕಾರ್ಯದರ್ಶಿಯಾಗಿ ಸಂದೀಪ್ ಎಸ್., ಸಹ ಕಾರ್ಯದರ್ಶಿ ವಸಂತಕುಮಾರ್ (ಮನು), ಸಹ ಖಜಾಂಚಿ ಹರೀಶ್ ಸಿ.ಕೆ, ಸಂಘಟನಾ ಕಾರ್ಯದರ್ಶಿ ಮೋಹನ್ ಕೆ.ಕೆ, ಸಹ ಸಂಘಟನಾ ಕಾರ್ಯದರ್ಶಿ ಪ್ರಭಾಕರ್ ಸಿ.ಕೆ, ಕಚೇರಿ ಕಾರ್ಯದರ್ಶಿಯಾಗಿ ಶಿವನ್ ಕೆ.ಪಿ, ಪ್ರಚಾರ ಸಮಿತಿಗೆ ಸುಬ್ರಮಣಿ ಪಿ.ವಿ, ಗೋಪಿನಾಥ್ ಟಿ.ವಿ, ಮೀಡಿಯಾ ವಕ್ತಾರರಾಗಿ ಅಶೋಕ್ ಹೆಚ್.ಪಿ, ಯುವ ಘಟಕದ ಅಧ್ಯಕ್ಷರಾಗಿ ಅರವಿಂದ್ ಆರ್, ಉಪಾಧ್ಯಕ್ಷರಾಗಿ ಮುರಳಿ ಕೆ.ಆರ್, ಕಾರ್ಯದರ್ಶಿಯಾಗಿ ರದೀಶ್ ಕೆ.ಆರ್, ಶ್ರದ್ಧಾಂಜಲಿ ಸಮಿತಿ ಉಸ್ತುವಾರಿಗಳಾಗಿ ಪ್ರಕಾಶ್ (ಉಣ್ಣಿ), ವಿಜಯ್ ಕುಮಾರ್ ಪಿ, ರಮೇಶ್ ಎನ್, ಸದಸ್ಯತ್ವ ಅಭಿಯಾನದ ಉಸ್ತುವಾರಿಗಳಾಗಿ ರವಿ ಎಂ.ಪಿ, ಹರೀಶ್…

Read More

ಮಡಿಕೇರಿ  NEWS DESK ಮಾ.4 : ಪ್ರಕೃತಿಯ ನಡುವಿನ ಚಾರಣ ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಡಿಕೇರಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರು ಅಭಿಪ್ರಾಯಪಟ್ಟಿದ್ದಾರೆ. ಕೋಡಂಬೂರು ಮೂರ್ನಾಡು ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯ ಸಹಕಾರದೊಂದಿಗೆ  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಡಿಕೇರಿ ಸ್ಥಳೀಯ ಸಂಸ್ಥೆಯ ವತಿಯಿಂದ ಇತ್ತೀಚೆಗೆ ವಿರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ನಡೆದ ಚಾರಣದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಚಾರಣವು ಹಸಿರ ಪ್ರಕೃತಿ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶವಾಗಿದೆ. ಅಲ್ಲದೆ ಮಾನಸಿಕ ಶಾಮತಿ ಮತ್ತು ದೈಹಿಕ ಸದೃಢತೆ ಹೆಚ್ಚಾಗುತ್ತದೆ. ಬೆಟ್ಟಗುಡ್ಡಗಳ ಮತ್ತು ಕಾಡುಗಳ ನಡುವಿನ ಪಯಣ ಹೊಸ ಅನುಭವವನ್ನು ನೀಡುತ್ತದೆ.   ದೈನಂದಿನ ಜೀವನದ ಒತ್ತಡದಿಂದ ಮುಕ್ತಿ ಪಡೆದು ಸಾಹಸಮಯ ಕ್ಷಣಗಳಿಗೆ ದೇಹವನ್ನು ಒಗ್ಗಿಸಿಕೊಳ್ಳಲು ಚಾರಣ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳ ಶಿಸ್ತುಬದ್ಧ ಬದುಕಿಗೆ ದಾರಿದೀಪವಾಗಿದೆ. ಶೈಕ್ಷಣಿಕ ಮತ್ತು ವೈಯುಕ್ತಿಕ…

Read More