ಮಡಿಕೇರಿ ಜ.11 : ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ನೂತನ ಸಂಘಟನಾ ಸಂಚಾಲಕರಾಗಿ ಭಾವ ಮಾಲ್ದಾರೆ, ಎಂ.ಮನೋಜ್ ಕುಮಾರ್, ರಘು ವಿರಾಜಪೇಟೆ, ರಫೀಕ್ ಪೊನ್ನಂಪೇಟೆ ಹಾಗೂ ಸದಸ್ಯರಾಗಿ ಕುಮಾರಸ್ವಾಮಿ ಕುಶಾಲನಗರ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ತಿಳಿಸಿದ್ದಾರೆ.
ತಾಲ್ಲೂಕು ಸಂಚಾಲಕರಾಗಿ ಮನು ವಿರಾಜಪೇಟೆ, ಉಮೇಶ್ ಕುಶಾಲನಗರ, ಶ್ರೀನಿವಾಸ್ ಮಡಿಕೇರಿ, ಅರುಣ ಪೊನ್ನಂಪೇಟೆ ಹಾಗೂ ನಾಗರಾಜ್ ಸೋಮವಾರಪೇಟೆ ನೇಮಕಗೊಂಡಿದ್ದಾರೆ.
ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿಯಾಗಿ ಪವಿತ್ರ ಶಿವಕುಮಾರ್, ಸಂಘಟನಾ ಸಂಚಾಲಕಿಯರಾಗಿ ಪದ್ಮಾವತಿ ಕುಶಾಲನಗರ, ನಾಗಮ್ಮ ಕೊಡ್ಲಿಪೇಟೆ, ಶಶಿಕಲಾ ಹಾಗೂ ಖಜಾಂಚಿಯಾಗಿ ಭಾಗ್ಯವತಿ, ತಾಲ್ಲೂಕು ಸಂಚಾಲಕರಾಗಿ ಗೌರಮ್ಮ ಜಯಣ್ಣ ಕುಶಾಲನಗರ, ರೇಖಾ ಮಹೇಶ್ ವಿರಾಜಪೇಟೆ, ನೇತ್ರಾವತಿ ಪೊನ್ನಂಪೇಟೆ ಹಾಗೂ ಹೆಚ್.ಹೆಚ್.ಗೌರಮ್ಮ ಮಡಿಕೇರಿ ಆಯ್ಕೆಯಾಗಿದ್ದಾರೆ.
::: ಸದಸ್ಯತ್ವ ನೋಂದಣಿ :::
ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಅವರು ತಿತಿಮತಿ, ಕಾರೇಕಾಡು, ದೇವಮ್ಮಚ್ಚಿ ಪೈಸಾರಿಗೆ ಭೇಟಿ ನೀಡಿ ಸಮಿತಿಯ ಪ್ರಾಥಮಿಕ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಿದರು. ನಂತರ ಜನರ ಕುಂದು ಕೊರತೆಗಳನ್ನು ಆಲಿಸಿದರು. ಈ ಸಂದರ್ಭ ಮುತ್ತಮ್ಮ, ದಲಿತ ಮುಖಂಡರು ಹಾಗೂ ಪೈಸಾರಿ ನಿವಾಸಿಗಳು ಹಾಜರಿದ್ದರು.


















