ಮಡಿಕೇರಿ ಡಿ.20 NEWS DESK : ಮಹಾಲೇಖಪಾಲರ ಕಚೇರಿಯ ಮುಖ್ಯ ಮಹಾಲೇಖಪಾಲರು, ಡೆಪ್ಯೂಟಿ ಅಕೌಂಟೆಂಟ್ ಜನರಲ್, ಹಿರಿಯ ಲೆಕ್ಕಾಧಿಕಾರಿಗಳು, ಬ್ಯಾಂಕುಗಳು ಹಾಗೂ ಖಜಾನೆ ಇಲಾಖೆಯಿಂದ ಅಪರ ನಿರ್ದೇಶಕರು, ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆ, ಬೆಂಗಳೂರು ಇವರ ಸಮನ್ವಯದೊಂದಿಗೆ ಪಿಂಚಣಿದಾರರ ಕುಂದುಕೊರತೆ ಮತ್ತು ಅಹವಾಲುಗಳಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಡಿಸೆಂಬರ್, 26 ರಂದು ಬೆಳಗ್ಗೆ 10.30 ಗಂಟೆಗೆ ಮೈಸೂರು ವಿಭಾಗ ಮಟ್ಟದ ಪಿಂಚಣಿ ಅದಲಾತ್ ಹಾಗೂ ಜಿಪಿಎಫ್ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಆಯಾಯ ಜಿಲ್ಲೆಗಳಲ್ಲಿ ವಾಸವಿರುವ ಪಿಂಚಣಿದಾರರು ಈ ಪಿಂಚಣಿ ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನು ನಿವಾಹಿಸಿಕೊಳ್ಳಬಹುದು ಎಂದು ಚಿಕ್ಕಮಗಳೂರು ಜಿಲ್ಲಾ ಖಜಾನೆಯ ಉಪ ನಿರ್ದೇಶಕರು ಕೋರಿದ್ದಾರೆ.










