ಮಡಿಕೇರಿ ಜ.11 : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಜ.28 ರಂದು ಬೆಟ್ಟಗೇರಿ ಉದಯ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಸಮ್ಮೇಳನದಲ್ಲಿ ಯುವಕವಿಗಳಿಂದ ಕವಿ ಗೋಷ್ಠಿ, ಗಾಯಕರುಗಳಿಂದ ಗುಂಪು ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಕವನವು 12 ರಿಂದ 20 ಸಾಲುಗಳ ಮಿತಿಯಲ್ಲಿ ಇರತಕ್ಕದ್ದು. ಮಡಿಕೇರಿ ತಾಲೂಕಿನ ಯುವಕವಿಗಳಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಕವನ ವಾಚನ ಮಾಡುವವರು ತಮ್ಮ ಹೆಸರು, ವಿಳಾಸ, ವಾಟ್ಸಾಪ್ ಸಂಖ್ಯೆ ಫೋಟೋ ದೊಂದಿಗೆ ದಿನಾಂಕ 16.01.2023ರ ಒಳಗಾಗಿ ತಾವು ರಚಿಸಿದ ಕವನವನ್ನು ಶ್ರೀ ಅಂಬೇಕಲ್ ನವೀನ್, ಕಾರ್ಯಾಧ್ಯಕ್ಷರು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ, ಸುದರ್ಶನ ವೃತ್ತದ ಬಳಿ, ಮಡಿಕೇರಿ. ಇಲ್ಲಿಗೆ ಕಳುಹಿಸತಕ್ಕದ್ದು ಅಥವಾ ವಾಟ್ಸಪ್ ಮೂಲಕ ದೂರವಾಣಿ ಸಂಖ್ಯೆ 9448005642 ಯನ್ನು ಸಂಪರ್ಕಿಸಿ ಕವನ ಮತ್ತು ಅರ್ಜಿಯನ್ನು ಸಲ್ಲಿಸತಕ್ಕದ್ದು.
ಗುಂಪು ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳು ಮತ್ತು ಅಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಮಡಿಕೇರಿ ತಾಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಕೆಳಗಿನ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸತಕ್ಕದ್ದು ಅಥವಾ ಈ ಕೆಳಗಿನ ಸಂಖ್ಯೆಗೆ ವಾಟ್ಸಪ್ ಮೂಲಕ ದಿನಾಂಕ 16.01.2023ರ ಒಳಗಾಗಿ ಅರ್ಜಿ ಮತ್ತು ಮಾಹಿತಿಯನ್ನು ಸಲ್ಲಿಸತಕ್ಕದ್ದು. ಕಡ್ಲೆರ ತುಳಸಿ ಮೋಹನ್, ಅಧ್ಯಕ್ಷರು, ಸಾಂಸ್ಕೃತಿಕ ಸಮಿತಿ, ಮಡಿಕೇರಿ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಉದಯ ಪ್ರೌಢಶಾಲೆ, ಬೆಟ್ಟಗೇರಿ,ಮಡಿಕೇರಿ ತಾಲ್ಲೂಕು. ಮೊಬೈಲ್ ಸಂಖ್ಯೆ 702288480ಗೆ ವಾಟ್ಸಾಪ್ ಮೂಲಕ ಕಳಹಿಸತಕ್ಕದ್ದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.