ಕುಶಾಲನಗರ, ಜ.14: ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪದವಿ ಕಾಲೇಜಿನಲ್ಲಿ ಅಂತರ ಜಿಲ್ಲಾ ಮಟ್ಟದ ಪಿಯು ಕಾಲೇಜಿನ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾವಳಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಫಾ.ಜೋಸೇಫ್ ವರ್ಗಿಸ್ ಪಂದ್ಯಾವಳಿಗೆ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ಒಟ್ಟು 15 ತಂಡಗಳು ಪಾಲ್ಗೊಂಡಿದ್ದವು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಅರಕಲಗೂಡು ಬಿಜಿಎಸ್ ತಂಡ ಪ್ರಥಮ, ದ್ವೀತಿಯ ಸ್ಥಾನವನ್ನು ಹುಣಸೂರು ಟಾಲೆಂಟ್ ಪಿಯು ಕಾಲೇಜ್ ಮತ್ತು ತೃತೀಯ ಸ್ಥಾನವನ್ನು ಪಾಲಿಬೆಟ್ಟ ಸರ್ಕಾರಿ ಪಿಯು ಕಾಲೇಜು ಪಡೆದುಕೊಂಡಿತ್ತು.
ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪ ಸೆಂಟ್ ಮೇರಿಸ್ ಪ್ರಥಮ, ನೆಲ್ಲಿಹುದಿಕೇರಿ ಸರ್ಕಾರಿ ಪಿಯು ಕಾಲೇಜು ದ್ವಿತೀಯ ಸ್ಥಾನ ಮತ್ತು ತೃತೀಯ ಸ್ಥಾನವನ್ನು ಕೊಪ್ಪ ಭಾರತ್ ಮಾತಾ ಪಿಯು ಕಾಲೇಜು ತನ್ನದಾಗಿಸಿಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಉಪಪ್ರಾಂಶುಪಾಲರಾದ ಫಾ.ಅಭಿನ್ ಬೇಬಿ, ಉದ್ಯಮಿ ಬಾಷಾ, ಉಲ್ಲಾಸ್ ಕೃಷ್ಣ, ಸೆಂಟ್ ಮೇರಿಸ್ ಕಾಲೇಜಿನ ಆಡಳಿತಾಧಿಕಾರಿ ಅರುಲ್ ಸೆಲ್ವಿ, ಲೋಕೋಪಯೋಗಿ ಅಧಿಕಾರಿ ಸೈಜನ್ ಕೆ.ಪೀಟರ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್, ಪ್ರದೀಪ್, ಚಂದನ್ ಮತ್ತಿತರರು ಇದ್ದರು.









