ಮಡಿಕೇರಿ ಫೆ.23 : ಭಾರತ ಸರ್ಕಾರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ,ಕೊಡಗು(ಮಡಿಕೇರಿ) 2022-23ನೇ ಸಾಲಿನ ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ತಾಲ್ಲೂಕಿಗೆ ಇಬ್ಬರಂತೆ ಕೆಲಸ ಮಾಡಲು ಕೊಡಗು ಜಿಲ್ಲೆಯಲ್ಲಿ ವಾಸವಾಗಿರುವಂತವರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಗ್ರಾಮೀಣ ಭಾಗದಲ್ಲಿ ಯುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಯುವಕ/ಯುವತಿ ಸಂಘಗಳನ್ನು ರಚಿಸುವುದು, ಆರೋಗ್ಯ, ಸಾಕ್ಷರತೆ, ನೈರ್ಮಲ್ಯ ಹಾಗೂ ಸಾಮಾಜಿಕ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವುದು. ಯುವ ನಾಯಕರಾಗಿ ಹೊರಹೊಮ್ಮಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬಯಸುವ ಯುವ ಜನರಿಗೆ ಉತ್ತಮ ಅವಕಾಶ.
• ವಿದ್ಯಾರ್ಹತೆ ಕನಿಷ್ಠ SSLC ಪಾಸಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಯವರಿಗೆ ಆದ್ಯತೆಯಿದೆ.
• 18 ರಿಂದ 29 ವರ್ಷದ ಒಳಗಿನವರಾಗಿರಬೇಕು (01.04.23ಕ್ಕೆ ಅನ್ವಯವಾಗುವಂತೆ). ಎನ್.ಎಸ್.ಎಸ್./ಎನ್.ಸಿ.ಸಿ ಯಲ್ಲಿ ಅನುಭವವುಳ್ಳ ಅಭ್ಯರ್ಥಿಗಳು ಹಾಗೂ ನೆಹರು ಯುವ ಕೇಂದ್ರದಲ್ಲಿ ನೋಂದಾಯಿತ ಯುವಕ/ಯುವತಿ ಸಂಘಗಳ ಸದಸ್ಯರುಗಳಿಗೆ, ಮೊದ¯ ಆದ್ಯತೆ ನೀಡಲಾಗುವುದು.
• ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳು ಹಾಗೂ ಈಗಾಗಲೇ ಬೇರೆ ಕಡೆ ಕೆಲಸ ಮಾಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.
• ಆಯ್ಕೆಯಾದ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವಾಸ ಭತ್ಯೆ ಸೇರಿ ಮಾಸಿಕ ರೂ.5,000/- ಗೌರವಧನವನ್ನು ನೀಡಲಾಗುವುದು.
• ಯೋಜನೆಯ ಅವಧಿಯು 2 ವರ್ಷಗಳದ್ದಾಗಿದ್ದು ಮೊದಲ ವರ್ಷದಲ್ಲಿ ಅವರ ಕೆಲಸ-ಕಾರ್ಯಗಳು ತೃಪ್ತಿಕರವಾಗಿದ್ದಲ್ಲಿ ಮಾತ್ರ ಅವರ ಸೇವೆಯನ್ನು ಎರಡನೆಯ ವರ್ಷಕ್ಕೆ ವಿಸ್ತರಿಸಲಾಗುವುದು.
• ಈ ನೇಮಕಾತಿಯು ಕೇವಲ ಗುತ್ತಿಗೆ ಆಧಾರದ ಮೇಲೆ ಆಗಿರುತ್ತದೆ. ಹಾಗೂ ಯಾವುದೇ ರೀತಿಯ ಉದ್ಯೋಗ ಅವಕಾಶವಲ್ಲ.
ಅರ್ಜಿ ಸಲ್ಲಿಸುವ ವಿಧಾನ: ಮೇಲಿನ ನಿಬಂಧನೆಗಳಿಗನುಗುಣವಾಗಿ, ಕೊಡಗು ಜಿಲ್ಲೆಯ ಅರ್ಹ ಆಸಕ್ತಿಯುಳ್ಳ ಯುವ ಜನರು/ಅಭ್ಯರ್ಥಿಗಳು ಅರ್ಜಿಯನ್ನು ಆನ್‍ಲೈನಲ್ಲಿ www.nyks.nic.in ನೇರವಾಗಿ ಸಲ್ಲಿಸಬಹುದಾಗಿದೆ ಅಥವಾ ಜಿಲ್ಲಾ ಯುವ ಅಧಿಕಾರಿಗಳ ಕಛೇರಿ, ನೆಹರು ಯುವ ಕೇಂದ್ರ, ಯಶು ನಿಲಯ, ಕಾವೇರಿ ಲೇಔಟ್, ಕೊಡಗು ಜಿಲ್ಲೆ, ಇಲ್ಲಿಗೆ ಬಂದು ನಿಗದಿತ ಅರ್ಜಿ ನಮೂನೆಯನ್ನು ಪಡೆದು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 09.03.2023 ಕಡೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08272-225470, 9591303604, 9961332968 ಸಂಪರ್ಕಿಸಬಹುದಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ತಿಳಿಸಿದ್ದಾರೆ.