Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » ತೀರ್ಥರೂಪದಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಿರುವ ಬಿಲಗುಂಜಿ ಕಮಲೇಶ್ವರ
ಮಹಾದೇಗುಲ

ತೀರ್ಥರೂಪದಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಿರುವ ಬಿಲಗುಂಜಿ ಕಮಲೇಶ್ವರ

March 7, 20233 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಿಕ್ಕಬಿಲಗುಂಜಿ ಕಮಲೇಶ್ವರ ದೇಗುಲದಲ್ಲಿ ಪರಶಿವ ಗಂಗೆಯ ಶಿರದ ಮೇಲೆ ನೆಲೆಸಿದ್ದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಕೀರ್ತಿಗಳಿಸಿದ್ದಾನೆ. ಇಲ್ಲಿ ಶಿವನ ಪದತಳದಲ್ಲಿ ಗಂಗೆ ತೀರ್ಥರೂಪದಲ್ಲಿ ನೆಲೆಸಿದ್ದು ಸದಾ ಹರಿಯುತ್ತಿರುತ್ತಾಳೆ.

ಕಲಾ ನಿಪುಣತೆ : 
ಸಂಪೂರ್ಣ ಶಿಲಾಮಯ ದೇಗುಲವಾಗಿರುವ ಈ ದೇವಸ್ಥಾನ ಸುಂದರ ಕಂಬಗಳ ಕೆತ್ತನೆ, ಜಗತಿ, ನವರಂಗ, ಗರ್ಭಗುಡಿ ಹಾಗೂ ನಂದಿಮಂಟಪ ಹೊಂದಿದೆ. ಮೇಲ್ಚಾವಣಿಯ ಮೇಲೆ ಮರ ಉರುಳಿ ಗೋಪುರ ಶಿಥಿಲಗೊಂಡ ಕಾರಣ ಹೊಸದಾಗಿ ಮರ ಮತ್ತು ಹಂಚು ಬಳಸಿ ಮೇಲ್ಚಾವಣಿ ನಿರ್ಮಿಸಲಾಗಿದೆ. ಇದರಿಂದಾಗಿ ಮೇಲ್ನೋಟಕ್ಕೆ ಆಧುನಿಕ ಕಟ್ಟಡದಂತೆ ತೋರುವ ಈ ದೇಗುಲ ಸಮೀಪಿಸಿದಾಗ ಶಿಲಾ ದೇಗುಲದ ವೈಭವ ಕಣ್ಣಿಗೆ ಕಟ್ಟುತ್ತದೆ.
ದೇಗುಲದ ಹಿಂಭಾಗದಲ್ಲಿ ಎತ್ತರದ ಶಿಖರ, ಮುಂಭಾಗದಲ್ಲಿ ಪವಿತ್ರ ಪುಷ್ಕರಣಿ ಇದೆ. ಎಲ್ಲೆಡೆ ಒಂದು ಪುಷ್ಕರಣಿ ಇದ್ದರೆ ಇಲ್ಲಿ ಎರಡು ಪುಷ್ಕರಣಿ ಹಾಗೂ ಎರಡು ತೀರ್ಥದ ನೆಲೆಯಿರುವುದು ಇರುವುದು ವಿಶೇಷ. ದೇಗುಲದ ಬಲಭಾಗದಲ್ಲಿ ಚಿಕ್ಕ ಆಲಯವಿದ್ದು ನಕ್ಷತ್ರಾಕಾರದ ಪುಷ್ಕರಣಿ ತೀರ್ಥದಲ್ಲಿ ಉದ್ಭವ ಶಿವಲಿಂಗವಿದೆ. ಈ ಶಿವಲಿಂಗ ನೆಲದಿಂದ 5 ಅಡಿ ಎತ್ತರವಿದ್ದು ಆಳ ಪತ್ತೆಯಾಗಿಲ್ಲ. ಈ ಶಿವಲಿಂಗದ ಎದುರು ನಂದಿ ವಿಗ್ರಹವಿದ್ದು ನಿಂತ ಭಂಗಿಯಲ್ಲಿದೆ. ನಿಂತ ಶೈಲಿಯ ನಂದಿ ವಿಗ್ರಹ ಭಾರತರದ ಕೆಲವೇ ಕೆಲವು ದೇಗುಲಗಳಲ್ಲಿದ್ದು ಇದು ಈ ಕ್ಷೇತ್ರದ ವಿಶೇಷತೆ ಯಾಗಿದೆ.

ಸ್ಥಳ ಪುರಾಣ :
ಈ ದೇಗುಲ ಅತ್ಯಂತ ಪ್ರಾಚೀನದಾಗಿದ್ದು, ಶಿವಪುರಾಣದಲ್ಲಿ ಉಲ್ಲೇಖವಿದೆ. ಹಿಂದೆ ಕಾಶಿರಾಜನು ದಕ್ಷಿಣ ಭಾರತದ ಪರ್ಯಟನೆಗೆ ಬಂದಾಗ ಈ ಕ್ಷೇತ್ರಕ್ಕೆ ಆಗಮಿಸಿದನಂತೆ. ಪ್ರತಿನಿತ್ಯ ಗಂಗಾ ಸೇವನೆ ನಂತರ ಉಳಿದ ಆಹಾರ ಸೇವನೆ ಆತನ ವ್ರತವಾಗಿತ್ತು. ಈ ಕ್ಷೇತ್ರಕ್ಕೆ ಬಂದಾಗ ಗಂಗೆಯ ಆಗಮನವಾಗಲಿಲ್ಲ. ಅದಕ್ಕಾಗಿ ಆತ ಅನ್ನ ಆಹಾರ ತ್ಯಜಿಸಿ ತಪಸ್ಸಿಗೆ ಕುಳಿತನಂತೆ.
ಆಗ ರಾತ್ರಿ ಕನಸಿನಲ್ಲಿ ಗಂಗೆ ಕಾಣಿಸಿಕೊಂಡು ನೀನು ತಪಕ್ಕೆ ಕುಳಿತ ಸನಿಹದ ನೆಲವನ್ನು ಅಗೆದು ನೋಡು. ತಾನು ನೆಲಸಿದ್ದೇನೆ ಅಂದು ತಿಳಿಸಿದನಂತೆ. ಅದೇ ರೀತಿ ರಾಜ ನೆಲವನ್ನು ಅಗೆಸಿ ತೆಗೆದಾಗ ಗಂಗೆ ಚಿಮ್ಮುತ್ತಾ ಹರಿಯುತ್ತಿದ್ದಳಂತೆ. ಗಂಗಾ ತೀರ್ಥ ಸೇವಿಸಿ ತಪಸ್ಸನ್ನು ಮುಗಿಸಿ ಕಾಶಿರಾಜ ಮುಂದಿನ ಪರ್ಯಟನೆ ಕೈಗೊಂಡನು. ಅನಂತರ ಹಲವು ವರ್ಷಗಳ ಕಾಲ ಗಂಗೆ ಉಕ್ಕಿ ಹರಿಯುತ್ತಿದ್ದಳು.
ಋಷಿಯೋರ್ವನು ಈ ಸ್ಥಳದಲ್ಲಿ ತಪಸ್ಸಿಗೆ ಕುಳಿತಾಗ ಗಂಗೆ ಮತ್ತೆ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಶಿರೋಭಾಗದಲ್ಲಿ ಈಶ್ವರಲಿಂಗ ಪ್ರತಿಷ್ಠಾಪಿಸುವಂತೆ ತಿಳಿಸಿದಳು. ಅಂತೆಯೇ ಶಿವಲಿಂಗ ಸ್ಥಾಪಿಸಿ ಅಂತರ್ಭಾಗದಲ್ಲಿ ಗಂಗೆ ಹರಿದು ಮುಂದಕ್ಕೆ ಸಾಗುವಂತೆ ಮಾಡಲಾಯಿತು. ಇಲ್ಲಿನ ಗರ್ಭಗುಡಿಯಲ್ಲಿನ ಶಿವಲಿಂಗದ ಕೆಳಗಿನಿಂದ ಗಂಗೆ ತೀರ್ಥರೂಪದಲ್ಲಿ ಹರಿದು ದೇಗುಲದ ಹಿಂಭಾಗದ ಗುಹೆಯಂತಹ ಸ್ಥಳದಲ್ಲಿ ಈಗಲೂ ಉಕ್ಕುತ್ತಿದ್ದಾಳೆ. ಅಲ್ಲಿಂದ ಉದ್ಭವಲಿಂಗ, ಹಾಗೂ ಪುಷ್ಕರಣಿಗಳ ಮೂಲಕ ಪ್ರವಹಿಸುತ್ತಿದ್ದಾಳೆ.

ರಾಜರಿಂದ ಪೂಜೆ : ಈ ಕ್ಷೇತ್ರ ಪ್ರಾಚೀನ ಕಾಲದಿಂದಲೂ ಶಕ್ತಿ ಸ್ಥಳವಾಗಿದ್ದು, 17 ನೇ ಶತಮಾನದಲ್ಲಿ ಕೆಳದಿ ಅರಸರ ಕಾಲದಲ್ಲಿ ಸುಸಜ್ಜಿತ ಶಿಲಾ ದೇವಾಲಯವಾಗಿ ಅಭಿವೃದ್ಧಿಗೊಂಡಿತು. ಇದು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದ್ದು, ಬನವಾಸಿಯ ಶ್ರೀಮಧುಕೇಶ್ವರ ದೇವಾಲಯದಂತೆ ಕಂಬಗಳ ರಚನೆ, ನವರಂಗ ಮುಖ ಮಂಟಪಗಳ ರಚನೆ ಹೊಂದಿದೆ. ಹಲವು ರಾಜ ಮನೆತನಗಳ ಅರಸರು ಭಕ್ತಿಯಿಂದ ಪೂಜಿಸಿ ದಾನ ದತ್ತಿಗಳನ್ನು ನೀಡುತ್ತಿದ್ದರು.
ಕೆಳದಿ ಅರಸರು ಶಿವರಾತ್ರಿಯ ದಿನ ಇಲ್ಲಿಗೆ ಆಗಮಿಸಿ ಮಹಾಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಕೆಳದಿ ನೃಪವಿಜಯದಲ್ಲಿ ವರ್ಣನೆಯಿದೆ. ನಂತರ ಘೋರ ತಪಸ್ವಿಗಳಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳು ನರ್ಮದಾ ನದಿಯಿಂದ ಕಮಲ ಶಿಲೆಯ ಲಿಂಗವನ್ನು ತರಿಸಿ ಇಲ್ಲಿ ಪ್ರತಿಷ್ಠಾಪಿಸಿದ್ದು, ಈ ಲಿಂಗ ಸೂರ್ಯನ ಬೆಳಕಿನ ಸಮಯದಲ್ಲಿ ವಿಶೇಷ ಹೊಳಪನ್ನು ಹೊರ ಸೂಸುತ್ತದೆ.
ದೇವಾಲಯದ ಅಡಿಪಾಯ ಮಣ್ಣಿನಲ್ಲಿ ಹೂತು ಹೋಗಿದ್ದು ದೇಗುಲದ ಜಗುಲಿ, ಗರ್ಭಗುಡಿಗಳು ನೆಲಮಟ್ಟದಲ್ಲೇ ಇವೆ. ಹಿಂಭಾಗದ ಶಿಖರದ ಮಣ್ಣು ಕುಸಿದು ಅಡಿಪಾಯ , ಅಮೂಲ್ಯ ಶಾಸನ, ಪರಿವಾರ ದೇವತೆಗಳ ವಿಗ್ರಹಗಳು ಮುಚ್ಚಿ ಹೋಗಿರುವ ಶಂಕೆ ಇದ್ದು ಉತ್ಖನನದ ಮೂಲಕ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.

ಪವಿತ್ರ ತಪೋಭೂಮಿ : 
ಪರಮ ಯೋಗಿಗಳಾದ ಶ್ರೀಪರಮಾನಂದ ಸರಸ್ವತಿ ಸ್ವಾಮೀಜಿ, ಭಗವಾನ್ ಶ್ರೀಧರ ಸ್ವಾಮಿಗಳ ಗುರುಗಳಾದ ಶ್ರೀಶಿವಾನಂದ ಸರಸ್ವತಿ ಮತ್ತು ಶ್ರೀಧರ ಸ್ವಾಮಿಗಳು ಈ ಸ್ಥಳಕ್ಕೆ ಆಗಮಿಸಿ ಹಲವು ಕಾಲ ಪೂಜೆ ಮತ್ತು ತಪಸ್ಸನ್ನು ಆಚರಿಸಿದ್ದಾರೆ. ಹಲವು ವರ್ಷಗಳ ಕಾಲ ಪೂಜೆ ಪುನಸ್ಕಾರಗಳು ಇಲ್ಲದೆ ಈ ಕ್ಷೇತ್ರ ಉಗ್ರ ಸ್ವರೂಪ ತಾಳಿತ್ತು.
ಸುಮಾರು ೧೫೦ ವರ್ಷಗಳ ಹಿಂದೆ ಶ್ರೀಶಿವಾನಂದ ಸರಸ್ವತಿ ಸ್ವಾಮಿಗಳು ತಮ್ಮ ಶಿಷ್ಯ ಹಾಗೂ ಸದ್ಗೃಸ್ಥನಾದ ಉತ್ತರಕನ್ನಡ ಜಿಲ್ಲೆ ಹೊನ್ನಾರವ ತಾಲೂಕಿನ ನವಿಲಗೋಣದ ಗಣಪತಿ ಗೋಪಾಲ ಭಟ್ ಎಂಬವರಿಗೆ ಈ ಸ್ಥಳಕ್ಕೆ ತೆರಳಿ ದೇವರನ್ನು ಆರಾಧಿಸುವಂತೆ ತಿಳಿಸಿದರು. ಯಶಸ್ವಿಗಾಗಿ ತಮ್ಮ ಪಾದುಕೆಗಳನ್ನು ತೆಗೆದು ಕೊಟ್ಟು ಕಳುಹಿಸಿದರಂತೆ.
ಈಗ ಅದೇ ಗೃಹಸ್ಥನ ಕುಟುಂಬದ ಕುಡಿ ಶಂಕರನಾರಾಯಣ ಭಟ್ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕ್ಷೇತ್ರದ ಮಹಿಮೆಯ ಬಗ್ಗೆ ಅಚ್ಚರಿಯಿಂದ ವರ್ಣಿಸುತ್ತಾರೆ. ಅವರ ಮನೆಯಲ್ಲಿ ಇಂದಿಗೂ ಶ್ರೀಗಳ ಪಾದುಕೆಗೆ ನಿತ್ಯ ಪೂಜೆ ಸಲ್ಲುತ್ತಿದೆ. ಸಾಗರದಿಂದ ತ್ಯಾಗರ್ತಿ ಮಾರ್ಗವಾಗಿ 17 ಕಿ.ಮೀ.ದೂರದಲ್ಲಿ ಮತ್ತು ಶಿವಮೊಗ್ಗ ಜೋಗ ಮಾರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಸ್ಪಾಡಿಯಿಂದ 5 ಕಿ.ಮೀ.ದೂರದಲ್ಲಿ ಈ ದೇಗುಲವಿದೆ.

Share. Facebook Twitter Pinterest LinkedIn Tumblr Email WhatsApp
Previous Articleಭೃಂಗರಾಜ ಗಿಡದ ಔಷಧಿ ಗುಣಗಳು
Next Article ಪ್ರವಾಸಿಗರ ಮನಸೆಳೆವ ಉತ್ತರ ಕನ್ನಡ ಜಿಲ್ಲೆಯ ಸಾತೋಡಿ ಜಲಪಾತ

Related Posts

*ಐತಿಹಾಸಿಕ ಕುನ್ನತ್ತೂರು ಪಾಡಿ ಶ್ರೀ ಮುತ್ತಪ್ಪನ್ ಕ್ಷೇತ್ರ*

December 22, 2025

*ಪರಮ ಪವಿತ್ರ ಕ್ಷೇತ್ರ ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನ*

November 29, 2025

*ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ದೀಪಾವಳಿ ‘ದೀಪೋತ್ಸವ’ : ಸಹಸ್ರ ಸಹಸ್ರ ದೀಪಗಳನ್ನು ಹಚ್ಚಿ ಪುನೀತರಾದ ಭಕ್ತರು*

October 22, 2025

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಮಡಿಕೇರಿ, NEWS DESK ಫೆ.11 : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ…

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.