ನಾಪೋಕ್ಲು ಏ.5 : ಇತಿಹಾಸ ಪ್ರಸಿದ್ಧ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.
ಉತ್ಸವದ ಮೊದಲದಿನವಾದ ಏ.3ರ ಬೆಳಗ್ಗೆ ಗಣಪತಿ ಹೋಮ, ರಾತ್ರಿ ಗುರು ಪೂಜೆ, ದೇವಿ ಪೂಜೆ ನಡೆಯಿತು.
ಏ.4 ರಂದು ಅಪರಾಹ್ನ ಪೈಂಗುತ್ತಿ ನಡೆದ ಬಳಿಕ ಶ್ರೀ ಪೊನ್ನು ಮುತ್ತಪ್ಪ ದೇವರ ಕಳಸವನ್ನು ಹೊತ್ತು ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳದ ಚಂಡೆಯೊಂದಿಗೆ ನಾಪೋಕ್ಲು ಪಟ್ಟಣದ ಮುಖ್ಯಬೀದಿಯಲ್ಲಿ ನಡೆದ ಮೆರವಣಿಗೆ, ಬಳಿಕ ದೇವಾಲಯದಲ್ಲಿ ನಡೆದ ಮುತ್ತಪ್ಪ ದೇವರ ವೆಳ್ಳಾಟಂ, ಕುಟ್ಟಿಚ್ಚಾತ, ಗುಳಿಗ ದೇವರ ಕೋಲಗಳು ನೋಡುಗರ ಗಮನ ಸೆಳೆಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.
ಇಂದು ಪ್ರಾತಕಾಲ ದೇವರ ಚರಿತ್ರೆ ಹಾಡಿನ ನೃತ್ಯ, ಗುಳಿಗ ದೇವರ ಕೋಲ ನಡೆಯಿತು. ಮುಂಜಾನೆ ಕುಟ್ಟಿಚಾತ ದೇವರ ಕೋಲ, ತಿರುವಪ್ಪ ಮತ್ತು ಮುತ್ತಪ್ಪ ದೇವರ ಕೋಲ ನಡೆದು ಉತ್ಸವ ಸಂಪನ್ನಗೊಂಡಿತು.
ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಊರಿನ ಪರಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು.
ವರದಿ :ಝಕರಿಯ ನಾಪೋಕ್ಲು