ಮಡಿಕೇರಿ ಏ.5 : ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಏಪ್ರಿಲ್, 11 ರಿಂದ ಮೇ, 14 ರವರೆಗೆ 29 ದಿನಗಳ ಕಾಲ ನುರಿತ ತರಬೇತುದಾರರಿಂದ ದಿನಕ್ಕೆ ಎರಡು ಗಂಟೆಯಂತೆ ಈಜು ತರಬೇತಿ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ.
ಈಜು ಕ್ರೀಡೆಗೆ 8 ವರ್ಷ ಮೇಲ್ಪಟ್ಟಿರಬೇಕು. ಸಮಯ ಬೆಳಗ್ಗೆ 9.30 ರಿಂದ 11.30 ರವರೆಗೆ ಶುಲ್ಕ ರೂ.3 ಸಾವಿರ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-229985, 08272-220986 ಹಾಗೂ ಮಣಿಕಂಠ: 9880989987 ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ತಿಳಿಸಿದ್ದಾರೆ.









