ಸೋಮವಾರಪೇಟೆ ಏ.12 : ಸೋಮವಾರಪೇಟೆ ಜೇಸಿ ಸಂಸ್ಥೆಯ ವತಿಯಿಂದ ಪಟ್ಟಣ ಪಂಚಾಯಿತಿಯ (ಹೊರಗುತ್ತಿಗೆ) ಪೌರಕಾರ್ಮಿಕರಾದ ಎಚ್ ಬಿ ಮಂಜುನಾಥ ಅವರಿಗೆ ‘ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ ಪ್ರಶಸ್ತಿಯನ್ನು ಜೇಸಿ ಅಧ್ಯಕ್ಷೆ ಎಂ.ಎ. ರುಬೀನಾ ನೀಡಿ ಗೌರವಿಸಿದರು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೇಸಿ ಸದಸ್ಯರಾದ ಕೆ.ಎ. ಪ್ರಕಾಶ್, ಅಶೋಕ್, ಪದ್ಮಜಾ, ಕಸ್ತೂರಿ, ರವಿಕುಮಾರ್, ಜೂನಿಯರ್ ಜೇಸಿ ಚೇರ್ ಪರ್ಸನ್ ರಿಶಾ ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ಜೀವನ್, ಆದಿಲ್, ಶೇಖರ್ ಮತ್ತಿತರರು ಇದ್ದರು.










