ಕುಶಾಲನಗರ ಏ.13 : ಭಾರತದಲ್ಲಿ ಸಾಮಾಜಿಕವಾಗಿ ಸ್ವಾಭಿಮಾನದ ಕೂಗು ಬದಲಾವಣೆ ತರುವಲ್ಲಿ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರ ಚಿಂತನೆ ಅತ್ಯಂತ ಮಹತ್ವದ್ದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಬೌದ್ಧಿಕ ಪ್ರಮುಖ ಡಾ ಶ್ರೀಧರ ಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಜ್ಞಾನಭಾರತಿ ಶಾಲಾ ಸಭಾಂಗಣದಲ್ಲಿ ಸಾಮರಸ್ಯ ವೇದಿಕೆ ಆಶ್ರಯದಲ್ಲಿ ನಡೆದ ಡಾ.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಸ್ಮರಣೆ ಪ್ರೇರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಸು ನನಸು ಮಾಡಿದ ಅಂಬೇಡ್ಕರ್ ಅವರ ಜೀವನ ಸಂದೇಶ ಜೀವನದ ಅವಲೋಕನ ಸಂವಿಧಾನ ರಚನೆ ಇದೀಗ ನಮ್ಮ ನಡುವೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಅಂಬೇಡ್ಕರ್ ಅವರ ಯಾವುದೇ ಕಾರ್ಯಕ್ರಮಗಳು ದಲಿತ ಸಮುದಾಯಕ್ಕೆ ಸೀಮಿತವಾಗಿರದೆ ಇಡೀ ದೇಶದ ಸರ್ವ ಜನತೆಯ ನಿತ್ಯ ಕಾರ್ಯಕ್ರಮಗಳಾಗಬೇಕಾಗಿದೆ ಎಂದರು.
ಹೊಸ ಬದಲಾವಣೆ ನವ ಚಿಂತನೆಗಳ ಮೂಡಿಸಿದಂತಹ ಸಮಾಜ ಸುಧಾರಕರು ಆಗಿರುವ ಡಾ ಅಂಬೇಡ್ಕರ್ ಅವರ ಚಿಂತನೆ ತಿಳಿಯುವಂತಾಗಬೇಕು ಸ್ಪೃಶ್ಯ -ಅಸ್ಪೃಶ್ಯ ಅನ್ನುವ ಪದಗಳು ಯಾವುದೇ ಶಾಸ್ತ್ರಗಳಲ್ಲಿ ಇರುವುದಿಲ್ಲ ಕೃತಕ ಭೇದಭಾವ ಭಿನ್ನತೆ ಹೋಗಲಾಡಿಸಬೇಕು. ಸಮಾಜದಲ್ಲಿ ಬಂಧುತ್ವದ ಸಂದೇಶಗಳನ್ನು ಸಾಮರಸ್ಯ ವೇದಿಕೆ ಮೂಲಕ ಸಾರುವುದು ಗುರಿಯಾಗಿದೆ ಎಂದರು.
ವೈದ್ಯಾಧಿಕಾರಿ ಡಾ. ಇಂದೂಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಸಂಘ ಚಾಲಕ ಚಕ್ಕೆರ ಮನು, ವೇದಿಕೆಯ ಪ್ರಮುಖರಾದ ಜನಾರ್ಧನ್ ವಶಿಷ್ಠ, ರಮೇಶ್ ಬೊಟ್ಟುಮನೆ, ಹರೀಶ್, ಅಮೃತರಾಜ್, ಮಹೇಂದ್ರ, ಮಧುಸೂದನ್, ಜಿಎಲ್ ನಾಗರಾಜ್ ಮತ್ತಿತರ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.