
ಸೋಮವಾರಪೇಟೆ NEWS DESK ಡಿ.27 : ರೈಲು ಡಿಕ್ಕಿಯಾಗಿ ಸೋಮವಾರಪೇಟೆ ತಾಲ್ಲೂಕಿನ ಬಾಣಾವಾರ ಗ್ರಾಮದ ನಿವಾಸಿಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆದಿದೆ. ಸೋಮವಾರಪೇಟೆ ಕಂದಾಯ ಇಲಾಖೆಯ ಹೊರಗುತ್ತಿಗೆ ನೌಕರ ರಾಜೇಶ್ (35) ಮೃತಪಟ್ಟವರಾಗಿದ್ದಾರೆ. ರೈಲಿನಿಂದ ಇಳಿದು ಮತ್ತೊಂದು ಫ್ಲಾಟ್‌ಫಾರ್ಮ್ಗೆ ಏರಲು ಯತ್ನಿಸುತ್ತಿದ್ದ ಸಂದರ್ಭ ಗೂಡ್ಸ್ ರೈಲು ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಇಂದು ಮೃತದೇಹವನ್ನು ಕಾಸರಗೋಡಿನಿಂದ ಬಾಣಾವಾರ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಯಿತು.










