ಮಡಿಕೇರಿ ಏ.29 : ಅಯ್ಯಂಗೇರಿಯಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಅಯ್ಯಂಗೇರಿ ಬಿಜೆಪಿ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದೆ ಎಂದು ಅಯ್ಯಂಗೇರಿ ವಲಯ ಕಾಂಗ್ರೆಸ್ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಕಾಂಗ್ರೆಸ್ ಬೆಂಬಲಿತ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಎನ್ ಎಸ್ ಯು ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಎಂ.ಅಬ್ದುಲ್ ರಾಶಿದ್, ಕಾಂಗ್ರೆಸ್ ಪಕ್ಷದಿಂದ ಇಲ್ಲಿಯವರೆಗೆ ಯಾವುದೇ ಕಾರ್ಯಕರ್ತರು ಬಿಜೆಪಿಗೆ ಹೋಗಿಲ್ಲ, ಬಿಜೆಪಿಗೆ ಸೇರ್ಪಡೆಗೊಂಡವರು ಕಾಂಗ್ರೆಸ್ ಕಾರ್ಯಕರ್ತರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಯ್ಯಂಗೇರಿ ಕಾಂಗ್ರೆಸ್ ವಲಯ ಅಧ್ಯಕ್ಷ ಎಂ.ಎಂ.ಮೊಹಮ್ಮದ್, ಸಣ್ಣ ಪುಲಿಕೋಟು ಕಾಂಗ್ರೆಸ್ ಅಧ್ಯಕ್ಷ ದಾಮೋದರ, ಪ್ರಮುಖರಾದ ಹ್ಯಾರಿಸ್, ಅಬ್ದುಲ್ಲ ಹಾಗೂ ಬಡುವಂಡ ಮೊಯ್ದು ಈ ಸಂದರ್ಭ ಹಾಜರಿದ್ದರು.