ಸುಂಟಿಕೊಪ್ಪ ಏ.30 : ಕಾನ್ ಬೈಲ್ ನಾಕೂರು ಶಿರಂಗಲ, ಕೊಡಗನೂರು, ಕಂಬಿಬಾಣೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ನಂತರ ಮನೆಮನೆಗೆ ತೆರಳಿ ಮತ ಯಾಚಿಸಿದರು.
ಹಲವು ಬಹಿರಂಗ ಸಭೆಗಳಲ್ಲಿ ಮಾತನಾಡಿದ ಅವರು ಕಳೆದ 25 ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಪ್ರಗತಿಯೇ ಬಿಜೆಪಿಯ ಮಂತ್ರ, ಬಿಜೆಪಿಯೇ ಭರವಸೆ ಎಂದರು.
ರೋಡ್ ಶೋ ಸುಮಾರು ಎರಡು ಕಿ. ಮೀ. ಸಾಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕೊನೆಗೊಂಡಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಜಿ.ಮೇದಪ್ಪ, ಬಿಜೆಪಿ ಪ್ರಮುಖರಾದ ಭಾರತೀಶ್, ಲೋಕೇಶ್, ಅಭಿಮನ್ಯು ಕುಮಾರ್ ಮಾತನಾಡಿದರು.