ಸುಂಟಿಕೊಪ್ಪ ಮೇ 1 : ಕಳೆದ 25 ವರ್ಷಗಳಿಂದ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿದ್ದೇನೆ ಎಂದು ಶಾಸಕ ಹಾಗೂ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಕಾನ್ ಬೈಲ್, ನಾಕೂರು ಶಿರಂಗಲ, ಕೊಡಗರಹಳ್ಳಿ, ಕಂಬಿಬಾಣೆ, ಸುಂಟಿಕೊಪ್ಪದಲ್ಲಿ ಪ್ರಚಾರ ನಡೆಸಿದ ಎಂ.ಪಿ.ಅಪ್ಪಚ್ಚು ರಂಜನ್ ಪಟ್ಟಣದಲ್ಲಿ ರೋಡ್ ಶೋ ನಡೆಸಿ, ನಂತರ ಕನ್ನಡ ವೃತ್ತದಲ್ಲಿ ಸಾರ್ವಜನಿಕ ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ 25 ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿಗಳನ್ನು ವಿವರಿಸಿ ಹೇಳಿದ ರಂಜನ್, ಪ್ರಗತಿಯೇ ಬಿಜೆಪಿಯ ಮಂತ್ರ, ಆದರಿಂದ ಬಿಜೆಪಿಯೇ ಭರವಸೆ ಎಂದರು.
ಪಟ್ಟಣದಲ್ಲಿ ರೋಡ್ ಶೋ ಸುಮಾರು ಎರಡು ಕಿ.ಮೀ. ಸಾಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕೊನೆಗೊಂಡಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಪ್ರಮುಖರಾದ ವಿ.ಕೆ.ಲೋಕೇಶ್, ಅಭಿಮನ್ಯು ಕುಮಾರ್, ತಾ.ಪಂ.ಮಾಜಿ ಉಪಾಧ್ಯಕ್ಷರುಗಳಾದ ಅಭಿಮನ್ಯು ಕುಮಾರ್, ಶಂಕರ ನಾರಾಯಣ ಮಾತನಾಡಿದರು.
ಈ ಸಂದರ್ಭ ತಾ.ಪಂ ಮಾಜಿ ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಶಕ್ತಿ ಕೇಂದ್ರದ ಬಿ.ಕೆ.ಪ್ರಶಾಂತ್, ವಾಸು, ಪಂಚಾಯಿತಿ ಸದಸ್ಯರುಗಳಾದ ಪಿ.ಆರ್.ಸುನಿಲ್ ಕುಮಾರ್, ಬಿ.ಎಂ.ಸುರೇಶ್, ಮಂಜು, ಬಿ.ಕೆ.ಮೋಹನ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.