ಮಡಿಕೇರಿ ಮೇ 20 : ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಬೊಳ್ಳಜಿರ ಬೋಪಯ್ಯ ಹಾಗೂ ಯಶೋಧ ಬೋಪಯ್ಯ (ತಾಮನೆ : ಅಜ್ಜಮಾಡ) ಇದೀಗ ಬಿಟ್ಟಂಗಾಲದಲ್ಲಿ ವಾಸವಿರುವ ದಂಪತಿಗಳ ಪ್ರಥಮ ಪುತ್ರನಾದ ಬೊಳ್ಳಜಿರ ಬಿ. ಅಯ್ಯಪ್ಪ (40 ವರ್ಷ) ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಬಿ.ಕಾಂ (ಸಿ.ಎ) ಪದವಿ ಪಡೆದಿದ್ದಾರೆ. ಇದೀಗ ಅದೇ ಕಾಲೇಜಿನಲ್ಲಿ ಎಂ.ಎ. (ಕೊಡವ) ವ್ಯಾಸಾಂಗ ಮಾಡುತ್ತಿದ್ದಾರೆ.
ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಮನ್ನೇರ ನಂಜಪ್ಪ ಹಾಗೂ ರಾಣಿ ನಂಜಪ್ಪ (ತಾಮನೆ: ಅಪ್ಪಾರಂಡ) ದಂಪತಿಗಳ ನಾಲ್ಕನೇ ಮಗಳು ಯಮುನಾಳನ್ನು ವಿವಾಹವಾದ ಇವರಿಗೆ ದೇಚಮ್ಮ ಮತ್ತು ಬೋಪಣ್ಣ ಎಂಬ ಇಬ್ಬರು ಮಕ್ಕಳಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿಯೇ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಬೊಳ್ಳಜಿರ ಬಿ. ಅಯ್ಯಪ್ಪ ಎನ್. ಸಿ. ಸಿ ಯಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ. ಸೈನ್ಯಕ್ಕೆ ಸೇರುವುದು ಇವರ ಕನಸಾಗಿತ್ತದರೂ ಕಾರಣಾಂತರಗಳಿಂದ ಅದು ಫಲಿಸಲಿಲ್ಲ. ಮುಂದೆ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿದ್ದಾರೆ. ಉತ್ತಮ ನಡವಳಿಕೆ ಸಾಧು ಸ್ವಭಾವದ ವ್ಯಕ್ತಿತ್ವ ಹೊಂದಿರುವ ಅಯ್ಯಪ್ಪನವರು ಕೆಲಸ ಮಾಡದ ಕ್ಷೇತ್ರಗಳಿಲ್ಲ.
ಇವರು ಕಾರ್ಯ ನಿರ್ವಹಿಸಿದ ಸಂಘ ಸಂಸ್ಥೆಗಳ ವಿವರ :
* 2013ನೇ ಇಸವಿಯಿಂದ ಕೊಡವ ಮಕ್ಕಡ ಕೂಟ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.
* ಸದಸ್ಯ, ಸಲಹಾ ಸಮಿತಿ, ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ, ಮಂಗಳೂರು ವಿಶ್ವ ವಿದ್ಯಾನಿಲಯ.
* ಸಹ ಕಾರ್ಯದರ್ಶಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ
ಉಪಾಧ್ಯಕ್ಷ, ಭಾ.ಸ್ಕೌ. & ಗೈ. ಮಡಿಕೇರಿ ಸ್ಥಳೀಯ ಸಂಸ್ಥೆ, ಕೊಡಗು
* ಉಪಾಧ್ಯಕ್ಷರು, ಕೊಡಗು ಕಲಾವಿದರ ಸಂಘ (ರಿ.)
* ಕೊಡಗು ಪ್ರೆಸ್ ಕ್ಲಬ್‌ನ ಖಜಾಂಚಿ
* ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ನಿರ್ದೇಶಕ
* ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು, ಹಳೇ ವಿದ್ಯಾರ್ಥಿ ಸಂಘದ ಗೌರವ ಕಾರ್ಯದರ್ಶಿ.
* ಕೊಡಗು ಜಿಲ್ಲಾ ಸಿರಿಗನ್ನಡ ವೇದಿಕೆಯ ಗೌರವ ಕಾರ್ಯದರ್ಶಿ
* ಬಾಳುಗೋಡು ಕೊಡವ ಸಮಾಜ ಒಕ್ಕೂಟದ ನಿರ್ದೇಶಕ (ಪ್ರಚಾರ ಸಮಿತಿ)
* ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕೊಡವ ಕೇರಿ 2007 ರಿಂದ ನಿರ್ದೇಶಕ
* 2021-22ನೇ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ
* ಪ್ರಕಾಶಕರು ಮತ್ತು ಮಾಲೀಕರು ಕಾವೇರಿ ಟೈಮ್ಸ್ ದಿನಪತ್ರಿಕೆ.
* ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ
* ಮಡಿಕೇರಿ ಕೊಡವ ಸಮಾಜದ ಮಾಜಿ ನಿರ್ದೇಶಕ.
* ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲಿನ ಮಾಜಿ ನಿರ್ದೇಶಕ.
ಇವರ ಅವಧಿಯಲ್ಲಿ ಮಾಡಿರುವ ಕೆಲಸದ ವಿವರ :
* ಇವರ ಸಂಪಾದಕೀಯದ ಚಂಗೀರ (ಸಂಶೋಧನಾ ಕೃತಿ), ಒತ್ತಜೋಡಿ (ಅಭಿನಂದನಾ ಗ್ರಂಥ) ಹಾಗೂ ಆಟ್-ಪಾಟ್ ಪಡಿಪು ಪುಸ್ತಕ (ಸಂಗ್ರಹ ಪುಸ್ತಕ) ಎನ್ನುವ ಮೂರು ಪುಸ್ತಕ ಪ್ರಕಟಣೆಯಾಗಿದೆ.
* ಕಳೆದ 7 ವರ್ಷದಿಂದ ಮಕ್ಕಳಿಗೆ ಆಟ್-ಪಾಟ್ ಪಡಿಪು ಕಾರ್ಯಕ್ರಮ
* ಕೊಡವ ಮಕ್ಕಡ ಕೂಟದ ವತಿಯಿಂದ ಇವರ ಅಧ್ಯಕ್ಷತೆಯಲ್ಲಿ ದಾಖಲೀಕರಣ ಸಾಹಿತ್ಯದ ಹಾಗೂ ಕೊಡಗಿಗೆ ಸಂಬಂಧಿಸಿದ 65 ಪುಸ್ತಕಗಳನ್ನು ಪ್ರಕಟಣೆ ಮಾಡಲಾಗಿದೆ.
* ಕೊಡಗ್’ರ ಸಿಪಾಯಿ ಹಾಗೂ ನಾಡ ಪೆದ ಆಶಾ (ನಾಯಕ ನಟ), ಪೊಮ್ಮಾಲೆ ಕೊಡಗ್ ಕೊಡವ ಸಿನಿಮಾದಲ್ಲಿ ನಟನೆ. ಇವರ ಕಥೆ, ಸಂಭಾಷಣೆ, ನಿರ್ದೇಶಿಸಿ, ನಟಿಸಿದಂತಹ ‘ನಂಬಿಕೆ’ ಕಿರು ಚಿತ್ರಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನಡೆಸಿದ ಕಿರುಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ.
* ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ (ಮಹಾವೀರ ಚಕ್ರ ಪುರಸ್ಕೃತ) ಇವರ ಪ್ರತಿಮೆ ಅನಾವರಣಕ್ಕೆ ಕಾರಣಕರ್ತ (ಅಜ್ಜಮಾಡ ಒಕ್ಕದ ಸಹಕಾರದಲ್ಲಿ)
* ಕೊಂಗಂಡ ಗಣಪತಿ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಕೊಡಗ್’ರ ಗಾಂಧಿ ಸ್ವಾತಂತ್ರ್ಯ ಹೋರಾಟಗಾರ ಪಂದ್ಯಂಡ ಬೆಳ್ಯಪ್ಪ, ಕೊರವಂಡ ನಂಜಪ್ಪ ಇವರ ಹೆಸರನ್ನು ರಸ್ತೆಗೆ ಇಡುವ ಕಾರ್ಯ.
* 5 ವರ್ಷ ಮಕ್ಕಡ ಕೊಡವ ಸಾಂಸ್ಕೃತಿಕ ನಮ್ಮೆ ಮಾಡಲಾಗಿದೆ. (ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಹಕಾರದಲ್ಲಿ)
* ಕಲರ್ಸ್ ಕನ್ನಡ ಚಾನಲ್ ಕನ್ನಡ ಚಲನಚಿತ್ರ ನಟ ಪುನೀತ್ ರಾಜ ಕುಮಾರ್ ನಡೆಸಿಕೊಡುತ್ತಿದ್ದ ಫ್ಯಾಮಿಲಿ ಪವರ್ ರಿಯಾಲಿಟಿ ಶೋ ನಲ್ಲಿ ಇವರ ಸಂಸಾರ ಭಾಗವಹಿಸಿ ಗೆದ್ದ 2 ಲಕ್ಷ ಬಹುಮಾನವನ್ನು ಸೇನೆಯಲ್ಲಿ ಮೃತಪಟ್ಟ ಸೈನಿಕ ಕುಟುಂಬಕ್ಕೆ ದಾನ ಮಾಡಿರುತ್ತಾರೆ.
* ಕಳೆದ 10 ವರ್ಷದಿಂದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ (ಮಹಾವೀರ ಚಕ್ರ ಪುರಸ್ಕೃತ) ಇವರ ಸ್ಮರಣೆ ದಿನದ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. (ಅಜ್ಜಮಾಡ ಒಕ್ಕದ ಸಹಕಾರದಲ್ಲಿ)
* ಕಳೆದ 7 ವರ್ಷದಿಂದ ಎಡಮ್ಯಾರ್ ಒಂದ್ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.
* ಇವರು ದೂರದರ್ಶನದ ಚಂದನ ವಾಹಿನಿಯ ಸೋದರಸಿರಿ ಕಾರ್ಯಕ್ರಮದಲ್ಲಿ ಕೊಡವ ಕಾರ್ಯಕ್ರಮವನ್ನು ನೀಡಿರುವುದಲ್ಲದೆ, ಸಾಧಕರ ಸಂದರ್ಶನ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುತ್ತಾರೆ.
ಇವರಿಗೆ ಸಂದ ಸನ್ಮಾನ ಮತ್ತು ಪ್ರಶಸ್ತಿ :
* ಸೌತ್ ಇಂಡಿಯನ್ ಫಿಲಂ ಫೆಸ್ಟಿವಲ್ ಅವಾರ್ಡ್ಸ್ 2022, ಅತ್ಯುತ್ತಮ ನಟ ಪ್ರಶಸ್ತಿ (ನಾಡ ಪೆದ ಆಶಾ ಚಿತ್ರದ ನಾಯಕನಟನ ಪಾತ್ರಕ್ಕಾಗಿ)
* ನಾಡ ಪೆದ ಆಶಾ, ಸಿನಿಮಾಕ್ಕೆ ಮಣಿಪುರದ IGGFA IMPALA INDIA ಸಿನಿಮೋತ್ಸವದಲ್ಲಿBest Actor Award ಲಭಿಸಿದೆ,
* ದಕ್ಷಿಣ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಇದರ ವತಿಯಿಂದ ಹಿರಿಯ ಪತ್ರಕರ್ತ ದಿ. ಪದ್ಯಾಣ ಗೋಪಾಲಕೃಷ್ಣಭಟ್ ಸಂಸ್ಕರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (2016ರಲ್ಲಿ)
* ಕೊಡಗು ಪ್ರೆಸ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕನೆಕ್ಪಿಂಗ್ ಕೊಡವಾಸ್, ಅಜ್ಜಮಾಡ ಒಕ್ಕ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕೊಡವ ಕೇರಿಯಿಂದ ಕೊಡವ ಮಕ್ಕಡ ಕೂಟದಿಂದ ಪುಸ್ತಕ ಬಿಡುಗಡೆ ಮಾಡಿರುವುದಕ್ಕಾಗಿ ಹಾಗೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆ ಅನಾವಣಕ್ಕೆ ಕಾರಣಕರ್ತರಾಗಿದ್ದಕ್ಕೆ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ.
ಇಷ್ಟೆಲ್ಲಾ ಸಾಧನೆ ಮಾಡಿ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಉತ್ಸಾಹಿ ಬೊಳ್ಳಜಿರ ಬಿ. ಅಯ್ಯಪ್ಪನವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿ ಎನ್ನುವುದು ನಮ್ಮೆಲ್ಲರ ಅಭಿಪ್ರಾಯ.
ಇವರ ವಿಳಾಸ : ಬೊಳ್ಳಜಿರ ಬಿ. ಅಯ್ಯಪ್ಪ
ಕೆ. ಬಾಡಗ, ಎಫ್.ಎಂ.ಕೆ.ಎಂ.ಸಿ. ಕಾಲೇಜು ಪೋಸ್ಟ್.
ಮಡಿಕೇರಿ – 571201, ಮೊ : 9880778047
E-mail id : aiyappabollajira@yahoo.in; aiyappabollajira@gmail.com
ವರದಿ : ಕರವಂಡ ಸೀಮಾ ಗಣಪತಿ