ವಿರಾಜಪೇಟೆ ಮೇ 24 : ಚೆಂಬೆಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಮಗ್ಗುಲ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಪಾಲ್‍ತಿರಿಕೆ ಅಯ್ಯಪ್ಪ ದೇಗುಲದ ಪುನರ್ ಪತ್ರಿಷ್ಠಾಪನಾ ಕಾರ್ಯಕ್ರಮಗಳು ಮೇ 25 ರಿಂದ 27ರ ವರೆಗೆ ನಡೆಯಲಿದೆ.
ಸುಮಾರು 365 ವರ್ಷಗಳ ಇತಿಹಾಸ ಹೊಂದಿರುವ, ಗೊಲ್ಲ ಸಮುದಾಯದಿಂದ ಪ್ರತಿಷ್ಠಾಪಿಸಲಾದ ಶ್ರೀ ಪಾಲ್ ತಿರಿಕೆ ಅಯ್ಯಪ್ಪ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಬಹ್ಮಶ್ರೀ ವೇದಮೂರ್ತಿ ಶ್ರೀ ಗಿರೀಶ್ ತಂತ್ರಿಗಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಲಿದೆ.
ಮೇ 25 ರಂದು ಸಂಜೆ ದೇವತಕ್ಕರ ಮನೆಯಿಂದ ಭಂಡಾರ ತರುವುದು, ನಂತರ ಪಂಚಗವ್ಯ ಪುಣ್ಯಾಹ, ಸ್ಥಳಶುದ್ಧಿ, ಆಚಾರ್ಯ ವರ್ಣ, ಪ್ರಾಶಾ ಶುದ್ಧಿ, ಅಂಕುರ ಪೂಜೆ, ವಾಸ್ತು ಹೋಮ, ಸುದರ್ಶನ ಹೋಮ, ವಾಸ್ತು ಬಲಿ, ದಿಕ್ಪಾಲಕ ಬಲಿ ನಡೆಯಲಿದೆ.
ಮೇ 26 ರಂದು ಬೆಳಿಗ್ಗೆ ಅಂಕುರ ಪೂಜೆ, ಗಣ ಹೋಮ, ದುರ್ಗಾ ಹೋಮ, ಆಶ್ಲೇಷ ಬಲಿ ಹಾಗೂ ಪ್ರಧಾನ ಹೋಮ ಜರುಗಲಿದ್ದು, ಅಪರಾಹ್ನ 4 ಗಂಟೆಗೆ ಅಂಕುರ ಪೂಜೆ, ದುರ್ಗಾ ಹೋಮ, ಪ್ರಾಯಶ್ಚಿತ್ತ ಹೋಮ, ಐಕ್ಯಮತ ಹೋಮ, ಬ್ರಹ್ಮಕಲಶ ಪ್ರತಿಷ್ಟೆ, ಮಹಾಪೂಜೆ ಆದಿವಾಸ ಪೂಜೆ, ಮತ್ತು ಶಯನಾದಿವಾಸ ಪೂಜೆ ನಡೆಯಲಿದೆ.
ಮೇ 27 ರಂದು 12 ತೆಂಗಿನಕಾಯಿ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪ್ರತಿಷ್ಠಾ ಹೋಮ, ತತ್ವ ಹೋಮ, ಗಣಪತಿ ಪತ್ರಿಷ್ಟೆ, ಕಲಶಾಭಿಷೇಕ ಪೂಜೆಗಳು ನೆರವೇರಲಿದ್ದು, ನಂತರ 11.45 ಗಂಟೆಗೆ ಶ್ರೀ ಪಾಲ್‍ತಿರಿಕೆ ಅಯ್ಯಪ್ಪ ದೇವರ ಪ್ರತಿಷ್ಟೆ, ಅಷ್ಟಬಂದ ಬ್ರಹ್ಮಕಲಶಾಭಿಷೇಕ, ಕುಂಭ ಪ್ರತಿಷ್ಟೆ, ಮಾಹಾಪೂಜೆ, ನುಡಿಕಟ್ಟು ಪ್ರಾರ್ಥನೆ, ಉತ್ಸವ ಬಲಿ, ಮಹಾ ಮಂತ್ರಾಕ್ಷತೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಚೋಕಂಡ ರಮೇಶ್ ಮಾಹಿತಿ ನೀಡಿದರು.
ದೇವಾಲಯ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕುಪ್ಪಚ್ಚೀರ ಸತೀಶ್ ಮಾತನಾಡಿ, ಸುಮಾರು 365 ವರ್ಷಗಳ ಇತಿಹಾಸ ಇರುವ ಪಾಲ್ ತಿರಿಕೆ ಅಯ್ಯಪ್ಪ ದೇವಾಲಯವು ಗೊಲ್ಲ ಸಮುದಾಯದಿಂದ ಪೂಜಿಸಲ್ಪಡುತ್ತಿದ್ದು, ಇದೀಗ ಸುಮಾರು 35 ಲಕ್ಷ ರೂ.ಗಳ ವೇಚ್ಚದಲ್ಲಿ ಗ್ರಾಮಸ್ಥರ ಆರ್ಥಿಕ ನೆರವು ದಾನಿಗಳ ಹಾಗೂ ಭಕ್ತರ ನೆರವಿನಿಂದ ದೇಗುಲದ ಕಾರ್ಯವು ಪೂರ್ಣಗೊಂಡಿದೆ. ಮೂರು ದಿನಗಳು ನಡೆಯುವ ದೈವ ಕೈಂಕಾರ್ಯದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ದೇವ ತಕ್ಕರು, ದೇಗುಲದ ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ