ಮಡಿಕೇರಿ ಜೂ.6 : ಕೊಡಗು ಜಿಲ್ಲೆಯಲ್ಲಿ 12 ಗ್ರಾಮ ಪಂಚಾಯತ್ ಗಳಲ್ಲಿ (ಗ್ರೇಡ್-2ರಡಿ) ಸಮಗ್ರ ನಾಗರಿಕ ಸೇವಾ ಕೇಂದ್ರ “ಗ್ರಾಮ ಒನ್” ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾ.ಪಂ.ಗಳ ವಿವರ : ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದೊಡ್ಡಮಲ್ತೆ, ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಸೋಮವಾರಪೇಟೆ ಹೋಬಳಿಯ ಗರ್ವಾಲೆ.
ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಕೆದಕಲ್, ನಾಕೂರು ಶಿರಂಗಾಲ, ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆ ಹೋಬಳಿಯ ಕಾಕೋಟು ಪರಂಬು. ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಹೋಬಳಿಯ ನಿಟ್ಟೂರು, ಪೊನ್ನಪ್ಪಸಂತೆ, ಹುದಿಕೇರಿ ಹೋಬಳಿಯ ಬಲ್ಯಮಂಡೂರು, ಶ್ರೀಮಂಗಲ ಹೋಬಳಿಯ ಕೆ.ಬಾಡಗ, ಪೊನ್ನಂಪೇಟೆ ಹೋಬಳಿಯ ಬಿ.ಶೆಟ್ಟಿಗೇರಿ ಹಾಗೂ ಕಿರುಗೂರು.
ಆಸಕ್ತ ಪ್ರಾಂಚೈಸಿಗಳು https://www.gramaonebls.com/users/registration ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮಾನೇಜರ್ ಅಥವಾ ಕೋ-ಆರ್ಡಿನೇಟರ್, ಜಿಲ್ಲಾಧಿಕಾರಿಯವರ ಕಚೇರಿ ಇವರನ್ನು ಸಂಪರ್ಕಿಸಬಹುದು (ದೂ.ಸಂಖ್ಯೆ: 9900385301 / 9611657344) ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.