ಮಡಿಕೇರಿ ಜೂ.8 : ಬಜೆಗುಂಡಿ ಕುಸುಬೂರ್ ಮೊಗೇರ ಸೇವಾ ಸಮಾಜದ ಗ್ರಾಮ ಸಮಿತಿ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಪಿಯುಸಿ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮವನ್ನು ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜದ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯುವತ್ತ ಗಮನ ಹರಿಸಬೇಕು ಜೊತೆಗೆ ಪೋಷಕರು ಕೂಡ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪಡೆಯಲು ಪ್ರೋತ್ಸಾಹಿಸಬೇಕೆಂದರು.
ವಿದ್ಯೆಯಿಂದ ಮಾತ್ರ ನಾವು ಕಳೆದುಕೊಂಡಿದನ್ನು ಮರಳಿ ಪಡೆಯಬಹುದು, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಹಾಗೂ ಇತರೆ ಯಾವುದೇ ರೀತಿಯ ಅನಾನುಕೂಲ ಇದ್ದಲ್ಲಿ ಸಂಘದ ಗಮನಕ್ಕೆ ತರಬೇಕು ಅಲ್ಲದೆ ಯಾವುದೇ ಕಾರಣಕ್ಕೂ ಸಮುದಾಯದ ಮಕ್ಕಳು ವಿದ್ಯೆಯಿಂದ ವಂಚಿತವಾಗಬಾರದೆಂದರು,
ಸೋಮವಾರಪೇಟೆ ತಾಲೂಕಿನ ಮಾಜಿ ಅಧ್ಯಕ್ಷ ಬಿ.ಎಂ.ದಾಮೋದರ ಮಾತನಾಡಿ, ಗ್ರಾಮ ಸಮಿತಿಯು ಪ್ರತೀ ವರ್ಷವೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಿರುವುದನ್ನು ಶ್ಲಾಗಿಸಿದರು.
ಸಭೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ, ತಾಲೂಕು ಸಮಿತಿ ಸದಸ್ಯರಾದ ಶಿವಾನಂದ, ಶಿವಕುಮಾರ್, ಗ್ರಾ.ಪಂ ಸದಸ್ಯರಾದ ಸುಧಾ ಗಣೇಶ್, ಕುಮಾರ ಹಾಗೂ ಗ್ರಾಮ ಸಮಿತಿ ಕಾರ್ಯದರ್ಶಿ, ಖಜಾಂಚಿ, ಪದಾಧಿಕಾರಿಗಳು, ಮಕ್ಕಳ ಪೋಷಕರು ಹಾಜರಿದ್ದರು.