ಗೋಣಿಕೊಪ್ಪಲು ಜೂ.12 : ಗೋಣಿಕೊಪ್ಪಲಿನ ಯುನೈಟೆಡ್ ಜಮಾಹತ್ ವತಿಯಿಂದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
ಹೋಟೆಲ್ ಪ್ರಣವ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಜಮಾಹತ್ ಅಧ್ಯಕ್ಷ ಶಾಮೀರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಹತ್ ಪ್ರಮುಖರು ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಮಾತನಾಡಿ, ಸಮಾಜದ ಮುಖ್ಯ ವಾಹಿನಿಗಳಲ್ಲಿ ಬರಲು ಸಾಧ್ಯವಾಗದ ಹಲವಾರು ಯುವ ಪೀಳಿಗೆಯನ್ನು ಗುರುತಿಸಿ ಅಂಥವರಿಗೆ ಬೇಕಾದ ಸೌಲಭ್ಯಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೇ ಶುದ್ಧ ಹಸ್ತದಿಂದ ಉತ್ತಮ ಕಾರ್ಯಗಳನ್ನು ಮುಂದುವರಿಸುತ್ತೇನೆ ಎಂದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದಿರೀರ ನವೀನ್, ನಗರ ಕಾಂಗ್ರೆಸ್ ಅಧ್ಯಕ್ಷ, ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಪಿ.ಸಿ.ಹಸೆನ್ನಾರ್ ಹಾಜಿ, ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷ ಉಸ್ಮಾನ್, ಪ್ರಮೋದ್ ಗಣಪತಿ, ಕಾಂಗ್ರೆಸ್ ಮುಖಂಡರುಗಳಾದ ಅಜಿತ್ ಅಯ್ಯಪ್ಪ, ಯುನೈಟೆಡ್ ಜಮಾಹತ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಬಾಪು, ಕಾರ್ಯದರ್ಶಿ ಅಬ್ದುಲ್ ಸಮದ್, ಉಪಾಧ್ಯಕ್ಷರುಗಳಾದ ಸಲಾಂ ಕೆ.ಪಿ.ತನವೀರ್, ಸಹ ಕಾರ್ಯದರ್ಶಿ ಗ್ರಾ.ಪಂ ಸದಸ್ಯ ಅಫ್ಝಲ್
ನಿರ್ದೇಶಕರುಗಳಾದ ತಂಝಿಲ್ ನಝೆರ್ ಮೌಲಾನ ಖಿಲರ್, ಬಿ.ಎಂ.ಅಶ್ರಫ್, ಎಂ.ಎಂ.ರಶೀದ್ ರಜಾಕ್ ಹಾಗೂ ಸ್ಥಳೀಯ ಮೂರು ಮಸೀದಿ ಆಡಳಿತದ ಅಧ್ಯಕ್ಷರುಗಳಾದ ನಾಸರ್ ಆಸಿಫ್ ಕೆ ಅಹ್ಮದ್ ಹಾಗೂ ಮೂರು ಮಹಲ್ಲಿನ ನಿವಾಸಿಗಳು ಹಾಜರಿದ್ದರು.
ವರದಿ : ಶರಫುದ್ದೀನ್ ಗೋಣಿಕೊಪ್ಪಲು