ನಾಪೋಕ್ಲು ಜೂ.14 : ನಾಪೋಕ್ಲು ವ್ಯಾಪ್ತಿಯ ಚೆರಿಯಪರಂಬು ರಸ್ತೆಯೂ ಸಂಪೂರ್ಣ ಹಾಳಾಗಿದ್ದು, ಸ್ಥಳೀಯ ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ರಸ್ತೆ ಗುಂಡಿ ಮುಚ್ಚಿದರು.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಚೇರಿಯಪರಂಬು ರಸ್ತೆಯ ದುರಸ್ಥಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಗಮನಹರಿಸದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವುದನ್ನು ಗಮನಿಸಿದ ಶೌರ್ಯ ಸದಸ್ಯರುಗಳು ಹೊಳೆಯಿಂದ ಹೊರಳು ಕಲ್ಲುಗಳನ್ನು ಶೇಖರಿಸಿ ಪಿಕಪ್ ವಾಹನದಲ್ಲಿ ತಂದು ರಸ್ತೆಗೆ ಹಾಕಿ ಸೇವಾ ಕಾರ್ಯವನ್ನು ಮಾಡಿ ರಸ್ತೆಗೊಂದು ಕಾಯಕಲ್ಪ ನೀಡಿ ನಾಪೋಕ್ಲು ಶೌರ್ಯ ಸದಸ್ಯರು ಊರಿನವರ ಪ್ರಶಂಸೆಗೆ ಭಾಜನರಾದರು.
ಈ ಸಂದರ್ಭ ಎನ್.ಬಿ.ದಿಲೀಶ್, ಬಿ.ಹೆಚ್.ಶಂಕರ್, ಸೀನಾ ಮಾಧವನ್, ಪಿ.ಎಂ.ಮಾಯಿಲಪ್ಪ, ಎಂ.ಗಣೇಶ್, ವೈ.ಆರ್.ಅಪ್ಪಣ್ಣ, ಕೆ.ಹೆಚ್.ಪ್ರವೀಣ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ








