ನಾಪೋಕ್ಲು ಜೂ.19 : ಬೆಂಗಳೂರಿನ ಇಂಚರ ಟೆಕ್ನೋಲಜಿ ಖಾಸಗಿ ಸಂಸ್ಥೆಯ ಇಂಚರ ಚಾರಿಟಬಲ್ ಟ್ರಸ್ಟ್ ಮತ್ತು ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಕ್ಕಬೆ ಗ್ರಾ.ಪಂ ವ್ಯಾಪ್ತಿಯ ತಡಿಯಂಡಮೊಳ್ ಬೆಟ್ಟದ ತಪ್ಪಲಿನಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಕಕ್ಕಬ್ಬೆ ಗ್ರಾ.ಪಂ ಅಧ್ಯಕ್ಷ ಕಲಿಯಂಡ ಸಂಪನ್. ಎ ಸಿ ಎಫ್ ಮೋಸಿನ್ ಭಾಷಾ, ಇಂಚರ ಫೌಂಡೇಶನ್ ಅಧ್ಯಕ್ಷ ಸಚ್ಚಿನ್ ವರ್ಮಾ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಂಚರ ಚಾರಿಟಬಲ್ ಟ್ರಸ್ಟ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ವರ್ಮ ಮಾತನಾಡಿ, ಕೊಡಗಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಒಂದು ಲಕ್ಷ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಟ್ರೀ ಚಾಂಪಿಯನ್ ಅಭಿಯಾನಕ್ಕೆ ಎಲ್ಲರ ಸಹಕಾರ ಅಗತ್ಯ ಕೊಡಗಿನ ಸುಂದರ ಪ್ರಕೃತಿ ಸೊಬಗು ಸದಾ ಮುಂದುವರಿಯಬೇಕು. ಕಾಡಿನೊಳಗಿರುವ ವನ್ಯ ಪ್ರಾಣಿಗಳನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದಲ್ಲಿ 10 ಸಾವಿರ ಹಣ್ಣಿನ ಗಿಡಗಳನ್ನು ನೆಡಲಾಗುತ್ತಿದೆ ಎಂದರು.
ಟ್ರೀ ಚಾಂಪಿಯನ್ ಅಭಿಯಾನ ರೂವಾರಿ ಕೇಟೋಳಿರ ವಿನ್ಸಿ ದೇವಯ್ಯ ಮಾತನಾಡಿ, ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಂಡು ತಡಿಯಂಡ ಮೂಳ್ ಬೆಟ್ಟದ ತಪ್ಪಲಿನಲ್ಲಿ ಗಿಡ ನೆಡಲಾಗುತ್ತಿದೆ. ಅವರ ಸಂಪೂರ್ಣ ಬೆಂಬಲದೊಂದಿಗೆ ವಿವಿಧ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಎರಡು ದಿನಗಳ ಕಾಲ ಆಯೋಜಿಸಿರುವ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಆರ್ ಎಫ್ ಓ ಮಯೂರ್, ರವೀಂದ್ರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಶೋಕ್, ಹೊದ್ದೂರು ಸಹಾಯಕ ವಲಯ ಅರಣ್ಯಾಧಿಕಾರಿ ಮಯೂರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕುಡಿಯರ ಮುತ್ತಪ್ಪ, ಇಂಚರ ಫೌಂಡೇಶನ್ ಸದಸ್ಯ ಕೇಟೋಳಿರ ವಿನ್ಸಿ ಕರುಣ್, ಕೇಟೋಳಿರ ಕರುಣ್ ಅಪ್ಪಯ್ಯ, ಪರಿಸರವಾದಿ ಕೇಟೋಳಿರ ಶಮ್ಮಿ ಅಯ್ಯಪ್ಪ, ಗೋಣಿಕೊಪ್ಪ ಇಗ್ಗುತ್ತಪ್ಪ ಕೊಡವ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ದೇವಯ್ಯ, ತಿರುನೆಲ್ಲಿಮಡ ಜೀವನ್, ಅಂಟೋನಿ ರೋಬಿನ್, ಬೊಟ್ಟೋಳಂಡ ವಿನು, ಕುಂಡ್ಯೋಳಂಡ ಬಿಪಿನ್, ಅಜ್ಜಿಕುಟ್ಟಿರ ಪೃಥ್ವಿ , ಪೊನ್ನಂಪೇಟೆ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್ ನ ಇಕೋ ಕ್ಲಬ್, ಎನ್ ಎಸ್ ಎಸ್ ಮತ್ತು ರೋಟ್ರಾಕ್ಟ್ ಸಂಘದ ಮಕ್ಕಳು ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು.








