ಸೋಮವಾರಪೇಟೆ ಜೂ.19 : ಕೆಂಚಮ್ಮನಬಾಣೆಯಲ್ಲಿನ ಶ್ರೀ ಬಲಮುರಿ ಗಣಪತಿ ದೇವಾಲಯದ 21ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕೋತ್ಸವದ ಅಂಗವಾಗಿ ದೇವಾಲದಲ್ಲಿ ಕಳಶರಾಧನೆ, ಪಂಚಾಮೃತಾಭಿಷೇಕ, ಗಣಹೋಮಗಳು ದೇವಾಲಯದ ಪ್ರದಾನ ಅರ್ಚಕ ಶ್ರೀನಿವಾಸ್ ಶರ್ಮ ಅವರ ಪೌರೋಹಿತ್ಯದಲ್ಲಿ ನಡೆಯಿತು.
ಉತ್ಸವದ ಪ್ರಯುಕ್ತ ಗ್ರಾಮದ ಪ್ರತಿ ಬೀದಿಯಲ್ಲಿ ಚಾಮರಾಜನಗರದ ವೀರಭದ್ರೇಶ್ವರ ಕಲಾತಂಡದಿಂದ ವೀರಗಾಸೆ ಕಾಯಕ್ರಮ ನಡೆಯಿತು.
ಈ ಸಂದರ್ಭ ನೂತನವಾಗಿ ಆಯ್ಕೆಯಾದ ಮಡಿಕೇರಿ ವಿಧಾನ ಸಭಾಕ್ಷೇತ್ರದ ಶಾಸಕ ಡಾ. ಮಂತರ್‍ಗೌಡ, ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ದಾನಿಗಳಾದ ಗುಡುಗೂರಿನ ಡಾ.ವೇಣುಗೋಪಾಲ್, ಮಧುವನ ಎಸ್ಟೇಟ್‍ನ ಮಧುಕರ್ ಭಟ್, ಪಾಲಿಗದ್ದೆ ಎಸ್ಟೇಟ್‍ನ ಎಚ್.ಪ್ರಸಾದ್, ಬೇಳೂರು ಎಸ್ಟೇಟ್‍ನ ರಾಣಿ ಪ್ರತಾಪ್ ಅವರನ್ನು ಸನ್ಮಾನಿಸಲಾಯಿತು.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ.ಸೋಮಶೇಖರ್, ಪದಾಧಿಕಾರಿಗಳಾದ ಕೆ.ಎಸ್.ಪ್ರತಾಪ್, ಪಿ.ಈ.ಸುರೇಶ್, ಕೆ.ಬಿ.ರಮೇಶ್, ಬಿ.ಆರ್. ರವಿ., ಎಂ.ಆರ್.ವಿಶ್ವನಾಥ್, ಕೆ.ಆರ್.ಶಿವಕುಮಾರ್ ಹಾಜರಿದ್ದರು.








