ಮಡಿಕೇರಿ ಜೂ.19 : ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ನಡೆದ 64ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಏಕರೂಪ್ ಕೌರ್ ಅವರು ಸಂಸ್ಥೆಯ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದರು.
64ನೇ ವಾರ್ಷಿಕ ಮಹಾಸಭೆಯಲ್ಲಿ 2023ರ ಮಾರ್ಚ್ 31 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷ 2022-23 ರ ಸಂಸ್ಥೆಯ ವಾರ್ಷಿಕ ಕಾರ್ಯಾಚರಣೆ ಹಾಗೂ ಪರಿಶೋಧಿಸಲ್ಪಟ್ಟ ಲೆಕ್ಕಪತ್ರಗಳ ಪ್ರಮುಖ ಅಂಶಗಳನ್ನು ಹಂಚಿಕೊಂಡರು.
ಸಂಸ್ಥೆಯು ಪ್ರಸಕ್ತ 2022-23ನೇ ಸಾಲಿನ ಆರ್ಥಿಕ ಸ್ಥಿತಿಯನ್ನು ಕ್ರೋಡಿಕರಿಲಾಗಿದ್ದು, ತೆರಿಗೆ ಪೂರ್ವ ರೂ. 138.78 ಕೋಟಿಗಳ ದಾಖಲೆ ಲಾಭಗಳಿಸಿದೆ ಹಾಗೂ ರೂ.107.31 ಕೋಟಿಗಳ ತೆರಿಗೆ ನಂತರದ ಲಾಭಗಳಿಸಿದೆ. ಸಂಸ್ಥೆಯು 2022-23 ರ ಹಣಕಾಸು ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 901.10 ಕೋಟಿ ರೂ.ಗಳ ಸಾಲದ ಮಂಜೂರಾತಿ ಮಾಡಿದ್ದು, ಇದರಲ್ಲಿ ರೂ.874.68 ಕೋಟಿಗಳ ಮೊತ್ತದ ಮಂಜೂರಾತಿಯು 682 ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಘಟಕಗಳಿಗೆ ಒಳಗೊಂಡಿದೆ. 2023 ರ ಮಾರ್ಚ್ ಅಂತ್ಯದವರೆಗೆ 1,75,833 ಉದ್ಯಮಗಳಿಗೆ 19,680.73 ಕೋಟಿ ರೂ.ಗಳ ಸಂಚಿತ ಸಾಲ ಮಂಜೂರಾತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ವರ್ಷದಲ್ಲಿ 445.81 ಕೋಟಿ ರೂ.ಗಳ ಸಾಲ ವಿತರಿಸಿದ್ದು, 2023 ರ ಮಾರ್ಚ್ ಅಂತ್ಯದವರೆಗೆ 15,222.10 ಕೋಟಿ ರೂ.ಗಳಷ್ಟು ಸಂಚಿತ ವಿತರಣೆ ಮಾಡಲಾಗಿದೆ. ಹಣಕಾಸು ವರ್ಷ 2022-23ರಲ್ಲಿ ಒಟ್ಟು 763.71 ಕೋಟಿ ರೂ.ಗಳ ವಸೂಲಾತಿ ಮಾಡಲಾಗಿದೆ, ಇದರಲ್ಲಿ 295.64 ಕೋಟಿ ರೂ.ಗಳಷ್ಟು ಮೊತ್ತವು ಬಡ್ಡಿಯ ಆದಾಯವಾಗಿದೆ. 2023 ರ ಮಾರ್ಚ್ ಅಂತ್ಯದವರೆಗೆ ಸಂಚಿತ ವಸೂಲಾತಿಯ ಮೊತ್ತವು 20,023.64 ಕೋಟಿ ರೂ.ಗಳಷ್ಟಾಗಿದೆ. ಹಾಗೆಯೇ ಹಿಂದಿನ ಹಣಕಾಸು ವರ್ಷ 2021-22ರಲ್ಲಿ ಶೇ.4.74ರಷ್ಟು ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು ಪ್ರಸಕ್ತ ಹಣಕಾಸು ವರ್ಷ 2022-23ರಲ್ಲಿ ಶೇ.3.51 ಕ್ಕೆ ಇಳಿದಿದೆ.
ಸಂಸ್ಥೆಯು ಸ್ಥಾಪಿತ ದಿನದಿಂದ ಮಾರ್ಚ್ 31, 2023 ರ ಅಂತ್ಯದವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 22,362 ಉದ್ಯಮಿಗಳಿಗೆ 2,762.72 ಕೋಟಿ ರೂ.ಗಳಿಗೂ ಅಧಿಕ ಸಾಲಗಳ ಮಂಜೂರಾತಿ ನೆರವು ನೀಡಿದೆ. ಮುಂದುವರೆದು 31,448 ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿದಾರರಿಗೆ 4,859.86 ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಿದೆ. ಹಾಗೆಯೇ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ 41,265 ಉದ್ಯಮಿಗಳಿಗೂ ಸುಮಾರು 1,906.55 ಕೋಟಿ ರೂ.ಗಳ ಸಾಲ ಮಂಜೂರಾತಿ ನೆರವನ್ನು ಒದಗಿಸಿದೆ ಎಂದು ತಿಳಿಸಿದ್ದಾರೆ.
ಈ ವರ್ಷದಲ್ಲಿ ಸಂಸ್ಥೆಯು, ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಯೋಜನೆಗಳಲ್ಲಿ, 105 ಮಹಿಳಾ ಉದ್ಯಮಿಗಳಿಗೆ 131.13 ಕೋಟಿ ರೂ.ಗಳ ಮಂಜೂರಾತಿ ಮಾಡಲಾಗಿದೆ. 31 ನೇ ಮಾರ್ಚ್ 2023ರ ಅಂತ್ಯದವರೆಗೆ 1,048.48 ಕೋಟಿ ರೂ.ಗಳ ಸಂಚಿತ ನೆರವನ್ನು 1,357 ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ.
ಹಾಗೆಯೇ ಈ ವರ್ಷದಲ್ಲಿ 96 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 106.18 ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಲಾಗಿದೆ. ಸದರಿ ಹಣಕಾಸು ವರ್ಷದ ಅಂತ್ಯದವರೆಗೆ 2,228.84 ಕೋಟಿ ರೂ.ಗಳ ಸಂಚಿತ ನೆರವನ್ನು 3,724 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ನೀಡಲಾಗಿದೆ.
ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ 287 ಘಟಕಗಳಿಗೆ 366.98 ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಸದರಿ ಹಣಕಾಸು ವರ್ಷದ ಅಂತ್ಯದವರೆಗೆ, 1,199 ಉದ್ಯಮಗಳಿಗೆ 1,362.18 ಕೋಟಿ ರೂ.ಗಳ ಸಂಚಿತ ನೆರವನ್ನು ನೀಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಏಕರೂಪ್ ಕೌರ್ ಅವರು ತಿಳಿಸಿದ್ದಾರೆ.
2022-23ರ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರವು ಸಂಸ್ಥೆಗೆ 54.60 ಕೋಟಿ ರೂ.ಗಳ ಈಕ್ವಿಟಿ ಬಂಡವಾಳವನ್ನು ಹಾಗೂ 173.62 ಕೋಟಿ ರೂ.ಗಳ ಬಡ್ಡಿ ಸಹಾಯಧನ ಯೋಜನೆಗಳಿಗೆ ಪೂರಕ ನೆರವನ್ನು ಒದಗಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ವಿಶೇಷ ಅನುದಾನ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರವು 19.75 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ.
ಸಂಸ್ಥೆಯು ಹಣಕಾಸು ವರ್ಷ 2023-24 ರಲ್ಲಿ ರೂ.1,100.00 ಕೋಟಿಗಳ ಸಾಧಾರಣ ಮಂಜೂರಾತಿ ಗುರಿ ಇಟ್ಟುಕೊಂಡು ಗುಣಮಟ್ಟದ ಉದ್ಯಮಗಳಿಗೆ ಹಣಕಾಸು ನೆರವು ನೀಡಿ ಆರ್ಥಿಕ ಅಭಿವೃದ್ಧಿಯ ಯೋಜನೆ ಹೊಂದಿದೆ. 2023-24ರ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಮತ್ತು ಮಹಿಳಾ ಉದ್ಯಮಿಗಳಿಗೆ ಹಾಗೂ ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಲಭ್ಯವಿರುವ ಬಡ್ಡಿ ಸಹಾಯಧನ ಯೋಜನೆಗಳಿಂದ ಮುಂಬರುವ ಹಣಕಾಸು ವರ್ಷದಲ್ಲಿ ಹೆಚ್ಚಿನ ಮಂಜೂರಾತಿ ಹಾಗೂ ವಿತರಣೆಯ ಗುರಿ ಸಾಧಿಸಲು ಅನುಕೂಲವಾಗುವ ನಿರೀಕ್ಷೆಯಿದೆ. ಜೊತೆಗೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಏಕರೂಪ್ ಕೌರ್ ವಿವರಿಸಿದ್ದಾರೆ.
Breaking News
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*
- *ಜ.30 ರಂದು ಹುತಾತ್ಮರ ದಿನಾಚರಣೆ : ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ*
- *ಹೈದರಾಬಾದ್ನಲ್ಲಿ ಗಮನ ಸೆಳೆದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ*
- *ಮಡಿಕೇರಿ : ಜ.28 ರಂದು ಕುಂದುರುಮೊಟ್ಟೆ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ “ದಶಮಿ” ಬಿಡುಗಡೆ*
- *ಮಡಿಕೇರಿಯ ಡಾ.ಅಂಬೇಡ್ಕರ್ ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಿ*
- *‘ಸಂವಿಧಾನ್ ಸಮ್ಮಾನ್ ಅಭಿಯಾನ್’ : ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡವರ ಬಣ್ಣ ಬಯಲು*
- *ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ ಕಾರ್ಯಕ್ರಮ ಉದ್ಘಾಟನೆ : ಮಂಡ್ಯದಲ್ಲಿ ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
- *ಭಾಗಮಂಡಲದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಗೌರವ ಸಮರ್ಪಣೆ*
- *ಬಲ್ಲಮಾವಟಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಡಾ.ಶೈಲಜಾ ಸಲಹೆ*
- *ಮೋಹನ್ ಭಾಗವತ್ ಹೇಳಿಕೆಗೆ ಕೊಡಗು ದಸಂಸ ಖಂಡನೆ*