ಸೋಮವಾರಪೇಟೆ ಜೂ.22 : ಪುಷ್ಪಗಿರಿ ಜೇಸಿ ಸಂಸ್ಥೆಗೆ ಅನುಬಂಧ ಸ್ನೇಹ ಸಂಬಂಧಗಳ ದರ್ಶನ ಶೀರ್ಷಿಕೆಯಡಿಯಲ್ಲಿ ಗೋಲ್ಡನ್ ಕಾಲರ್ ಪ್ರಸಿಡೆಂಟ್ ಅವಾರ್ಡ್ ದೊರಕಿದೆ.
ಬೀರೂರಿನಲ್ಲಿ ನಡೆದ ಜೆಸಿಐ ವಲಯ 14 ರ ಅರ್ಧವಾರ್ಷಿಕ ಸಮ್ಮೇಳನ-2023 ಕಾರ್ಯಕ್ರಮದಲ್ಲಿ ಕಳೆದ ಆರು ತಿಂಗಳಲ್ಲಿ ವಲಯ ಮತ್ತು ಜೆಸಿಐ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಘಟಕವನ್ನು ಗುರುತಿಸಿ ಅರ್ಧವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುಷ್ಪಗಿರಿ ಜೇಸಿ ಸೋಮವಾರಪೇಟೆ ಅಧ್ಯಕ್ಷೆ ಎಂ.ಎ.ರುಬೀನಾ ಅವರಿಗೆ ವಲಯ ಅಧ್ಯಕ್ಷರಾದ ಯಶಸ್ವಿನಿ, ವಲಯ ಉಪಾಧ್ಯಕ್ಷ ಎಚ್.ಆರ್. ಪ್ರಶಾಂತ್ ಗೋಲ್ಡನ್ ಕಾಲರ್ ಹಾಕುವ ಮೂಲಕ ಗೋಲ್ಡನ್ ಕಾಲರ್ ಪ್ರಸಿಡೆಂಟ್ ಅವಾರ್ಡ್ ನೀಡಿ ಗೌರವಿಸಿದರು.
ಇದರೊಂದಿಗೆ ಔಟ್ ಸ್ಟ್ಯಾಂಡಿಂಗ್ ಲಾಮ್ ವಿನ್ನರ್, ಔಟ್ ಸ್ಟ್ಯಾಂಡಿಂಗ್ ಫರ್ ಮಾರ್ಮರ್ ಪಿ.ಆರ್ ಅಂಡ್ ಮಾರ್ಕೆಟಿಂಗ್, ನೀಡ್ ಬ್ಲಡ್ ಕಾಲ್ ಜೆಸಿಐ ನಲ್ಲಿ ವಿನ್ನರ್, ಗೋ ಗ್ರೀನ್, ಮ್ಯಾನೇಜ್‍ಮೆಂಟ್ ಏರಿಯ ಕಾರ್ಯಕ್ರಮ ಮತ್ತು ಗೋ ಗ್ರೀನ್ ನಲ್ಲಿ ಸೆಕೆಂಡ್ ರನ್ನರ್ ಅಫ್ ಪ್ರಶಸ್ತಿಗಳನ್ನು ಘಟಕ ಪಡೆದುಕೊಂಡಿತು.
ಈ ಸಂದರ್ಭ ಜೇಸಿ ಸಂಸ್ಥೆಯ ಪದಾಧಿಕಾರಿಗಳಾದ ಜಗದಾಂಭ ಗುರುಪ್ರಸಾದ್, ಮಾಯಾ ಗಿರೀಶ್, ಮಮತ, ಕೆ.ಎ.ಪ್ರಕಾಶ್, ಜಿತೇಶ್, ದಿಶಾ ಹಾಜರಿದ್ದರು.









