ಮಡಿಕೇರಿ ಜು.1 : ಸೋಮವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ಸಭೆಯು ಅಧ್ಯಕ್ಷ ಸಿ.ಕೆ.ರೋಹಿತ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷ ರೋಹಿತ್ ಮಾತನಾಡಿ, ನಮ್ಮ ಅಸೋಸಿಯೇಷನ್ ವತಿಯಿಂದ ಆಗಿಂದಾಗೆ ಪ್ರವಾಸಿ ತಾಣಗಳ ಸ್ವಚ್ಛತಾ ಕಾರ್ಯ ಮಾಡುವುದರೊಂದಿಗೆ, ತಾಣಗಳ ಮಾಹಿತಿ ಫಲಕಗಳನ್ನು ಅಳವಡಿಸಬೇಕಿದೆ. ಇದರಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳನ್ನು ಗುರುತಿಸುವುದರೊಂದಿಗೆ, ತಾಣಗಳಲ್ಲಿ ಸಂತೋಷಪಡಲು ಅನುಕೂಲವಾಗುವುದು. ಅಲ್ಲದೆ, ಪ್ರವಾಸಿತಾಣಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕೌನ್ಸಿಲರ್ ಗಳಾದ ಜತಿನ್ ಬೋಪಣ್ಣ, ಹೋಂಸ್ಟೇ ಮಾಲೀಕರು ಯಾವ ರೀತಿಯಲ್ಲಿ ಪರವಾನಗಿ ಪಡೆಯಬೇಕು ಮತ್ತು ಪ್ರಾವಾಸೋದ್ಯಮ ಇಲಾಖೆಯ ಮಾನದಂಡಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕೌನ್ಸಿಲರ್ ಗಳಾದ ಅಶ್ವಥ್, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಅಭಿನಂದ್, ಖಜಾಂಚಿ ಪ್ರೀತಂ, ಕೊಡಗು, ಸಕಲೇಶಪುರ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಕೆ.ಎಸ್. ಕುಮಾರಸ್ವಾಮಿ, ಕಾರ್ಯದರ್ಶಿ ಜಯಪ್ರಕಾಶ್, ಖಜಾಂಚಿ ನವೀನ್ ಇದ್ದರು.