ಮಡಿಕೇರಿ ಜು.1 : ರಾಜ್ಯಾ ಶಾಲಾ ಶಿಕ್ಷಣ ಇಲಾಖಾ ಆಯುಕ್ತರಾಗಿ ಕೊಡಗು ಮೂಲಕ ಐಎಎಸ್ ಅಧಿಕಾರಿ ಬೊಳಂದಂಡ ಬಿ.ಕಾವೇರಿ (ತಾಮನೆ-ಬಲ್ಟಿಕಾಳಂಡ) ಆಯ್ಕೆಯಾಗಿದ್ದಾರೆ.
ಈತನಕ ಸಮಗ್ರ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಪ್ರಾಥಮಿಕ ಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ. ಈ ಹಿಂದೆ ಕಾವೇರಿ ಅವರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ, ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಲ್ಟಿಕಾಳಂಡ ಬೆಳ್ಯಪ್ಪ ಅವರ ಪುತ್ರಿಯಾಗಿರುವ ಕಾವೇರಿ ಮೂಲತಃ ಕಾರುಗುಂದದವರಾದ ಬೊಳಂದಂಡ ಮುತ್ತಣ್ಣ ಅವರ ಪತ್ನಿಯಾಗಿದ್ದಾರೆ.









