ಸುಂಟಿಕೊಪ್ಪ ಜು.1 : ವೃಕ್ಷೋದ್ಭವ ಶ್ರೀ ಶಕ್ತಿ ಮಹಾಗಣಪತಿ ದೇವಾಲಯದ 19ನೇ ವರ್ಷದ ವಾರ್ಷಿಕೋತ್ಸವವ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.
ಮುಂಜಾನೆಯಿಂದಲೇ ಪಂಚಾಮೃತ ಅಭಿಷೇಕ, ಸರ್ವ ಕಲಶಾಭಿಷೇಕ, ಕಳಶ ಜಲನಯನ, ಗಣಪತಿಹೋಮ, ಪೂರ್ಣಾಹುತಿ, ಪುಣ್ಯಾಹ ವಾಚನ, ಪೂರ್ಣಾಹುತಿ, ಪಂಚಾಮೃತ ಮಹಾ ಮಂಗಳಾರತಿ ಹಾಗೂ ಅನ್ನದಾನ ನಡೆಯಿತು.
ನಂತರ ಭಕ್ತಾಧಿಗಳ ಭಜನಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಎ.ಲೋಕೇಶ್ ಕುಮಾರ್, ಸಮಿತಿ ಅಧ್ಯಕ್ಷ ಬಿ.ರಮೇಶ್, ಕಾರ್ಯದರ್ಶಿ ಎಂ.ಮಂಜುನಾಥ್, ಉಪಾಧ್ಯಕ್ಷ ಬಿ.ದಿವಾಕರ್ ಪೂಜಾರಿ, ಪುಳಂಜನ ಕುಶಾಲಪ್ಪ, ಬಿ.ಎಸ್.ರಮೇಶ್, ಜಂಟಿ ಕಾರ್ಯದರ್ಶಿ ದಿವಾಕರ್ ರೈ, ಸಮಿತಿ ಸದಸ್ಯರಾದ ಬಿ.ಎಸ್.ಸದಾಶಿವ ರೈ, ಸುರೇಶ್, ಮನೀಷ್ ಚೌದರಿ, ಮಾಂಗಿಲಾಲ್ ಚೌದರಿ, ಎ.ಶ್ರೀಧರ್ ಕುಮಾರ್, ಸಾಗತ್, ಸುರೇಶ್ ಚಂದು, ಮನುಅಚ್ಚಮ್ಮಯ್ಯ, ಪವಿ, ಯಶೋದರ್, ಬಿ.ಆರ್.ಅರುಣ್ ಕುಮಾರ್, ಶಿವರಾಮನ್, (ಶಿವಮಣಿ) ನಿಖಿಲ್, ಹರೀಶ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯವನ್ನು ತಳಿರುತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.








