ಮಡಿಕೇರಿ ಜು.4 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕ್ರಿಶ್ಚಿಯನ್ ಘಟಕದ ವತಿಯಿಂದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವಿರಾಜಪೇಟೆಯಲ್ಲಿ ಶಾಸಕರನ್ನು ಸನ್ಮಾನಿಸಿದ ಪಕ್ಷದ ಪ್ರಮುಖರು ಸ್ಥಳೀಯ ಸಂಸ್ಥೆ ಮತ್ತು ನಿಗಮ, ಮಂಡಳಿಗಳಲ್ಲಿ ಕ್ರೈಸ್ತರಿಗೆ ಪ್ರಾತಿನಿಧ್ಯ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಜಾನ್ಸನ್ ಪಿಂಟೋ, ಲಾರೆನ್ಸ್, ಮರ್ವಿನ್ ಲೋಬೋ, ಜೋಕಿಂ ರಾಡ್ರಿಗಸ್, ಕೆಪಿಸಿಸಿ ಸದಸ್ಯ ಜೋಸೆಫ್ ಸ್ಯಾಂ, ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಜೊಸೇಫ್ ವಿನ್ಸೆಂಟ್, ಪ್ರಮುಖರಾದ ಜೂಡಿವಾಸ್, ಮಲೆರಿ ಲೋಬೋ, ತೆರೆಝಾ ವಿಕ್ಟರ್ ಮತ್ತಿತರರು ಉಪಸ್ಥಿತರಿದ್ದರು.








