ನಾಪೋಕ್ಲು ಜೂ.8 : ಜಿಲ್ಲೆಯಾದ್ಯಂತ ಬಿರುಸಿನ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ ಸಮೀಪದ ಕೊಳಕೇರಿ ಗ್ರಾಮದ ಕೋಟೇರಿ ಮತ್ತು ಹೊದ್ದೂರು ಗ್ರಾಮ ಪಂಚಾಯತಿಯ ಕುಯ್ಯಂಗೇರಿಯಲ್ಲಿ ರೈತರು ಭತ್ತದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಕೆಲವು ದಿನಗಳಿಂದ ಮಳೆಸುರಿದ ಪರಿಣಾಮ ಗದ್ದೆಗಳಲ್ಲಿ ನೀರಾಗಿದ್ದು ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜಾಗಿದ್ದಾರೆ. ಸರಕಾರದ ವತಿಯಿಂದ ರೈತರ ಶ್ರೇಯೋಭಿವೃದ್ಧಿಗೆ ಕೃಷಿ ಇಲಾಖೆಯ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಬತ್ತದ ಬಿತ್ತನೆ ಬೀಜಗಳನ್ನು ಒದಗಿಸುತ್ತಿದೆ.
ಅಭಿಪ್ರಾಯ :: ಮಳೆಯ ಕೊರತೆಯಿಂದ ಹಲವು ರೈತರು ಭತ್ತದ ಕೃಷಿ ಕಾರ್ಯಕ್ಕೆ ಹಿಂದೇಟು ಹಾಕಿದ್ದರು. ಇದೀಗ ಮಳೆ ಆಗುತ್ತಿರುವುದರಿಂದ ಬಿತ್ತನೆ ಕಾರ್ಯ ಆರಂಭಗೊಂಡಿದೆ. ದೊಡ್ಡಿ ತಳಿಯ ಭತ್ತದ ಬಿತ್ತನೆ ಮಾಡುತ್ತಿದ್ದೇನೆ. ಇದರಿಂದ ಉತ್ತಮ ಇಳುವರಿ ದೊರಕುತ್ತಿದೆ ಹಾಗೂ ಉತ್ತಮ ದರವು ಇದೆ. ಕೆಲವು ವರ್ಷಗಳಿಂದ ಇದೆ ತಳಿಯನ್ನು ಬೆಳೆಯುತ್ತಿರುವುದರಿಂದ ಇಳುವರಿ ಲಾಭದಾಯಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ ಕಡಿಮೆ, ಕಳೆದ ವರ್ಷ ಇದೇ ಅವಧಿಗೆ 60 ಇಂಚು ಮಳೆ ಸುರಿದಿತ್ತು ಈ ವರ್ಷ 25 ಇಂಚು ಮಳೆಯಾಗಿದೆ.
ಅಪ್ಪಾರಂಡ ಸುಧೀರ್ ಅಪ್ಪಯ್ಯ- ಪ್ರಗತಿಪರ ರೈತ
ಕೊಳಕೇರಿ ಗ್ರಾಮದ
ವರದಿ : ದುಗ್ಗಳ ಸದಾನಂದ