ಮಡಿಕೇರಿ ಜು.10 : ವಿರಾಜಪೇಟೆ ವಿಧಾನಸಭಾಕ್ಷೇತದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಕೊಡವ ಹಾಕಿ ಅಕಾಡೆಮಿ ವತಿಯಿಂದ ಅಭಿನಂದಿಸಿ ಶುಭ ಕೋರಲಾಯಿತು.
ವಿರಾಜಪೇಟೆಯಲ್ಲಿನ ಶಾಸಕರ ಕಚೇರಿಯಲ್ಲಿ ಭೇಟಿಯಾದ ಅಕಾಡೆಮಿ ಪದಾಧಿಕಾರಿಗಳು ಹಾಗೂ ಸದಸ್ಯರು, ಅಕಾಡೆಮಿಯ ಲಾಂಛನವುಳ್ಳ ಸ್ಮರಣಿಕೆ ನೀಡಿ ಗೌರವಿಸಿದರು.
ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ ಶಾಸಕರಾಗುವುದಕ್ಕೂ ಮುನ್ನ ಹಲವು ರೀತಿಯ ಸಹಕಾರ ನೀಡಿದ್ದಾರೆ. ಮುಂದೆಯೂ ಸಹಕಾರ ನೀಡುವಂತೆ ಪದಾಧಿಕಾರಿಗಳು ಕೋರಿದರು.
ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಉಪಾಧ್ಯಕ್ಷ ಬಡಕಡ ದೀನಾ ಪೂವಯ್ಯ, ಕುಕ್ಕೇರ ಜಯಚಿಣ್ಣಪ್ಪ, ಮಾದಂಡ ಎಸ್.ಪೂವಯ್ಯ, ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಚೈಯ್ಯಂಡ ಸತ್ಯ ಗಣಪತಿ, ಸಮಿತಿ ಸದಸ್ಯರಾದ ಕಂಬೀರಂಡ ರಾಕಿ ಪೂವಣ್ಣ, ಚೇನಂದ ಸುರೇಶ್ ನಾಣಯ್ಯ, ಕಲಿಯಂಡ ಸಂಪತ್ ಅಯ್ಯಪ್ಪ, ಕುಲ್ಲೇಟಿರ ಅರುಣ್ ಬೇಬ, ಮಾರ್ಚಂಡ ಗಣೇಶ್ ಪೊನ್ನಪ್ಪ, ನೆರ್ಪಂಡ ಹರ್ಷ ಮಂದಣ್ಣ ಈ ಸಂದರ್ಭ ಹಾಜರಿದ್ದರು.








