ಕುಶಾಲನಗರ,ಜು.18 : ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ನವಗ್ತಾಮದಲ್ಲಿ ಹೈಮಾಸ್ಟ್ ಲೈಟ್ ಅಳವಡಿಸುವ ಕಾಮಗಾರಿಗೆ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಚಾಲನೆ ನೀಡಿದರು.
ಕೂಡ್ಲೂರಿನ ನವಗ್ರಾಮದ ನ್ಯಾಯಬೆಲೆ ಅಂಗಡಿ ಬಳಿ ಅಮೃತ ಗ್ರಾಮ ಯೋಜನೆಯ ಒಂದು ಲಕ್ಷ ರೂ .ವೆಚ್ಚದ ಅನುದಾನದಲ್ಲಿ ಹೈಮಾಸ್ಟ್ ಅಳವಡಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೈಮಾಸ್ಟ್ ಅಳವಡಿಸಲಾಗುತ್ತಿದೆ.
ನಂತರ ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ನವಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಬಳಿ ಹೈಮಾಸ್ಟ್ ಅಳವಡಿಸುವಂತೆ ಗ್ರಾಮಸ್ಥರ ಆಗ್ರಹಿಸಿದ ಹಿನ್ನಲೆ ಸ್ಥಳದಲ್ಲಿ ಅಮೃತ ಗ್ರಾಮ ಯೋಜನೆಯ ಅನುದಾನದಲ್ಲಿ ಹೈಮಾಸ್ಟ್ ಲೈಟನ್ನು ಅಳವಾಡಿಸಲಾಗುತ್ತಿದೆ. ವರ್ಕ್ಸ್ ನಿಂದ ಬರುವ ಕಾರ್ಮಿಕರಿಗೆ, ಮಹಿಳೆಯರಿಗೆ ರಾತ್ರಿ ಹೊತ್ತಿನಲ್ಲಿ ಸಂಚರಿಸಲು ಅನುಕೂಲವಾಗಲಿದೆ ಎಂದರು.
ಈ ಸಂದರ್ಭ ಸ್ಥಳೀಯ ಗ್ರಾಮಸ್ಥರು ಇದ್ದರು.