ಮಡಿಕೇರಿ ಜು.27 : ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೈನಿಕರಿಗೆ, ಮಾಜಿ ಸೈನಿಕರಿಗೆ ದೊರಕಬೇಕಾದ ಸೂಕ್ತ ಗೌರವ ಸಿಕ್ಕುತ್ತಿಲ್ಲ ಎಂಬ ನೋವು ಕಾಡುತ್ತದೆ ಎಂದು ವಿಷಾದಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಯುದ್ದಕಾಲದಲ್ಲಿ ಮಾತ್ರ ಸೈನಿಕರನ್ನು ಸ್ಮರಿಸುವ ಬದಲಿಗೆ ಸದಾ ದೇಶ ರಕ್ಷಣೆಯ ಪಣ ತೊಟ್ಟಿರುವ ಭಾರತೀಯ ಸೈನಿಕರನ್ನು ಸ್ಮರಿಸುವಂತಾಗಬೇಕು ಎಂದು ಕರೆ ನೀಡಿದರು.
ಕಾಗಿ೯ಲ್ ವಿಜಯ ದಿನಾಚರಣೆ ಹಿನ್ನಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಬುಧವಾರ ಸಂಜೆ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಅಮರ್ ಜವಾನ್ ಸ್ಮಾರಕದಲ್ಲಿ ಪುಪ್ಪನಮನ ಸಲ್ಲಿಸಿದ ಪೊನ್ನಣ್ಣ ತರುವಾಯ ಕಾಯ೯ಕ್ರಮದಲ್ಲಿ ಮಾತನಾಡಿ, ದೇಶದ ವೀರಇತಿಹಾಸದೊಂದಿಗೇ ಸೈನಿಕರ ಕೊಡುಗೆಯನ್ನೂ ಮರೆಯಬಾರದು ಎಂದರು. ಯೋಧರ ನಾಡು ಎನಿಸಿದ ಕೊಡಗಿನಲ್ಲಿ ಯೋಧಸ್ಮರಣೆಗೆ ಮತ್ತಷ್ಟು ಹೆಚ್ಚಿನ ಪ್ರಚಾರ ದೊರಕಬೇಕು ಎಂದು ಅಭಿಪ್ರಾಯಪಟ್ಟರು.
ಭಾರತದ ಸಂರಕ್ಷಣೆಗೆ ಯೋಧರು ನೀಡಿರುವ ತ್ಯಾಗಬಲಿದಾನವನ್ನು ಎಂದಿಗೂ ಮರೆಯಬಾರದು. ಇತಿಹಾಸದಲ್ಲಿ ಸೈನಿಕರು ದೇಶರಕ್ಷಣೆ ನಿಟ್ಟಿನಲ್ಲಿ ಮಾಡಿದ ಪರಾಕ್ರಮವನ್ನು ಸದಾ ಸ್ಮರಿಸಬೇಕು. ಇತಿಹಾಸ ಮರೆತದ್ದೇ ಆದರೆ ಯಾರೂ ಹೊಸ ಇತಿಹಾಸ ನಿಮಿ೯ಸಲು ಅಸಾಧ್ಯ ಎಂಬ ಡಾ.ಅಂಬೇಡ್ಕರ್ ಮಾತನ್ನು ಸದಾ ಯೋಚನೆಯಲ್ಲಿರಿಸಬೇಕು ಎಂದೂ ಪೊನ್ನಣ್ಣ ಅಭಿಪ್ರಾಯಪಟ್ಟರು. ಭಾರತೀಯ ಸೈನಿಕರಿಗೆ ನಾವು ಸದಾ ಗೌರವ ನೀಡಬೇಕಾಗಿದೆ. ಸೈನಿಕನೋವ೯ ಬಸ್ ಹತ್ತಿದನೆಂದರೆ ಸಹಪ್ರಯಾಣಿಕರು ಆತನ ಲಗೇಜ್ ತಾವೇ ಎತ್ತಿ ಬಸ್ ನಲ್ಲಿರಿಸಿಕೊಂಡು ಆತನಿಗೆ ಆಸನ ನೀಡುವಂತಾಗಬೇಕು. ಸೈನಿಕನ ತ್ಯಾಗದ ಜೀವನಕ್ಕೆ ಇದು ನಮ್ಮೆಲ್ಲರ ಕೊಡುಗೆಯಂತಿರಬೇಕು ಎಂದು ಸಲಹೆ ನೀಡಿದ ಎ.ಎಸ್.ಪೊನ್ನಣ್ಣ, ಕಾಗಿ೯ಲ್ ನಲ್ಲಿ ಭಾರತದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಕಾಗಿ೯ಲ್ ಅತಿಕ್ರಮಣಕ್ಕೆ ಮುಂದಾದ ಪಾಕಿಸ್ತಾನದ ಕುತಂತ್ರವನ್ನು ಎಂದಿಗೂ ಮರೆಯಲು ಅಸಾಧ್ಯ ಎಂದು ಹೇಳಿದರು.
ಜನರಲ್ ತಿಮ್ಮಯ್ಯ ಮ್ಯೂಸಿಯಂನಂಥ ಸೈನಿಕರ ದೇವಾಲಯದಲ್ಲಿ ಕಾಗಿ೯ಲ್ ದಿನಾಚರಣೆಯನ್ನು ರೋಟರಿ ಮಿಸ್ಟಿ ಹಿಲ್ಸ್ ಆಯೋಜಿಸಿದ್ದು ಸಂತೋಷ ತಂದಿದೆ. ಮುಂದಿನ ವಷ೯ದಿಂದ ಇಂಥ ಕಾಯ೯ಕ್ರಮಕ್ಕೆ ಜಿಲ್ಲಾಡಳಿತ ಕೂಡ ಸಹಭಾಗಿತ್ವ ನೀಡುವಂತೆ ಮಾಡಲಾಗುತ್ತದೆ ಎಂದು ಪೊನ್ನಣ್ಣ ಭರವಸೆ ನೀಡಿದರು.
ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೊಡಗು ಮಾಜಿ ಸೈನಿಕರ ಸಂಘದ ಗೌರವ ಕಾಯ೯ದಶಿ೯ ನಿವೖತ್ತ ಮೇಜರ್ ಓ.ಎಸ್.ಚಿಂಗಪ್ಪ, ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದಾಗ ಶಾಂತಿಮಂತ್ರದಂತೆ ಪಾಕಿಸ್ತಾನದ ಪ್ರಧಾನಿಗಳ ಕೈಕುಲುಕಿ ಸ್ನೇಹ ಹಸ್ತ ಚಾಚಿ ಬಂದರಾದರೂ ಕೊನೆಗೆ ಕಾಗಿ೯ಲ್ ವಿಚಾರದಲ್ಲಿ ಉಭಯ ದೇಶಗಳ ಒಪ್ಪಂದ ಮುರಿದು ಪಾಕಿಸ್ತಾನ ನಂಬಿಕೆ ದ್ರೋಹ ಮಾಡಿ ಭಾರತೀಯ ಸೈನಿಕರಿಂದ ತಕ್ಕ ಶಾಸ್ತಿ ಅನುಭವಿಸಿತು ಎಂದರು.
ಕಾಗಿ೯ಲ್ ನ್ನು ಬಹಳ ಸಾಹಸದಿಂದ ಮರಳಿ ಪಡೆದ ಭಾರತೀಯ ಸೈನಿಕರ ಪರಾಕ್ರಮವನ್ನು ಪ್ರತೀ ವಷ೯ ಜುಲೈ 26 ರಂದು ಕಾಗಿ೯ಲ್ ವಿಜಯ್ ದಿನವನ್ನಾಗಿ ಆಚರಿಸಿ ಯೋಧರಿಗೆ ಗೌರವ ನೀಡಲಾಗುತ್ತಿದೆ. ಕಾಗಿ೯ಲ್ ಸಮರ ಭಾರತಕ್ಕೆ ತಕ್ಕ ಪಾಠವಾಗಿತ್ತು ಎಂದು ಚಿಂಗಪ್ಪ ಹೇಳಿದರು.
ರೋಟರಿ ಸಹಾಯಕ ಗವನ೯ರ್ ದೇವಣಿರ ತಿಲಕ್ ಮಾತನಾಡಿ, ನಮ್ಮ ಇವತ್ತಿನ ಪ್ರತೀ ದಿನಗಳೂ ಭಾರತೀಯ ಸೈನಿಕರ ತ್ಯಾಗಬಲಿದಾನದ ಮೇಲೆ ಅವಲಂಭಿತವಾಗಿದೆ. ಸೈನಿಕರ ಕುಟುಂಬಗಳಿಗೆ ಬೆಂಬಲವನ್ನು ಸಮಾಜದ ಪ್ರಜೆಗಳಾಗಿ ನೀಡಬೇಕು ಎಂದರಲ್ಲದೇ, ಕಾಗಿ೯ಲ್ ಪ್ರದೇಶವನ್ನು ಶತ್ರುಗಳಿಂದ ಮರಳಿ ಪಡೆಯಲು ಭಾರತೀಯ ಸೈನಿಕರು ಪಟ್ಟ ಸಾಹಸ ಜಗತ್ತಿನ ಇತಿಹಾಸದ ಪುಟಗಳಲ್ಲಿಯೇ ದಾಖಲಾಗುವಂಥದ್ದು ಎಂದರು. ಮುಂದಿನ ಪೀಳಿಗೆ ಕಾಗಿ೯ಲ್ ಹೋರಾಟದಲ್ಲಿ ನಮ್ಮ ಸೈನಿಕರ ತ್ಯಾಗಬಲಿದಾನವನ್ನು ಮರೆಯಬಾರದು ಎಂದೂ ತಿಲಕ್ ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ಸಾಮಾಜಿಕ ಸೇವಾ ಸಂಸ್ಥೆಯಾದ ರೋಟರಿಯು ದೇಶರಕ್ಷಣೆಯಲ್ಲಿ ಸಕ್ರಿಯರಾಗಿರುವ ಹೆಮ್ಮೆಯ ಸೈನಿಕರನ್ನು ಸ್ಮರಿಸುವ ಉದ್ದೇಶದಿಂದ ಪ್ರತೀವಷ೯ ಕಾಗಿ೯ಲ್ ವಿಜಯ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಈ ಮೂಲಕ ಸೈನಿಕ ಪರಿವಾರಕ್ಕೆ ರೋಟರಿಯು ತನ್ನ ಗೌರವವನ್ನು ಸಾಂಕೇತಿಕವಾಗಿ ಸಲ್ಲಿಸುತ್ತಿದೆ ಎಂದರು.
ಮಿಸ್ಟಿ ಹಿಲ್ಸ್ ಕಾಯ೯ದಶಿ೯ ರತ್ನಾಕರ್ ರೈ ವಂದಿಸಿದ ಕಾಯ೯ಕ್ರಮವನ್ನು ರೋಟರಿ ನಿದೇ೯ಶಕ ಅನಿಲ್ ಎಚ್.ಟಿ. ನಿರೂಪಿಸಿದರು. ರೋಟರಿ ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧಮ೯ಜ ಉತ್ತಪ್ಪ, ವಕೀಲ ನರೇಂದ್ರ ಕಾಮತ್, ಬಿದ್ದಾಟಂಡ ತಮ್ಮಯ್ಯ, ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ, ರೋಟರಿ ಪ್ರಮುಖರಾದ ಎ.ಕೆ.ವಿನೋದ್, ಬಿ.ಜಿ.ಅನಂತಶಯನ, ಪ್ರಸಾದ್ ಗೌಡ, ಬಿ.ಕೆ.ರವೀಂದ್ರರೈ, ಪೂವಯ್ಯ, ಪಿ.ವಿ. ಅಶೋಕ್, ಶಿಲ್ಪಾರೈ, ಕೆ.ವಸಂತ್ ಕುಮಾರ್ ಸೇರಿದಂತೆ ಅನೇಕರು ಯೋಧ ನಮನ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೊಡಗು ವಿದ್ಯಾಲಯದ ವಿದ್ಯಾಥಿ೯ಗಳಾದ ಕೌಶಲ್, ಕ್ಯಾತಿ ಮತ್ತುಕೖತಾಥ೯ ಅವರಿಂದ ದೇಶಭಕ್ತಿಗೀತೆ ಮೆಚ್ಚುಗೆ ಪಡೆಯಿತು.
ನಿವೃತ್ತ ಯೋಧ ಮಾದಯ್ಯ ಅವರಿಗೆ ಸನ್ಮಾನ :: ಭಾರತೀಯ ಸೇನಾ ಪಡೆಯ ನಿವೃತ್ತ ಯೋಧ, ಪ್ರಸ್ತುತ ಮಡಿಕೇರಿಯ ಸಂಚಾರಿ ಪೊಲೀಸ್ ಆಗಿರುವ ಉಗ್ರಾಣಿ ಮಾದಯ್ಯ ಅವರನ್ನು ಶಾಸಕ ಪೊನ್ನಣ್ಣ ಮತ್ತು ಮೇಜರ್ ಓ.ಎಸ್ .ಚಿಂಗಪ್ಪ ಸನ್ಮಾನಿಸಿ ಗೌರವಿಸಿದರು.
ಕಾಗಿ೯ಲ್ ವಿಜಯದಿನದ ಹಿನ್ನಲೆಯಲ್ಲಿ ದೇಶದ ಸೇನಾಪಡೆಯಲ್ಲಿ ಕತ೯ವ್ಯ ಸಲ್ಲಿಸಿ ನಿವೃತ್ತರಾದ ಯೋಧರನ್ನು ರೋಟರಿ ವತಿಯಿಂದ ಗೌರವಿಸಲಾಗುತ್ತಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಹೇಳಿದರು.