ಮಡಿಕೇರಿ ಆ.6 : ಕುಶಾಲನಗರ ಅರೆಭಾಷಿಕ ಸಮುದಾಯದ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಹಾಗೂ ಗೌಡ ಮಹಿಳಾ ಸ್ವ – ಸಹಾಯ ಸಂಘದ ವತಿಯಿಂದ ಆಟಿ ಸಂಭ್ರಮ -2023 ಕಾರ್ಯಕ್ರಮ ಸ್ಥಳೀಯ ಗೌಡ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಉದ್ಘಾಟಿಸಿದರು.
ಈ ಸಂದರ್ಭ ನಿವೃತ್ತ ಯೋಧ ದೇವಜನ ಚಿಣ್ಣಪ್ಪ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಮಹಿಳಾ ಒಕ್ಕೂಟದ ಅಧ್ಯಕ್ಷ ಚೀಯಂಡಿ ಶಾಂತಿ, ನಿರ್ದೇಶಕರಾದ ಚೆರಿಯಮನೆ ಪಾರ್ವತಿ, ಗೌಡ ಸ್ವ ಸಹಾಯ ಸಂಘದ ಅಧ್ಯಕ್ಷೆ ಸೂದನ ಲೀಲಾವತಿ, ಶಾರದಾ ಬಸಪ್ಪ, ಪಟ್ಟಂದಿ ಬೀನಾ ಸೀತಾರಾಂ ಮೊದಲಾದವರಿದ್ದರು.
ಎಡಿಕೇರಿ ಪ್ರೀತು ಸುಜಿತ್ ಅವರು ಸಿದ್ದಪಡಿಸಿದ್ದ ಮರಗೆಣಸಿನ ಹಪ್ಪಳ, ಚಿಲ್ಲನ ಲತಾ ಗಣಿಪ್ರಸಾದ್ ಅವರ ಮರಕೆಸದ ಪತ್ರೊಡೆ ಹಾಗೂ ಆಟಿಸೊಪ್ಪಿನ ರಸದ ಶಾವಿಗೆ, ನಡುವಟ್ಟಿರ ವನಿತ ಸುಜಿತ್ ಅವರ ಬಾಳೆ ಹೂವಿನ ಪಲ್ಯ, ಕಲಾ ಆನಂದ್ ಅವರ ಡ್ರೈ ಫಿಶ್ ಕರಿ, ಫಿಶ್ ಎಗ್ ರೋಸ್ಟ್ ಇನ್ನು ಇತರೇ ಮಹಿಳೆಯರು ಸಿದ್ದಪಡಿಸಿ ತಂದಿದ್ದ ಕಹಿಹುಳಿ ಪಜ್ಜಿ, ಆಟಿ ರಸದ ಹಲ್ವಾ, ಮಾವಿನ ಹಣ್ಣಿನ ಹಲ್ವ, ಕಣಲೆ ಉಪ್ಪಿನಕಾಯಿ, ಪಂದಿ ಕರಿ ಮೊದಲಾದ ಆಟಿ ಖಾದ್ಯಗಳು ಆಟಿ ಸಂಭ್ರಮದಲ್ಲಿ ಗಮನ ಸೆಳೆದವು.
Breaking News
- *ಎಂ.ಎಂ.ಸುಪ್ರಿತಾಗೆ ಚಿನ್ನದ ಪದಕ*
- *ಜ.25 ರಂದು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ*
- *ಸುಂಟಿಕೊಪ್ಪ : ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ : ಎ.ಲೋಕೇಶ್ ಕುಮಾರ್*
- *ಮಡಿಕೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಣೆ*
- *ಮಡಿಕೇರಿಯಲ್ಲಿ ಪರಾಕ್ರಮ್ ದಿವಸ್ ಆಚರಣೆ : ಪರೀಕ್ಷಾ ಪೇ ಚರ್ಚಾ 9ನೇ ಆವೃತ್ತಿ*
- *ಕಳೆದು ಹೋಗಿದೆ*
- *ಫೆ.27 ಮತ್ತು 28 ರಂದು ಕೊಡವ ಬಲ್ಯನಮ್ಮೆ : ವಿವಿಧ ಸ್ಪರ್ಧೆಗಳಿಗೆ ಆಹ್ವಾನ*
- *ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ : ಮಾ.11ಕ್ಕೆ ವಿಚಾರಣೆ ಮುಂದೂಡಿಕೆ*
- *ಜ.25 ರಂದು ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ*