ನಾಪೋಕ್ಲು ಆ.28 : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಧಾನ ಪರಿಷತ್ ಸದಸ್ಯರು, ಕೊಡಗು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಮತ್ತು ಕುಟುಂಬಸ್ಥರು 12 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಹೆಬ್ಬಾಗಿಲನ್ನು ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭ ಎಂ.ಆರ್ ಸೀತಾರಾಮ್ ಮಾತನಾಡಿ, ಇಗ್ಗುತಪ್ಪನ ಆಶೀರ್ವಾದದಿಂದ ದೇವಾಲಯಕ್ಕೆ ಮೆಟ್ಟಿಲುಗಳನ್ನು ಹಾಗೂ ಹೆಬ್ಬಾಗಿಲನ್ನು ಸಮರ್ಪಿಸಿ ಉದ್ಘಾಟನೆ ನೆರವೇರಿಸಲಾಗಿದೆ ಎಂದರು.
ಭಕ್ತರ ಅನುಕೂಲಕ್ಕಾಗಿ ದೇವಾಲಯಕ್ಕೆ ತೆರಳಲು ಈ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿಲಾಗಿದ್ದು, ಮಧ್ಯಭಾಗದಲ್ಲಿ ರಸ್ತೆ ಕೆಲಸ ಬಾಕಿ ಇದ್ದು ಅದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಇಗ್ಗುತ್ತಪ್ಪ ದೇವಾಲಯದಲ್ಲಿ ಆಚರಿಸಲಾಗುತ್ತಿರುವ ಚೀನ್ಯಾರು ಹತ್ತರ ಹಬ್ಬದಂದು ದೇವಾಲಯದ ಹೆಬ್ಬಾಗಿಲನ್ನು ಸೀತಾರಾಮ್ ಅವರು ನಿರ್ಮಿಸಿ ಕೊಟ್ಟು ಇಂದು ಲೋಕಾರ್ಪಣೆ ಗೊಳಿಸಿದ್ದಾರೆ. ಮಾತ್ರವಲ್ಲದೆ ಸನ್ನಿಧಿಗೆ ಬರುವ ರಸ್ತೆ ಈ ಹಿಂದೆ ತೀವ್ರ ಹದಗೆಟ್ಟಿದ್ದು, ಅದನ್ನು ಕಾಂಕ್ರೀಟಿಕರಣಗೊಳಿಸಿ ಕೊಡುಗೆ ನೀಡಿದ್ದಾರೆ. ಸಮಸ್ತ ಭಕ್ತರ ಪರವಾಗಿ ಅವರಿಗೆ ಅಭಿನಂದನೆಗಳು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ, ದೇವತಕ್ಕರಾದ ಪರದಂಡ ಸುಮನ್ ಕಾವೇರಪ್ಪ ಹೇಳಿದರು.
ಈ ಸಂದರ್ಭ ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಜನಸೇವಕರಾದ ಕದ್ದಣಿಯoಡ ಹರೀಶ್ ಬೋಪಣ್ಣ, ಪತ್ನಿ ಪ್ರತಿಮಾ, ಸೀತಾರಾಮ್ ಪತ್ನಿ ಶೃತಿ ಸೀತಾರಾಮ್, ಮಕ್ಕಳಾದ ರಕ್ಷಾ ರಾಮಯ್ಯ, ಸುಂದರ್ ರಾಮ್, ಭಕ್ತ ಜನ ಸಂಘದ ಕಾರ್ಯದರ್ಶಿ ಲಲಿತಾ ನಂದಕುಮಾರ್, ಭಕ್ತ ಜನ ಸಂಘದ ನಿರ್ದೇಶಕರಾದ ಕಲಿಯಂಡ ಹ್ಯಾರಿ ಮಂದಣ್ಣ, ಪರದಂಡ ಡಾಲಿ, ಬಾಚಮಂಡ ಪುವಣ್ಣ, ಲವ ಚಿನ್ನಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಪಾಂಡಂಡ ನರೇಶ್, ಬಿದ್ದಾಟಂಡ ತಮ್ಮಯ್ಯ, ದೇವಾಲಯದ ಪಾರು ಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಕಂದಾಯ ಪರಿವೀಕ್ಷಕ ರವಿಕುಮಾರ್, ಸಿಬ್ಬಂದಿ, ಇನ್ನಿತರ ಉಪಸ್ಥಿತರಿದ್ದರು.
ಈ ಸಂದರ್ಭ ಸೀತಾರಾಮ್ ಅವರ ತುಲಾಭಾರ ಸೇವೆ ಸಲ್ಲಿಸಿದರು. ಪೂಜಾ ವಿಧಿ ವಿಧಾನವನ್ನು ದೇವಾಲಯದ ಅರ್ಚಕರದ ಕುಶಭಟ್, ಜಗದೀಶ್ ಹಾಗೂ ಶ್ರೀಕಾಂತ್ ನೆರವೇರಿಸಿಕೊಟ್ಟರು.
ವರದಿ : ದುಗ್ಗಳ ಸದಾನಂದ