ವಿರಾಜಪೇಟೆ ಆ.28 : ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಮ್ಮತ್ತಿ ವಲಯ ಮಟ್ಟದ ಕ್ರೀಡಾ ಕೂಟ ಎರಡು ದಿನಗಳ ಕಾಲ ನಡೆಯಿತು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವನಜಾಕ್ಷಿ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಬಾಲ್ ಎಸೆತದೊಂದಿಗೆ ಕ್ರೀಡಾಕೂಟ ಉದ್ಘಾಟಿಸಿದರು.
ಬಿಳುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.
ಹತ್ತನೇ ತರಗತಿ ವಿದ್ಯಾರ್ಥಿನಿ ಆಯಿಷಾ ಹನ ಕ್ರೀಡಾ ಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ.ಆರ್ ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡೆ ದೇಹಕ್ಕೆ ಚೈತನ್ಯವನ್ನು ತುಂಬುತ್ತದೆ. ಎಲ್ಲರ ಆರೋಗ್ಯವನ್ನು ಕಾಪಾಡಿ, ಮಾನಸಿಕ ನೆಮ್ಮದಿ ನೀಡಲು ಕ್ರೀಡಾಕೂಟಗಳು ಅಗತ್ಯ. ನಮ್ಮ ಮಕ್ಕಳು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಬೇಕೆಂದು ಶುಭ ಹಾರೈಸಿದರು.
ಗ್ರಾ.ಪಂ ಮಾಜಿ ಸದಸ್ಯರಾದ ಐನಂಡ ಪ್ರತಾಪ್, ಚಿಲ್ಲವಂಡ ಕಾವೇರಪ್ಪ, ಹಾಗೂ ಅಮ್ಮತ್ತಿ ಕ್ಲಸ್ಟರ್ ಸಿಆರ್.ಪಿ. ಪ್ರವೀಣ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಹೆಚ್. ಅಲಿ ವಹಿಸಿದ್ದರು.
ವೇದಿಕೆಯಲ್ಲಿ ಸುಗುಣ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ. ಉತ್ತಪ್ಪ, ವಿರಾಜಪೇಟೆ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಅಮ್ಮತ್ತಿ ಕ್ರೀಡಾಕೂಟದ ಕಾರ್ಯದರ್ಶಿ ಹಾಗೂ ಸರ್ಕಾರಿ ಪ್ರೌಢ ಶಾಲೆ ಮಾಲ್ದಾರೆಯ ಮುಖ್ಯ ಶಿಕ್ಷಕರಾದ ಈಶ್ವರಿ, ಅಮ್ಮತ್ತಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾದ ದೊಡ್ಡತಮ್ಮಯ್ಯ, ಕಾರ್ಯಪ್ಪ, ನಿವೃತ್ತ ಶಿಕ್ಷಕ ಆಲ್ಬರ್ಟ್ ಡಿಸೋಜ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಿನ್ನಿ ಎಸ್.ಜಿ., ಕೆ.ಬಿ. ಕಿರಣ್ ಕುಮಾರ್ ಹಾಗೂ ಸುಬ್ರಮಣ್ಯ ಕ್ರೀಡಾಕೂಟದ ಜವಾಬ್ದಾರಿ ವಹಿಸಿಕೊಂಡಿದ್ದರು.
ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಗಳ ತೀರ್ಪುಗಾರರಾಗಿ ಕಾರ್ಯವನ್ನು ನಿರ್ವಹಿಸಿದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರೆ ಮುಖ್ಯ ಶಿಕ್ಷಕಿ ಅರುಣ ಆನ್ಸಿ ಡಿಸೋಜ ಸ್ವಾಗತಿಸಿ, ಶಿಕ್ಷಕರಾದ ಸಾವಿತ್ರಿ ಹೆಚ್. ಜಿ. ನಿರೂಪಿಸಿ, ಸಿ.ಆರ್.ಪಿ. ಪ್ರವೀಣ್ ವಂದಿಸಿದರು.
ಶಿಕ್ಷಕರಾದ ಲೀಲಾವತಿ, ಅನಿತಾ ಹಾಗೂ ಧನು ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕ ವೃಂದದವರು, ಸುಮಾರು 15 ಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು.