ಮಡಿಕೇರಿ ಆ.30 : ಹದಿನೆಂಟು ವರ್ಷ ವಯಸ್ಸಿನ ಮೇಲ್ಪಟ್ಟವರು ನೋಂದಣಿ ಪತ್ರವನ್ನು ತುಂಬುವ ಮೂಲಕ ಅಥವಾ ಜೀವ ಸಾರ್ಥಕತೆ ವೆಬ್‍ಸೈಟ್ https://www.jeevasarthakathe.karnataka.gov.in ಮೂಲಕ ನೇತ್ರದಾನಿಗಳಾಗಲು ನೋಂದಣಿ ಮಾಡಿಸಬಹುದು. ಆದರೆ ನೇತ್ರದಾನಕ್ಕೆ ಗರಿಷ್ಠ ವಯಸ್ಸಿನ ಮಿತಿ ಇರುವುದಿಲ್ಲ.
ನೇತ್ರದಾನ ಮಾಡಲು ಲಿಂಗ, ಶರೀರದ ಖಾಯಿಲೆಗಳಾದ ಸಕ್ಕರೆ, ರಕ್ತದ ಒತ್ತಡ ಮತ್ತು ಕಣ್ಣಿನ ರೋಗಗಳಾದ ದೃಷ್ಠಿದೋಷ, ಪೊರೆ, ಅಕ್ಷಿಪಟಲ ಕೀಳುವಿಕೆ, ಯಾವುದೇ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವಿಕೆ ಇವುಗಳ ಅಡ್ಡಿಯಿಲ್ಲದೆ ಕಣ್ಣಿನ ಪಾರದರ್ಶಕ ಪಟಲ ಆರೋಗ್ಯವಾಗಿದ್ದಲ್ಲಿ ನೇತ್ರದಾನ ಮಾಡಬಹುದು.
ರೇಬಿಸ್, ಸಿಫಿಲಿಸ್, ಏಡ್ಸ್, ಹೆಪಟೈಟಿಸ್ ಮುಂತಾದ ಕಾಯಿಲೆಗಳಿಂದ ಸಾಯುವ ವ್ಯೆಕ್ತಿ ನೇತ್ರದಾನ ಮಾಡುವಂತಿಲ್ಲ
ಮರಣ ಹೊಂದಿದವರು ನೇತ್ರದಾನಕ್ಕೆ ನೋಂದಣಿ ಮಾಡಿಸದಿದ್ದಲ್ಲಿ ಅವರ ಬಂಧುಗಳು ಮರಣ ಹೊಂದಿದವರ ನೇತ್ರದಾನಕ್ಕೆ ಸಮ್ಮತಿ ನೀಡಬಹುದು.
ಮರಣ ಹೊಂದಿದವರ ನೇತ್ರದಾನ ಮಾಡಲು ಹತ್ತಿರದ “ನೇತ್ರ ಭಂಡಾರ” / ನೇತ್ರ ತಜ್ಞರನ್ನು ಯಾವುದೇ ಸಮಯದಲ್ಲಾದರೂ ಸಂಪರ್ಕಿಸಬಹುದು. ಮರಣ ಹೊಂದಿದ 6 ಗಂಟೆಗಳಲ್ಲಿ ನೇತ್ರದಾನ ಮಾಡಬೇಕು. ಅಲ್ಲಿಯವರೆಗೂ ಮರಣ ಹೊಂದಿದವರ ರೆಪ್ಪೆಗಳನ್ನು ಮುಚ್ಚಿರಬೇಕು.
ನೇತ್ರಗಳನ್ನು ತೆಗೆಯಲು 15-20 ನಿಮಿಷಗಳು ಸಾಕು. ಇದನ್ನು ಮರಣ ಹೊಂದಿದವರು ಇದ್ದ ಜಾಗದಲ್ಲೇ ದಿನದ ಯಾವುದೇ ಸಮಯದಲ್ಲಾದರೂ ಮಾಡಲಾಗುವುದು. ಮತ್ತು ಇದರಿಂದ ಮುಖ ವಿಕಾರವಾಗುವುದಿಲ್ಲ ಹಾಗೂ ಇದಕ್ಕೆ ದಾನಿಗಳ ಬಂಧುಗಳು ಯಾವ ಖರ್ಚನ್ನು ಭರಿಸಬೇಕಿಲ್ಲ.
ನಮ್ಮ ದೇಶದಲ್ಲಿ ಅಂದಾಜು 15 ಲಕ್ಷ ಮಂದಿ ಕಣ್ಣಿನ ಪಾರದರ್ಶಕ ಪಟಲದ ತೊಂದರೆಯಿಂದ ಉಂಟಾದ ಕುರುಡುತನದಿಂದ ನರಳುತ್ತಿದ್ದಾರೆ. ಇದನ್ನು ಪಾರದರ್ಶಕ ಪಟಲದ ಕಸಿ ಮಾಡುವುದರ ಮೂಲಕ ಗುಣ ಪಡಿಸಬಹುದು.
ಯಾವುದೇ ನೇತ್ರ ಭಂಡಾರದಲ್ಲಿ ನೋಂದಣಿ ಮಾಡಿಸಿದ್ದರೂ ಮರಣ ಹೊಂದಿದ ಸ್ಥಳಕ್ಕೆ ಹತ್ತಿರದಲ್ಲಿರುವ ನೇತ್ರ ಭಂಡಾರಕ್ಕೆ ನೇತ್ರಗಳನ್ನು ನೀಡಬಹುದು. ನೇತ್ರ ಭಂಡಾರಗಳ ಬಗ್ಗೆ ಹೆಚ್ಚಿನ ಮಾಹಿತಿಗೆ 104 ಸಹಾಯವಾಣಿಗೆ ಕರೆ ಮಾಡಿ ತಿಳಿದು ಕೊಳ್ಳಬಹುದು.
ದಾನ ಮಾಡಿದ ಕಣ್ಣುಗಳನ್ನು ಮರಣದ ನಂತರವೇ ತೆಗೆಯಬೇಕು. ಜೀವಂತ ವ್ಯಕ್ತಿಯ ಕಣ್ಣುಗಳನ್ನು ದಾನಕ್ಕಾಗಿ ತೆಗೆಯಬಾರದು. ಯಾವುದೇ ಕೃತಕ ಅಥವಾ ಪ್ರಾಣಿಯ ಕಣ್ಣು ಮನುಷ್ಯನ ಕಣ್ಣಿಗೆ ಬದಲಾಗಿ ಉಪಯೋಗಿಸುವುದಿಲ್ಲ. ಅಂತರಾಷ್ಟ್ರೀಯ ನಿಯಮಗಳನುಸಾರ ದಾನಿಗಳ ಹಾಗೂ ದಾನ ಪಡೆದವರ ಹೆಸರುಗಳನ್ನು ನೇತ್ರ ಭಂಡಾರದಲ್ಲಿ ಗೌಪ್ಯವಾಗಿರಿಸಲಾಗುವುದು.
ನೇತ್ರದಾನಕ್ಕೆ ನೋಂದಣಿ ಮಾಡಿಸುವ ಮೊದಲು, ವಿಷಯದ ಬಗ್ಗೆ ನಿಮ್ಮ ಕುಟುಂಬದವರ ಸ್ನೇಹಿತರ ವಕೀಲರ ಹಾಗೂ ವೈದ್ಯರೊಡನೆ ಚರ್ಚಿಸುವುದು ಸೂಕ್ತ. ಏಕೆಂದರೆ ನಿಮ್ಮ ನೇತ್ರದಾನ ನಿಮ್ಮ ಮನೆಯವರ ಅರಿವಿಲ್ಲದೇ ಅಥವಾ ಅವರ ಮರೆವಿನಿಂದ ಸಾಧ್ಯವಾಗದೇ ಇರಬಹುದು.
ನಿಮ್ಮ ಸ್ನೇಹಿತರನ್ನು ಹಾಗೂ ಬಂಧುಗಳನ್ನು ನೇತ್ರದಾನಕ್ಕೆ ಪ್ರೇರೇಪಿಸಿ ಯಾವುದೇ ವ್ಯಕ್ತಿಯ ಸಾವಿನ ಸಂದರ್ಭದಲ್ಲಿ ನೇತ್ರದಾನಕ್ಕೆ ಅವಕಾಶವಿದೆಯೇ ಎಂದು ವಿಚಾರಿಸಿ ಇದರ ಬಗ್ಗೆ ಹತ್ತಿರದ ನೇತ್ರ ಭಂಡಾರವನ್ನು ಸಂಪರ್ಕಿಸಿ
ನೇತ್ರದಾನದ ನೋಂದಣಿ ಚೀಟಿಯನ್ನು ನಿಮ್ಮ ವೈದ್ಯರಿಂದ ಪೂರ್ಣಗೊಳಿಸಿ ಯಾವಾಗಲೂ ನಿಮ್ಮ ಕಿಸೆಯಲ್ಲೇ ಇಡಿ. ನಿಮ್ಮ ವಿಳಾಸ ಬದಲಾದಲ್ಲಿ ಅದನ್ನು ನೇತ್ರ ಭಂಡಾರಕ್ಕೆ ತಿಳಿಸಿ, ನಿಮ್ಮ ನೋಂದಣಿ ಸಂಖ್ಯೆಯನ್ನು ಪತ್ರದಲ್ಲಿ ನಮೂದಿಸುವುದನ್ನು ಮರೆಯಬೇಡಿ.
“ಒಬ್ಬ ವ್ಯಕ್ತಿಯು ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಠಿ ನೀಡುತ್ತದೆ” ನಿಮ್ಮ ನೇತ್ರಗಳನ್ನು ದಾನ ಮಾಡಿ ಅಂಧಕಾರದಲ್ಲಿ ಇರುವವರಿಗೆ ದೃಷ್ಠಿ ನೀಡಿ.
ಪ್ರಕಟಣೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ರಿ) ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಮಡಿಕೇರಿ ಕೊಡಗು ಜಿಲ್ಲೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08272-223444.
Breaking News
- *ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್ಶಿಪ್ : ಶಶಾಂಕ್ ರಾಜ್ಯಮಟ್ಟಕ್ಕೆ ಆಯ್ಕೆ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*
- *ನ.26ರಂದು ಸಿಎನ್ಸಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ಶಿಶು ಸಾಹಿತ್ಯದ ಪಿತಾಮಹ ಪಂಜೆ ಮಂಗೇಶರಾಯರು*
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*
- *ಹೆಗ್ಗಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
- *ಕೂತಿನಾಡು : ದೇವಾಲಯದ ಜೀರ್ಣೋದ್ಧಾರಕ್ಕೆ ಆರೋಡ ತಾಂಬೂಲ ಪ್ರಶ್ನೆ*
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*
- ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಅಕ್ಷರ ಜ್ಯೋತಿ ಯಾತ್ರೆ ಕುರಿತು ಉಪನ್ಯಾಸ : ವಿದ್ಯಾರ್ಥಿಗಳಲ್ಲಿ ಉತ್ತರ ಪ್ರೇರಣೆ, ಸ್ಫೂರ್ತಿ ಬೆಳೆಸಬೇಕು : ಬಸವಕುಮಾರ್ ಪಾಟೀಲ್*
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*