ಮಡಿಕೇರಿ ಸೆ.4 : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಣಿಕೊಪ್ಪ – ಬಾಳೆಲೆ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು/ಮಾರಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ತಿತಿಮತಿ ಗ್ರಾಮದ ನಿವಾಸಿಗಳಾದ ರಾಶಿಕ್ ಟಿ.ಎ (22), ಹಾಗೂ ಜುನೈದ್ ಸಿ.ಎಸ್ (23) ಎಂಬುವವರನ್ನು 107 ಗ್ರಾಂ ಗಾಂಜಾ ಮಾದಕ ವಸ್ತುವಿನೊಂದಿಗೆ ವಶಕ್ಕೆ ಪಡೆದರು.
ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಆರ್.ಮೋಹನ್ ಕುಮಾರ್, ಗೋಣಿಕೊಪ್ಪ ಸಿಪಿಐ ಗೋವಿಂದರಾಜು.ಎಂ.ಎ, ಪಿಎಸ್ಐ ರೂಪಾದೇವಿ ಬಿರಾದಾರ್, ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.