ಮಡಿಕೇರಿ ಸೆ.13 : ಪೊನ್ನಂಪೇಟೆಯ ಸರ್ವದೈವತ ಶಾಲೆಯಲ್ಲಿ ನಡೆದ ವಲಯ ಮಟ್ಟದ ಚೆಸ್ ಪಂದ್ಯಾವಳಿ ಯಲ್ಲಿ ಕಾವೇರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಬಿ.ಎಸ್. ಸೃಷ್ಟಿ ಭಾಗವಹಿಸಿ ವಿಜೇತರಾಗಿದ್ದಾರೆ.
ಬಾಲಕಿಯರ ವಿಭಾಗದ 14ವರ್ಷ ವಯೋಮಿತಿಯ ಕೆಳಪಟ್ಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲಾ ಮಟ್ಟದ ಸ್ಪರ್ಧೆ ಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಗೆ ಚೆಸ್ ತರಬೇತಿಯನ್ನು ರಾಷ್ಟ್ರೀಯ ಚೆಸ್ ತರಬೇತುದಾರ ಮಣಿ ನೀಡಿದ್ದಾರೆ.
ಶಾಲೆಯ ದೈಹಿಕ ಶಿಕ್ಷಕಿ ಮೋನಿಕಾ ಕಾವೇರಿ ಹಾಗೂ ಲಾವಣ್ಯ ವಿದ್ಯಾರ್ಥಿನಿಗೆ ಮಾರ್ಗದರ್ಶನ ನೀಡಿರುತ್ತಾರೆ.
ವಿಜೇತ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ, ಶಾಲಾ ಸಂಯೋಜಕರು, ಶಿಕ್ಷಕ ವೃಂದದವರು ಶ್ಲಾಘಿಸಿ , ಅಭಿನಂದಿಸಿ ,ಹಾರೈಸಿದ್ದಾರೆ.









