ಮಡಿಕೇರಿ ಸೆ.23 : ಭಾಗಮಂಡಲ ಕೆವಿಜಿ ಕೈಗಾರಿಕೆ ತರಬೇತಿ ಸಂಸ್ಥೆಯ 2023 -25 ನೇ ಸಾಲಿಗೆ ಪ್ರವೇಶ ಪಡೆದ ನೂತನ ತರಬೇತುದಾರರಿಗೆ ಸ್ವಾಗತ ಕೋರುವ ಮತ್ತು ಪೋಷಕರ ಸಭೆ ನಡೆಯಿತು.
ಭಾಗಮಂಡಲ ಆರಕ್ಷಕಠಾಣ ಅಧಿಕಾರಿ ಶೋಭಾ ಲಮಾಣಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ.ವಿ. ಶ್ರೀಕಾಂತ್ ವಿದ್ಯಾರ್ಥಿಗಳು ಮತ್ತು ಪೋಷಕರ ಪಾತ್ರ ಮತ್ತು ಸಂಸ್ಥೆಯ ನೀತಿ ನಿಯಮಗಳ ಬಗ್ಗೆ ವಿವರಿಸಿದರು.
ಕಿರಿಯ ತರಬೇತಿ ಅಧಿಕಾರಿ ಕೆ.ಪುನೀತ್ ಸಂಸ್ಥೆ ಮತ್ತು ತರಬೇತಿಯ ಮಾಹಿತಿ ನೀಡಿದರು.
ಕಿರಿಯ ತರಬೇತಿ ಅಧಿಕಾರಿ ಕೆ.ಜಯಪ್ರಕಾಶ್ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಎಂ.ಕೆ.ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ದರ್ಜೆ ಸಹಾಯಕ ಕೆ.ಟಿ.ಅರುಣ್ ವಂದಿಸಿದರು.