ಮಡಿಕೇರಿ ಸೆ.23 : ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಇತಿಹಾಸ ವಿಭಾಗದಿಂದ ಒಂದು ದಿನದ ಇತಿಹಾಸ ಕಾರ್ಯಗಾರ ನಡೆಯಿತು.
ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಳಕಂಡ ಸುಜಾತ ಮಾತನಾಡಿ, ಇತಿಹಾಸವು ಮಹಾನ್ ವ್ಯಕ್ತಿಯ ಜೀವನ, ಸಾಧನೆ, ಬಲಿದಾನ, ನಮ್ಮ ದೇಶದ ನಾಡು-ನುಡಿ, ಸಂಸ್ಕೃತಿಯನ್ನು ತಿಳಿಯಬೇಕಾದರೆ, ಇತಿಹಾಸದಿಂದ ಆಗುವ ಪ್ರಯೋಜನವನ್ನು ಅರಿಯಬೇಕಾದರೆ ಇತಿಹಾಸ ವನ್ನು ಓದಲೇಬೇಕೆಂಬುದನ್ನು ಮನವರಿಕೆ ಮಾಡಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ.ಆನಂದ್ ಕಾರ್ಲಾ ಮಾತನಾಡಿ, ಹಿಂದೆ ನಾವು ಹೇಗಿದ್ದೆವು ಎಂಬುದನ್ನು ತಿಳಿಯಬೇಕಾದರೆ ನಾವು ಇತಿಹಾಸವನ್ನು ಓದಲೇಬೇಕು, ರಾಷ್ಟ್ರದ ಅಭಿವೃದ್ಧಿಗೆ ಸ್ವಾತಂತ್ರ ಹೋರಾಟಗಾರ ಆದರ್ಶಗಳನ್ನು ಮೈ ಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಆರಂಭದಲ್ಲಿ ಕಲಾ ವಿಭಾಗದ ರಾಧಿಕಾ ಮತ್ತು ತಂಡದವರು ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥರು ಸಿ. ಪಿ.ಅನುಪಮ ಸ್ವಾಗತಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸೋನಿ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕೌಶಲ್ಯ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮುತ್ತಣ್ಣ ವಂದಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಚಾಲಕಿ ಡಾ. ಕೆ.ಜಿ.ವೀಣಾ, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಹಾಜರಿದ್ದರು.








