ವಿರಾಜಪೇಟೆ ಸೆ.23 : ವಿರಾಜಪೇಟೆಯ ಮೀನುಪೇಟೆಯಲ್ಲಿರುವ ಕೊಡಗು ಬಾಲಾವಲೀಕಾರ್ ಉತ್ತಮ ಜೀವನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷರಾದ ಬಿ.ಆರ್.ವಾಸುದೇವ, ಸಂಘದ ಅಭಿವೃದ್ಧಿಗೆ ಪ್ರತೀ ಸದಸ್ಯರು ಶ್ರಮಿಸಬೇಕೆಂದರು. ಮಾತ್ರವಲ್ಲದೆ ಸಮಾಜಮುಖಿ ದೃಷ್ಟಿಕೋನ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸದಸ್ಯರುಗಳು ನೀಡಿದ ಸಹಕಾರವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧನಾ ವರದಿಯನ್ನು ಓದಿ ಅಂಗೀಕರಿಸಲಾಯಿತು. ಬೈಲಾ ತಿದ್ದುಪಡಿಯು ನಡೆಯಿತು.
ಸಭೆಯಲ್ಲಿ ಸಂಘದ ಕಾರ್ಯದರ್ಶಿಗಳಾದ ಬಿ. ಆರ್. ಉದಯ ಶಂಕರ್, ಸೇರುದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.









