ವಿರಾಜಪೇಟೆ ಸೆ.23 : ಆರ್ಜಿ ಗ್ರಾಮದ ಪೆರಂಬಾಂಡಿಯಲ್ಲಿ ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ವತಿಯಿಂದ ಗಣೇಶ ಪ್ರತಿಷ್ಟಾಪನೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಪೆರಂಬಾಡಿ ಗ್ರಾಮದ ಸುತ್ತ ಮುತ್ತ ಇರುವ ಎಲ್ಲಾ ಸದಸ್ಯರನ್ನು ಒಟ್ಟು ಗೂಡಿಸಿ ಗಣಪತಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೆಂಗಳೂರಿನಲ್ಲಿ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೆರುಂಬಾಡಿ ನಿವಾಸಿ ಸುಬ್ರಹ್ಮಣಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಬಿ.ಎಂ.ಗಿರಿ, ಸದಸ್ಯರಾದ ವಿನೋದ್ ಥರ್ಮಲ್, ಬಿ.ಜಿ ನಾರಾಯಣ, ಸುಭಾಷ್, ಸನ್ನಿ, ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಮಣಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಿ.ಎಂ ಗಣೇಶ್, ಉದ್ಯಮಿ ಉಲ್ಲಾಸ್ ಶೇಟ್, ನಿವೃತ್ತ ಶಿಕ್ಷಕಿ ವಾರೀಜ, ಬೋಜಪ್ಪ, ವಿಶ್ವನಾಥ್, ಚುಪ್ಪ ನಾಗರಾಜ್, ಸೇರಿದಂತೆ ಎಲ್ಲಾ ಸಮಿತಿಯ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಉತ್ತಮ ರೀತಿಯಲ್ಲಿ ಸರ್ಕಾರದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗ್ರಾಮದ ಸದಸ್ಯರಾದ ಟಿ.ಕೆ ಕಾವೇರಪ್ಪ, ಬಿ.ಬಿ.ಈರಪ್ಪ, ಟಿ.ಕೆ ದೇವಯ್ಯ, ಸುರೇಶ್ ಬಾಲಕೃಷ್ಣ, ಜಿ.ಜಿ.ಬಾಬು, ಆಲಿ, ಉತ್ತಮ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಗ್ರಾಮದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪಿ.ಯು.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ರೇವತಿ, ಪೂಜಾ, ನೀಹಾಲ, ನೌಷಾದ್, ಕೀರ್ತನ, ನದೀಯ, ಸಚಿನ್, ರಮ್ಯ, ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಾದ ಪವಿತ್ರ, ದೀಕ್ಷಿತ, ಹೃತಿಕ, ಧನ್ಯ, ಐಶ್ವರ್ಯ, ಜೀಶ್ಮ ಪ್ರಕಾಶ್, ಸುರೇಶ, ಹಾಗೂ ಎಂ,ಕಾಂನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಗಾನವಿ ಅವರನ್ನು ಸನ್ಮಾನಿಸಲಾಯಿತು.
ನಂತರ ಸ್ಥಳೀಯ ಪ್ರತಿಭೆಗಳಿಂದ ಉತ್ತಮ ಮನರಂಜನಾ ಕಾರ್ಯಕ್ರಮಗಳು ನಡೆಯಿತು.









