ಮಡಿಕೇರಿ ಸೆ.24 : ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ನೂತನ ಅಧ್ಯಕ್ಷರಾಗಿ ಗೀತಾ ಗಿರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಎ.ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮಹಾಸಭೆಯಲ್ಲಿ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ.ಜಗದೀಶ್ ಸೋಮಯಾಜಿ, ಉಪಾಧ್ಯಕ್ಷರಾಗಿ ರಾಮಚಂದ್ರ ಮೂಗೂರು, ಜಂಟಿ ಕಾರ್ಯದರ್ಶಿಯಾಗಿ ಸವಿತಾ ಕೆ ಭಟ್, ಖಜಾಂಚಿಯಾಗಿ ಜಿ.ಆರ್.ರವಿಶಂಕರ್ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಜಯಶೀಲ ಪ್ರಕಾಶ್ ಹಾಗೂ ವೀಣಾ ಹೊಳ್ಳ, ಧಾರ್ಮಿಕ ಸಮಿತಿ ಸಂಚಾಲಕರಾಗಿ ನಿಧಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಶ್ರೀಶ ಭಟ್, ಕ್ರೀಡಾ ಸಮಿತಿ ಸಂಚಾಲಕರುಗಳಾಗಿ ಬಿ.ಕೆ.ಅರುಣ್ ಕುಮಾರ್, ಜೆ.ಡಿ.ಶಿವಶಂಕರ್ ಹಾಗೂ ಲಲಿತಾ ರಾಘವನ್, ಕಟ್ಟಡ ಸಮಿತಿಗೆ ಭಾರತೀಶ್ ಖಂಡಿಗೆ ಹಾಗೂ ಜೆ.ಡಿ.ಶಿವಶಂಕರ್, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರದ ನಿರ್ವಹಣೆಗೆ ಸವಿತಾ.ಕೆ ಬಟ್, ಮಂಜುನಾಥ ಎ.ವಿ ಹಾಗೂ ಪ್ರಭಾಕರ್ ನೆಲ್ಲಿತ್ತಾಯ, ಸದಸ್ಯತ್ವ ಅಭಿಯಾನಕ್ಕೆ ರಾಮಚಂದ್ರ ಮೂಗೂರು, ಬೈಲಾ ತಿದ್ದುಪಡಿ ಸಮಿತಿಗೆ ಜಿ.ಆರ್.ರವಿಶಂಕರ್ ಹಾಗೂ ನಿಕಟಪೂರ್ವ ಅಧ್ಯಕ್ಷ ಎ.ಗೋಪಾಲಕೃಷ್ಣ, ನಿಧಿ ಸಂಗ್ರಹಣೆಗೆ ಉಸ್ತುವಾರಿಗಳಾಗಿ ಡಿ.ಐ.ಪುರುಷೋತ್ತಮ ಹಾಗೂ ಅಶೋಕ್ ಪಿ.ವಿ ಅವರನ್ನು ನೇಮಿಸಲಾಯಿತು. ನಿಧಿಯ ವಿಶೇಷ ಆಹ್ವಾನಿತರಾಗಿ ಯೋಗೀಶ್ ಪಾಡಂತ್ತಯ, ಎ.ವಿ.ಮಂಜುನಾಥ್, ರಾಜಶೇಖರ್, ಅಶೋಕ್ ಪಿ.ವಿ.ಎಸ್. ಎಸ್.ಸಂಪತ್ ಕುಮಾರ್, ಮುರುಳಿಧರ್ ಹೆಚ್.ಆರ್ ಹಾಗೂ ಸುಬ್ರಹ್ಮಣ್ಯ ಕುಮಾರ್ ಅವರುಗಳನ್ನು ನೇಮಕ ಮಾಡಲಾಯಿತು.










