ಮಡಿಕೇರಿ ಸೆ.24 : ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ಸೆಪ್ಟಂಬರ್ 27 ರಂದು ಬುಧವಾರ ಸಾಧನೆ ಮಾಡಿದ ಶಿಕ್ಷಕರಿಗೆ ನೇಷನ್ ಬಿಲ್ಡಸ್೯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ವುಡ್ಸ್ ಸಂಸ್ಥೆಯ ಅಧ್ಯಕ್ಷ ಕೆ.ವಸಂತ್ ಕುಮಾರ್ ತಿಳಿಸಿದ್ದಾರೆ.
ನಗರದ ರೋಟರಿ ಸಭಾಂಗಣದಲ್ಲಿ ಅಂದು ಸಂಜೆ 6.30 ಗಂಟೆಗೆ ಆಯೋಜಿತ ಕಾಯ೯ಕ್ರಮದಲ್ಲಿ ಸಾಧಕ ಶಿಕ್ಷಕರನ್ನು ಕೂಡಿಗೆ ಕ್ರೀಡಾಶಾಲೆಯ ನಿವೖತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ಸನ್ಮಾನಿಸಲಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಬೊಯಿಕೇರಿ ಶಾಲೆಯ ಬಿ.ಟಿ. ಪೂಣೇ೯ಶ್, ಮೂನಾ೯ಡು ಸಕಾ೯ರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿ.ಕೆ.ಲಲಿತಾ, ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕೆ.ಜೆ.ದಿವಾಕರ್, ಮೂನಾ೯ಡು ಪ್ರೌಡಶಾಲೆಯ ನಿವೖತ್ತ ದೈಹಿಕ ಶಿಕ್ಷಕ ಎ.ಜಿ. ಗಣೇಶ್, ಮಡಿಕೇರಿಯ ನಿವೖತ್ತ ಶಿಕ್ಷಕಿ ಕಸ್ತೂರಿ ಗೋವಿಂದಮ್ಮಯ್ಯ, ಅವರನ್ನು ಸನ್ಮಾನಿಸಲಾಗುತ್ತದೆ. ಕಾಯ೯ಕ್ರಮದಲ್ಲಿ ರೋಟರಿ ವಲಯ ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ವುಡ್ಸ್ ಕಾಯ೯ದಶಿ೯ ಹರೀಶ್ ಕಿಗ್ಗಾಲು ಹಾಜರಿರುತ್ತಾರೆ ಎಂದು ರೋಟರಿ ವುಡ್ಸ್ ಪ್ರಕಟಣೆ ತಿಳಿಸಿದೆ.










