ಮಡಿಕೇರಿ ಸೆ.24 : ವಿರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಪಟ್ರಪಂಡ ಗೀತಾ ಬೆಳ್ಳಿಯಪ್ಪ ಹಾಗೂ ಉಪಾಧ್ಯಕ್ಷರಾಗಿ ಸಬಿತಾ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಆಶಾ ಚಿಣ್ಣಪ್ಪ, ಉದಿಯಂಡ ಪೊನ್ನಮ್ಮ, ಕುಸುಮ ಸೋಮಣ್ಣ, ಜಯ ಲೀಲಾ ಸತೀಶ್, ಪಿ.ಕೆ.ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್.ಭಾರತಿ, ಬಿ.ಬಿ.ಯಶೋಧ ಬಾಬು, ಹೆಚ್.ಆರ್.ಪುಷ್ಪ ವಾಸು ಹಾಗೂ ಪುಷ್ಪ ಐತ್ತಪ್ಪ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕರಾದ ಆಶಾ ಪಿ. ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.











